For Quick Alerts
  ALLOW NOTIFICATIONS  
  For Daily Alerts

  ದರ್ಶನ್ ತಂದೆ ಹೆಸರಿನಲ್ಲಿ 'ದೊನ್ನೆ ಬಿರಿಯಾನಿ' ಹೋಟೆಲ್ ತೆರೆದ ಅಭಿಮಾನಿ

  |

  ಬಿರಿಯಾನಿ ತಿನ್ಬೇಕು ಅಂತಾ ಬೆಂಗಳೂರು ಒಂದು ಸುತ್ತು ಹಾಕಿದ್ರೆ ಹಲವು ಫೇಮಸ್ ಹೋಟೆಲ್‌ಗಳು ಸಿಗುತ್ತದೆ. ಅದರಲ್ಲೂ ದೊನ್ನೆ ಬಿರಿಯಾನಿಗೆ ಖ್ಯಾತಿಯಾಗಿರುವ ಹೋಟೆಲ್‌ಗಳು ಹೆಚ್ಚಿವೆ. ಇದೀಗ, ಸಿಲಿಕಾನ್ ಸಿಟಿಯಲ್ಲಿ ತೂಗುದೀಪ ದೊನ್ನೆ ಬಿರಿಯಾನಿ ಸಿಗಲಿದೆ.

  ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯೊಬ್ಬರು ಬೆಂಗಳೂರಿನ ಆರ್ ಆರ್ ನಗರದಲ್ಲಿ ದೊನ್ನೆ ಬಿರಿಯಾನಿ ಹೋಟೆಲ್ ತೆರೆದಿದ್ದು, ಅದಕ್ಕೆ ತೂಗುದೀಪ ಎಂದು ಹೆಸರಿಟ್ಟಿದ್ದಾರೆ.

  ದಶಕವೇ ಕಳೆದರು ಕುಂದಿಲ್ಲ ಅಣ್ಣಾವ್ರ ಗರಿಮೆ: ಈಗಲೂ ನಂಬರ್ 1 ನಟ ಅವರೇ!

  ದರ್ಶನ್ ಬಳಿ ಇರುವ ಕಾರುಗಳ ಬೆಲೆ ಎಷ್ಟು ಗೊತ್ತಾ? | Darshan Car collection | Filmibeat Kannada

  ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿ ಬಾಸ್ ಭಕ್ತರು ಫುಲ್ ಖುಷ್ ಆಗಿದ್ದಾರೆ. ತೂಗುದೀಪ ಹೆಸರಿನಲ್ಲಿ ದೊನ್ನೆ ಬಿರಿಯಾನಿ ಹೋಟೆಲ್ ಸ್ಥಾಪಿಸಿ ಅಭಿಮಾನ ಮೆರೆದಿರುವ ಬಗ್ಗೆ ಮೆಚ್ಚುಗೆ ಸಹ ವ್ಯಕ್ತವಾಗಿದೆ.

  ಅಂದ್ಹಾಗೆ, ಅಣ್ಣಾವ್ರು ಅಭಿಮಾನಿಯೊಬ್ಬರು ಬೆಂಗಳೂರು ಹಾಗೂ ಬೇರೆ ಕಡೆಗಳಲ್ಲಿ ಡಾ ರಾಜ್ ದೊನ್ನೆ ಬಿರಿಯಾನಿ ಹೋಟೆಲ್ ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ.

  ರಾಜ್ ಬಿರಿಯಾನಿ ಹಾಗೂ ತೂಗುದೀಪ ದೊನ್ನೆ ಬಿರಿಯಾನಿ ಸವಿಯಲು ನೀವು ಮಿಸ್ ಮಾಡಿಕೊಳ್ಳಬೇಡಿ. ಸಮಯ ಸಿಕ್ಕರೆ ಸ್ಟಾರ್ ನಟರ ಹೆಸರಿನ ಹೋಟೆಲ್‌ಗೆ ಭೇಟಿ ನೀಡಿ ಬಿರಿಯಾನಿ ತಿನ್ನಿ.

  English summary
  Challenging Star Darshan Fan named his restaurant after veteran actor Thoogudeepa Srinivas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X