»   » ತೂಗುದೀಪ ಕುಟುಂಬದವರ ಹಚ್ಚೆಯನ್ನೇ ಹಾಕಿಸಿಕೊಂಡ 'ಡಿ ಬಾಸ್' ಭಕ್ತ

ತೂಗುದೀಪ ಕುಟುಂಬದವರ ಹಚ್ಚೆಯನ್ನೇ ಹಾಕಿಸಿಕೊಂಡ 'ಡಿ ಬಾಸ್' ಭಕ್ತ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿ ಬಳಗ ಹೆಚ್ಚಾಗಿತ್ತಿದೆ. ಈ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಾದ ಬೆಳವಣಿಗೆಯನ್ನ ನೋಡಿದರೆ ತಿಳಿಯುತ್ತೆ ಡಿ ಬಾಸ್ ಎಷ್ಟು ಜನರ ಅಭಿಮಾನ ಮತ್ತು ಪ್ರೀತಿಯನ್ನ ಸಂಪಾದನೆ ಮಾಡಿದ್ದಾರೆ ಎನ್ನುವುದು.

ದರ್ಶನ್ ಅವರ ಹೆಸರನ್ನ ಅವರ ಪೋಟೋವನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹುಟ್ಟುಹಬ್ಬದ ದಿನ ಹಚ್ಚೆ ಹಾಕಿಸಿಕೊಳ್ಳುವವರನ್ನ ಭೇಟಿ ಮಾಡಲು ಇಷ್ಟವಾಗುವುದಿಲ್ಲ ಎನ್ನುವ ಮಾತನ್ನ ಖುದ್ದು ದರ್ಶನ್ ಅವರೇ ತಿಳಿಸಿದ್ದರು.

ದರ್ಶನ್ ಯಜಮಾನ ಚಿತ್ರದಲ್ಲಿ ಕನ್ನಡದ ಸ್ಟಾರ್ ಕಲಾವಿದರು

ಆದರೂ ಕೂಡ ಅಭಿಮಾನಿಗಳು ಮಾತ್ರ ಹಚ್ಚೆಯನ್ನ ಹಾಕಿಸಿಕೊಳ್ಳುವುದನ್ನ ನಿಲ್ಲಿಸುತ್ತಿಲ್ಲ. ಅಭಿಮಾನಿಯೊಬ್ಬರು ಒಂದಲ್ಲ ಎರಡಲ್ಲ ಇಡೀ ತೂಗುದೀಪ ಕುಟುಂಬಸ್ಥರ ಹಚ್ಚೆಯನ್ನ ಮೈ ಮೇಲೆ ಹಾಕಿಸಿಕೊಂಡಿದ್ದಾರೆ, ಯಾರು ಆತ? ಹೇಗಿದೆ ಹಚ್ಚೆ ಸಂಪೂರ್ಣ ಮಾಹಿತಿ ಇಲ್ಲಿ ಮುಂದೆ ಓದಿ.

ಅಭಿಮಾನಿಯ ಮೈಮೇಲೆ ದರ್ಶನ್ ಕುಟುಂಬ

ಸಾಮಾನ್ಯವಾಗಿ ದರ್ಶನ್ ಅವರ ಹೆಸರು ಹಾಗೂ ಅವರ ಸಹಿ ಅಥವಾ ಸಿನಿಮಾ ಹೆಸರನ್ನ ಹಚ್ಚೆ ಹಾಕಿಸಿಕೊಳ್ಳುವುದನ್ನ ನೋಡಿರುತ್ತೀರಾ. ಆದರೆ ಅಭಿಮಾನಿಯೊಬ್ಬರು ಇಡೀ ಕುಟುಂಬದ ಭಾವಚಿತ್ರದ ಪೋಟೋಗಳನ್ನ ಹಚ್ಚೆಯ ರೂಪದಲ್ಲಿ ಹಾಕಿಸಿಕೊಂಡಿದ್ದಾರೆ.

ಕೈ ಮೇಲೆ ಮೂಡಿದ ತೂಗುದೀಪ ಶ್ರೀನಿವಾಸ್

ಒಂದು ಕೈ ಮೇಲೆ ದರ್ಶನ್ ಅವರ ಭಾವಚಿತ್ರ ಹಾಕಿಸಿಕೊಂಡಿರುವ ಅಭಿಮಾನಿ ಇನ್ನೊಂದು ಕೈ ನಲ್ಲಿ ತೂಗುದೀಪ ಶ್ರೀನಿವಾಸ್ ಅವರ ಹಚ್ಚೆ ಹಾಕಿಕೊಂಡಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಹಚ್ಚೆ ಹಾಕಿಸಿಕೊಳ್ಳುವುದು ಟ್ರೆಂಡ್ ಆಗಿದೆ.

ಹಚ್ಚೆಯಾಗಿ ಮೂಡಿಬಂತು ಮೀನಾ ಅವರ ಚಿತ್ತಾರ

ಇಲ್ಲಿಯ ತನಕ ಮೀನಾ ತೂಗುದೀಪ ಅವರ ಹಚ್ಚೆಯನ್ನ ಯಾರೂ ಕೂಡ ಹಾಕಿಸಿಕೊಂಡವರಿಲ್ಲ. ಆದರೆ ಈತ ಇದೇ ಮೊದಲ ಬಾರಿಗೆ ಮೀನಾ ತೂಗುದೀಪ ಅವರ ಹಚ್ಚೆ ಹಾಕಿಕೊಂಡಿದ್ದಾರೆ.

ವೈರಲ್ ಆಗುತ್ತಿವೆ ಪೋಟೋಗಳು

ಮೈಸೂರಿನ ಮೂಲದ ಅಭಿ ರಾಜ್ ಚಕ್ರವರ್ತಿ ಅನ್ನುವ ಅಭಿಮಾನಿ ದರ್ಶನ್, ತೂಗುದೀಪ ಶ್ರೀನಿವಾಸ್, ಮೀನಾ ತೂಗುದೀಪ್ ಹಾಗೂ ದರ್ಶನ್ ಅವರ ಸಹಿಯನ್ನ ಕೈಗಳ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಅಭಿಮಾನಿ. ಸದ್ಯ ಈ ಟ್ಯಾಟೂ ಹಾಕಿಸಿರುವ ಫೋಟೋಗಳು ವೈರಲ್ ಆಗಿವೆ.

English summary
Kannada actor Darshan mysore Darshan fan inked a tattoo of Darshan, Thugudippe Srinivas and Meena Thugudeeppa .that tattoo photo goes viral in social media

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada