twitter
    For Quick Alerts
    ALLOW NOTIFICATIONS  
    For Daily Alerts

    ದೇವರಿಗಿಂತ ಕಡಿಮೆ ಇಲ್ಲ ಅಪ್ಪು: ಪುನೀತ್‌ ರಾಜ್‌ಕುಮಾರ್‌ ಸಮಾಧಿ ಬಳಿ ಅಭಿಮಾನಿ ವಿವಾಹ!

    |

    ಬೆಂಗಳೂರಿನಲ್ಲಿ ಅಪ್ಪು ಅಭಿಮಾನಿಗಳ ಮೆರವಣಿಗೆಯೇ ಸಾಗಿದೆ. ಪುನೀತ್‌ ರಾಜ್‌ಕುಮಾರ್‌ ಸಮಾಧಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ದಿನೇದಿನೇ ಸಾವಿರಾರು ಮಂದಿ ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಮಳೆ, ಗಾಳಿ, ಬಿಸಿಲು ಎನ್ನದೆ ತಾಸುಗಟ್ಟಲೆ ಸಾಲುಗಟ್ಟಿ ನಿಂತು ಪುನೀತ್‌ ರಾಜ್‌ಕುಮಾರ್‌ ಸಮಾಧಿಗೆ ನಮಸ್ಕರಿಸಿ ಹೋಗುತ್ತಿದ್ದಾರೆ. ಅಪ್ಪು ಸಮಾಧಿಗೆ ಹರಿದು ಬರುತ್ತಿರುವಂತಹ ಜನ ಸಂಖ್ಯೆ ಹೆಚ್ಚುತ್ತಲೇ ಇದೆ ಹೊರತು ಕಡಿಮೆ ಆಗಿಲ್ಲ.

    ಈ ನಡುವೆ ಪರಮಾತ್ಮನ ಸಮಾಧಿ ಮುಂದೆ ಸಪ್ತಪದಿ ತುಳಿಯುವುದಕ್ಕೆ ನವ ಜೋಡಿ ಒಂದು ಸಿದ್ಧವಾಗಿದೆ. ಅಪ್ಪು ಸಮಾಧಿಯ ಮುಂದೆ ಮದುವೆ ಆಗಬೇಕೆಂಬ ಆಸೆಯಿಂದ ಜೋಡಿಯೊಂದು ಬೆಂಗಳೂರಿನತ್ತ ಬಂದಿದೆ. ಅಪ್ಪು ಸಮಾಧಿ ಬಳಿಯೇ ನವಜೀವನಕ್ಕೆ ಕಾಲಿಡಲು ವಧು-ವರ ಇಬ್ಬರೂ ಸಿದ್ಧವಾಗಿ ಬಂದು ಬಿಟ್ಟಿದ್ದಾರೆ. ಗಂಗಾ ಮತ್ತು ಗುರುಪ್ರಸಾದ್ ಎನ್ನುವ ಈ ಜೋಡಿ ಬಳ್ಳಾರಿಯವರು. ಅಪ್ಪು ಸಮಾಧಿ ಮುಂದೆಯೇ ಮದುವೆಯಾಗಬೇಕು ಎಂಬ ನಿರ್ಧಾರ ಮಾಡಿದೆ ಈ ಜೋಡಿ. ಇದಕ್ಕೆ ಕುಟುಂಬಸ್ಥರು ಸಹ ಎರಡು ಮಾತಿಲ್ಲದೆ ಒಪ್ಪಿದ್ದಾರೆ. ಅಲ್ಲಿ ಮದುವೆಯಾಗಲು ಅವಕಾಶ ನೀಡುವಂತೆ ಈ ಜೋಡಿ ಶಿವ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರ ಬಳಿ ಮನವಿ ಮಾಡಿತ್ತು. ಗಂಗಾ ಮತ್ತು ಗುರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಸಮಾಧಿ ಮುಂದೆಯೇ ವೈವಾಹಿಕ ಜೀವನಕ್ಕೆ ಕಾಲಿಡಬೇಕು ಎಂದು ನಿರ್ಧರಿಸಿಬಿಟ್ಟಿದ್ದಾರೆ. ಇವರ ಈ ಆಸೆಗೆ ದೊಡ್ಮನೆ ಅಡ್ಡಿ ಮಾಡಿಲ್ಲ. ಅವರ ಆಸೆ ಅಂತೆಯೇ ಅಪ್ಪು ಸಮಾಧಿ ಬಳಿ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಮತ್ತು ಶಿವ ರಾಜ್‌ಕುಮಾರ್ ಒಪ್ಪಿಗೆ ನೀಡಿ ಜೋಡಿಗೆ ಒಳ್ಳೆದಾಗಲಿ ಎಂದು ಶುಭಕೋರಿದ್ದಾರೆ.

