ಅಭಿಮಾನಿಯ ಅಳಲಿಗೆ ಕರಗಿ ವಿಡಿಯೋ ಕಾಲ್ ಮಾಡಿ ಮಾತನಾಡಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಮಾತನಾಡಬೇಕು, ಅವರನ್ನು ನೋಡಬೇಕು ಎಂದು ಸಾವಿರಾರು ಅಭಿಮಾನಿಗಳು ಕಾಯುತ್ತಿರುತ್ತಾರೆ. ಒಂದಿಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಕಿಚ್ಚನನ್ನು ಸಂಪರ್ಕ ಮಾಡಿ ಮಾತನಾಡುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿ, ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡಿ ಅವರ ಮನ ತಣಿಸುತ್ತಾರೆ.

Recommended Video

ಅಭಿಮಾನಿಗೆ ಧೈರ್ಯ ತುಂಬಿದ Kiccha Sudeep | Filmibeat Kannada

ಕಷ್ಟದಲ್ಲಿರುವ ಅಭಿಮಾನಿಗಳನ್ನು ಮನೆಗೆ ಅಥವಾ ಶೂಟಿಂಗ್ ಸೆಟ್ ಗೆ ಕರೆಸಿ ಮಾತನಾಡಿಸಿ, ಅವರ ಜೊತೆ ಸಮಯ ಕಳೆದು ಅವರಿಗೆ ಧೈರ್ಯ ತುಂಬಿ ಪ್ರೀತಿಯಿಂದ ಕಳುಹಿಸಿದ ಉದಾಹರಣೆಯು ಇದೆ. ಇದೀಗ ಸುದೀಪ್ ಅಭಿಮಾನಿಯೊಬ್ಬರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಮುಂದೆ ಓದಿ..

ಸುದೀಪ್ ರನ್ನು ನೋಡಬೇಕು ಎನ್ನುತ್ತಿರುವ ಅಭಿಮಾನಿ

ಸುದೀಪ್ ರನ್ನು ನೋಡಬೇಕು ಎನ್ನುತ್ತಿರುವ ಅಭಿಮಾನಿ

ಸುದೀಪ್ ಅಪ್ಪಟ ಅಭಿಮಾನಿಯೊಬ್ಬ ಕಿಚ್ಚನನ್ನು ನೋಡಬೇಕು, ಸಾಯುವುದರೊಳಗೆ ಒಮ್ಮೆ ಸುದೀಪ್ ನೋಡಿ ಅವರ ಜೊತೆ ಮಾತನಾಡಬೇಕು ಎಂದು ಅಂಗಾಲಾಚಿದ್ದ. ಅಪಂಡಿಸ್ ಆಪರೇಶನ್ ಆಗಬೇಕು ಅದರೊಳಗೆ ಸುದೀಪ್ ಅವರನ್ನು ನೋಡಬೇಕು, ಆಪರೇಶನ್ ಆದಮೇಲೆ ಏನ್ ಆಗುತ್ತೊ ಗೊತ್ತಿಲ್ಲ ಎಂದು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದರು.

ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ಸುದೀಪ್

ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ಸುದೀಪ್

ಅಭಿಮಾನಿಯ ಈ ವಿಡಿಯೋ ನೋಡಿದ ಸುದೀಪ್ ನಂತರ ಆ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಸುದೀಪ್ ವಿಡಿಯೋ ಕಾಲ್ ಮಾಡುತ್ತಿದ್ದಹಾಗೆ ಕಿಚ್ಚನನ್ನು ನೋಡಿ ಭಾವುಕರಾದ ಅಭಿಮಾನಿ "ನಿಮ್ಮನ್ನು ನೋಡಬೇಕು, ನಿಮ್ಮ ದೊಡ್ಡ ಅಭಿಮಾನಿ ನಾನು, ನನಗೆ ಆರೋಗ್ಯ ಸರಿ ಇಲ್ಲ. ಅಂಪಡಿಸ್ ಆಗಿದೆ. ನನಗೆ ಯಾವಾಗ ಏನ್ ಆಗುತ್ತೊ ಗೊತ್ತಿಲ್ಲ ಆದರೊಳಗೆ ನಿಮ್ಮನ್ನು ಒಮ್ಮೆ ನೋಡಬೇಕು. ನಿಮ್ಮ ಕಾಲಿಗೆ ಬೀಳುತ್ತೇನೆ ಅವಕಾಶ ಮಾಡಿಕೊಡಿ" ಎಂದು ಕಿಚ್ಚನ ಬಳಿ ಕೇಳಿಕೊಂಡಿದ್ದಾರೆ.

ನನ್ನನ್ನು ನೋಡುವ ವ್ಯವಸ್ಥೆ ಮಾಡಿಸುತ್ತೇನೆ

ನನ್ನನ್ನು ನೋಡುವ ವ್ಯವಸ್ಥೆ ಮಾಡಿಸುತ್ತೇನೆ

ಅಭಿಮಾನಿಯ ಬೇಡಿಕೆಗೆ ಇಲ್ಲ ಎನ್ನದ ಕಿಚ್ಚ "ಎಲ್ಲರೂ ಮನೆಯಲ್ಲಿಯೆ ಲಾಕ್ ಆಗಿರುವುದರಿಂದ ಈಗ ಭೇಟಿಯಾಗಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿಯೂ ನನ್ನ ಭೇಟಿಗೆ ವ್ಯವಸ್ಥೆ ಮಾಡಿಸುತ್ತೇನೆ" ಎಂದು ಸಮಾಧಾನ ಮಾಡಿದ್ದಾರೆ. ಅಲ್ಲದೆ ಆರೋಗ್ಯ ವಿಚಾರಿಸಿದ್ದಾರೆ.

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಕಿಚ್ಚನನ್ನು ನೋಡುವ ಸಂತಸಕ್ಕೆ ಅಭಿಮಾನಿಗಳೆಲ್ಲ ಗುಂಪಾಗಿ ನಿಂತುಕೊಂಡಿದ್ದರು. ಹಾಗಾಗಿ ಸುದೀಪ್ ಎಲ್ಲರೂ ಮಾಸ್ಕ್ ಧರಿಸಿ, ಗುಂಪುಕಟ್ಟಿಕೊಂಡು ಇರಬೇಡಿ ಎಂದಿದ್ದಾರೆ. ಆರೋಗ್ಯದ ಕಡೆ ಗಮನಕೊಡಿ, ಧೈರ್ಯವಾಗಿರಿ ಎಂದು ವಿಡಿಯೋ ಕಾಲ್ ನಲ್ಲಿ ಅಭಿಮಾನಿಗೆ ಹೇಳಿದ್ದಾರೆ.

More from Filmibeat

English summary
Sudeep fan speaks to him before undergoing operation for appendicitis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X