For Quick Alerts
  ALLOW NOTIFICATIONS  
  For Daily Alerts

  ಪುನೀತ್-ಕೃಷ್ಣ ಚಿತ್ರದ ಕುರಿತು ಥ್ರಿಲ್ಲಿಂಗ್ ಸುದ್ದಿ: ಸುಳ್ಳು ಎಂದ 'ಹೆಬ್ಬುಲಿ' ನಿರ್ದೇಶಕ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ಜೇಮ್ಸ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. 'ಯುವರತ್ನ' ಯಶಸ್ಸಿನ ಬಳಿಕ ಚೇತನ್ ಕುಮಾರ್ ಜೊತೆ 'ಜೇಮ್ಸ್' ಆರಂಭಿಸಿರುವ ಅಪ್ಪು, ಅದಾದ ಬಳಿಕ ಹೆಬ್ಬುಲಿ ಕೃಷ್ಣ ನಿರ್ದೇಶನದಲ್ಲಿ ಹೊಸ ಪ್ರಾಜೆಕ್ಟ್‌ಗೆ ಚಾಲನೆ ಕೊಡಲಿದ್ದಾರೆ.

  'ಪ್ರೊಡಕ್ಷನ್ 2' ಹೆಸರಿನಲ್ಲಿ ಈ ಚಿತ್ರದ ಡಿಜಿಟಲ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಕುತೂಹಲ ಹೆಚ್ಚಿಸಿದೆ. ಇದೀಗ, 'ಹೆಬ್ಬುಲಿ' ಕೃಷ್ಣ-ಪವರ್ ಸ್ಟಾರ್ ಸಿನಿಮಾದ ಬಗ್ಗೆ ಥ್ರಿಲ್ಲಿಂಗ್ ಸಮಾಚಾರವೊಂದು ಚರ್ಚೆಯಾಗುತ್ತಿದೆ. ಅಪ್ಪು-ಕೃಷ್ಣ ಜೋಡಿಯ ಚಿತ್ರದ ಟೈಟಲ್ ಅಂತಿಮವಾಗಿದೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ ಈ ಸುದ್ದಿ ಸುಳ್ಳು ಎಂದು ಕೃಷ್ಣ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ಪುನೀತ್ ಚಿತ್ರದ ಹೆಸರು ಸಾಮ್ರಾಟ್?

  ಪುನೀತ್ ಚಿತ್ರದ ಹೆಸರು ಸಾಮ್ರಾಟ್?

  ಪುನೀತ್ ರಾಜ್ ಕುಮಾರ್ ಮತ್ತು ಕೃಷ್ಣ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ 'ಸಾಮ್ರಾಟ್' ಎಂದು ಶೀರ್ಷಿಕೆ ಅಂತಿಮಗೊಳಿಸಲಾಗಿದೆ ಎಂಬ ಸುದ್ದಿ ವೈರಲ್ ಆಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. 'ಸಾಮ್ರಾಟ್' ಸಖತ್ ಪವರ್‌ಫುಲ್ ಆಗಿದೆ ಎಂದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  ಪುನೀತ್ ಜೊತೆಗೆ ಮತ್ತೊಂದು ಸಿನಿಮಾ ಘೋಷಿಸಿದ ಹೊಂಬಾಳೆ: ನಿರ್ದೇಶಕ ಯಾರು?ಪುನೀತ್ ಜೊತೆಗೆ ಮತ್ತೊಂದು ಸಿನಿಮಾ ಘೋಷಿಸಿದ ಹೊಂಬಾಳೆ: ನಿರ್ದೇಶಕ ಯಾರು?

  ಸುಳ್ಳು ಎಂದ ನಿರ್ದೇಶಕ ಕೃಷ್ಣ

  ಸುಳ್ಳು ಎಂದ ನಿರ್ದೇಶಕ ಕೃಷ್ಣ

  ''ಪುನೀತ್ ಜೊತೆಗಿನ ಚಿತ್ರಕ್ಕೆ ಸಾಮ್ರಾಟ್ ಎಂದು ಟೈಟಲ್ ಅಂತಿಮವಾಗಿಲ್ಲ. ಇದು ಸುಳ್ಳು ಸುದ್ದಿ. ಇಂತಹ ಸುದ್ದಿಗಳನ್ನು ದಯವಿಟ್ಟು ಪ್ರಚಾರ ಮಾಡಬೇಡಿ. ನಾವೇ ಅಧಿಕೃತವಾಗಿ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ. ಶೀಘ್ರದಲ್ಲೇ ಪ್ರಕಟಿಸುತ್ತೇವೆ'' ಎಂದು ಕೃಷ್ಣ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

  ರಾ ಏಜೆಂಟ್ ಪಾತ್ರದಲ್ಲಿ ಅಪ್ಪು

  ರಾ ಏಜೆಂಟ್ ಪಾತ್ರದಲ್ಲಿ ಅಪ್ಪು

  ಕೃಷ್ಣ ನಿರ್ದೇಶಿಸಲಿರುವ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ 'ರಾ ಏಜೆಂಟ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಭಾರತದ ಗುಪ್ತಚರ ವ್ಯವಸ್ಥೆಯ ಸುತ್ತಾ ಕಥೆ ಮಾಡಲಾಗಿದ್ದು, ಅಪ್ಪು ಅಭಿಮಾನಿಗಳಿಗೆ ಪಕ್ಕಾ ಥ್ರಿಲ್ಲಿಂಗ್ ಮನರಂಜನೆ ಕೊಡಲಿದೆ.

  ಅಣ್ಣಾವ್ರ ಆ ಸೂಪರ್ ಹಿಟ್ ಚಿತ್ರ ಪುನೀತ್‌ಗೆ ಇಷ್ಟ ಆಗಿರಲಿಲ್ಲವಂತೆಅಣ್ಣಾವ್ರ ಆ ಸೂಪರ್ ಹಿಟ್ ಚಿತ್ರ ಪುನೀತ್‌ಗೆ ಇಷ್ಟ ಆಗಿರಲಿಲ್ಲವಂತೆ

  Sudha Murty ಪ್ರಕಾರ ಸಿನಿಮಾವನ್ನ ಥಿಯೇಟರ್ನಲ್ಲೇ ನೋಡ್ಬೇಕು ಯಾಕೆ ಗೊತ್ತಾ? | Oneindia Kannada
  ಕೃಷ್ಣ ಎರಡನೇ ಪ್ರಾಜೆಕ್ಟ್

  ಕೃಷ್ಣ ಎರಡನೇ ಪ್ರಾಜೆಕ್ಟ್

  ಗಜಕೇಸರಿ, ಹೆಬ್ಬುಲಿ, ಪೈಲ್ವಾನ್ ಅಂತಹ ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ, ತಮ್ಮ ಬ್ಯಾನರ್‌ನಲ್ಲಿ ಎರಡನೇ ಚಿತ್ರ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುಂಚೆ 'ಪೈಲ್ವಾನ್' ಚಿತ್ರಕ್ಕೆ ಕೃಷ್ಣ ಬಂಡವಾಳ ಹಾಕಿದ್ದರು. ಈಗ ಪುನೀತ್ ಚಿತ್ರ ನಿರ್ಮಿಸುತ್ತಿದ್ದಾರೆ.

  English summary
  Fan tweet Puneeth Rajkumar and Krishna Combo Movie Titled as Samrat, Krishna Says this is fake news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X