    ಗುಣದಲ್ಲಿ ಅಪ್ಪುಗಿಂತ ದೇವರಿಲ್ಲ ಎಂದ ಅಭಿಮಾನಿ!

    'ಹುಟ್ಟಿದಾಗಿನಿಂದಲೂ ಅಪ್ಪು ಅವರ ಅಪ್ಪಟ ಅಭಿಮಾನಿ. ಅವರಂತೆಯೇ ಡಾನ್ಸ್‌ ಮಾಡುತ್ತಿದ್ದೆ. ನಾನು ಮದುವೆಯಾಗಿ ಅವರ ಮನೆಗೆ ಹೋಗಿ ಭೇಟಿ ಮಾಡಬೇಕು ಎಂದು ಕೊಂಡಿದ್ದೆ. ಆದರೆ ಈ ರೀತಿ ನಡೆದು ಹೋಗಿದೆ. ಹಾಗಾಗಿ ಅವರ ಸಮಾಧಿ ಬಳಿಯೇ ಮದುವೆ ಆಗಬೇಕು ಎಂದು ನಿರ್ಧರಿಸಿದ್ದೇವೆ. ದೇವಸ್ಥಾನದ ಬಳಿ ಮದುವೆ ಆಗಬೇಕು ಎನ್ನುವ ಆಸಕ್ತಿ ಇಲ್ಲ. ಅಪ್ಪು ಅವರೇ ನಮಗೆ ದೇವರು ಇದ್ದ ಹಾಗೆ. ಹಾಗಾಗಿ ಅವರ ಸಮಾಧಿ ಮುಂದೆಯೇ ಮದುವೆ ಆಗಬೇಕು ಎಂದು ನಿರ್ಧರಿಸಿದ್ದೇವೆ. ಕುಟುಂಬಸ್ಥರೊಂದಿಗೆ ಮಾತನಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ' ಎಂದು ಗುರುಪ್ರಸಾದ್‌ ಹೇಳಿದ್ದಾರೆ.

    Fan Wants To Marriege In Front Of Puneeth Rajkumar Memorial

    ವಧು ಗಂಗಾ ಕೂಡ ಅಪ್ಪು ಅವರಿಗಿಂತ ದೇವರಿಲ್ಲ ಎಂದಿದ್ದಾರೆ. 'ದೇವಸ್ಥಾನದಲ್ಲಿ ಎಲ್ಲರೂ ಮದುವೆ ಆಗುತ್ತಾರೆ. ಜಾತಕ ಕೇಳಿ ಎಲ್ಲವನ್ನೂ ನೋಡಿ ಮದುವೆ ಆಗುತ್ತಾರೆ. ಹಾಗಂತ ದೇವಸ್ಥಾನದಲ್ಲಿ ಮದುವೆ ಆದ ಎಲ್ಲರೂ ಜೊತೆಯಲ್ಲಿ ಇರುತ್ತಾರೆ ಅಂತ ಅಲ್ಲ. ಎಷ್ಟೋ ಜನ ದೂರ ಆಗಿರುವ ಉದಾಹರಣೆಗಳು ಕೂಡ ಇವೆ. ಅಪ್ಪು ಸರ್ ಮಾಡಿರುವ ಸಮಾಜಸೇವೆ ಆಗಲಿ, ಅವರು ಬದುಕಿದ್ದ ರೀತಿ ಆಗಲಿ ಯಾವ ದೇವರಿಗೂ ಕಡಿಮೆ ಇಲ್ಲ. ನಾವು ಅವರ ಅಭಿಮಾನಿ. ಹಾಗಾಗಿ ಅವರ ಸಮಾಧಿ ಮುಂದೆಯೇ ಮದುವೆಯಾಗಲು ನಿರ್ಧರಿಸಿದ್ದೇವೆ' ಎಂದು ಹೇಳಿದರು.

    ಅಂದು ಡಾ.ರಾಜಕುಮಾರ್, ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂಬ ಮಾತನ್ನ ಯಾರೂ ಸುಮ್ಮನೆ ಹೇಳುತ್ತಿಲ್ಲ. ಅಪ್ಪಾಜಿಯ ಆ ದಾರಿಯಲ್ಲಿ ನಡೆದು ಬಂದವರು ಪುನೀತ್ ರಾಜಕುಮಾರ್. ಸರಳತೆಯಲ್ಲಿ ಡಾ.ರಾಜ್ ಅವರಂತೆಯೇ ದೊಡ್ಡ ಉದಾಹರಣೆ ಆಗಿದ್ದರು. ಅಷ್ಟೇ ಅಲ್ಲ ಅಪ್ಪನ ಹಲವು ಮಾರ್ಗಗಳನ್ನು ಪುನೀತ್ ರಾಜಕುಮಾರ್ ಅಳವಡಿಸಿಕೊಂಡಿದ್ದರು. ಹಾಗಾಗಿಯೇ ಪುನೀತ್ ರಾಜಕುಮಾರ್ ಹಲವರಿಗೆ ಮಾದರಿ ಆಗಿದ್ದಾರೆ. ಇನ್ನೂ ಈ ಹಿಂದೆ ಡಾ.ರಾಜಕುಮಾರ್ ಅವರ ಸಮಾಧಿ ಬಳಿ ಸಾಕಷ್ಟು ಮಂದಿ ಮದುವೆ ಆಗಿದ್ದಾರೆ. ಶುಭ ಕಾರ್ಯ ಇದೆ ಎಂದರೆ ರಾಜಕುಮಾರ್ ಸಮಾಧಿ ಬಳಿ ಬಂದು ನಮಿಸಿ ಆಶಿರ್ವಾದ ಪಡೆದು ಹೋಗುವ ಸಾಕಷ್ಟು ಜನರು ಇಂದೂ ಇದ್ದಾರೆ. ರಾಜಕುಮಾರ್ ಅವರ ಸಮಾಧಿಯನ್ನು ದೇವರಗುಡಿ ಎಂದೇ ಭಾವಿಸಿ ಆಶೀರ್ವಾದ ಪಡೆಯುವ ಅಪಟ್ಟ ಅಭಿಮಾನಿಗಳು ಇದ್ದಾರೆ. ಅಂತೆಯೇ ಈಗ ಪುನೀತ್ ರಾಜಕುಮಾರ್ ಅವರ ಸಮಾಧಿಯ ಬಳಿ ಜೋಡಿಯೊಂದು ಮದುವೆ ಆಗುತ್ತಿದೆ. ಪುನೀತ್ ರಾಜಕುಮಾರ್ ಯಾವ ದೇವರಿಗೂ ಕಡಿಮೆ ಇಲ್ಲ. ನಮಗೆ ಅವರ ಆಶೀರ್ವಾದವೇ ಮುಖ್ಯ ಎಂದು ಈ ಜೋಡಿ ಸಮಾಧಿಯ ಮುಂದೆ ಮದುವೆಯಾಗಲು ನಿರ್ಧರಿಸಿದೆ.

    English summary
    Fan Of Puneeth Rajkumar Wants To Marriege In Front Of Puneeth Rajkumar Memorial,
    Saturday, November 6, 2021, 16:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X