ಪ್ರತಿಷ್ಠಿತ ಮಾಧ್ಯಮದ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ದರ್ಶನ್ ಫ್ಯಾನ್ಸ್- ಸುದೀಪ್ ಫ್ಯಾನ್ಸ್ ಕಿರಿಕ್

By ಫಿಲ್ಮಿಬೀಟ್ ಡೆಸ್ಕ್

'ಮಾರ್ಕ್' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಮತ್ತೆ ವಾರ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಜೋರಾಗಿದೆ. ಇದೀಗ ಪ್ರತಿಷ್ಠಿತ ಸುದ್ದಿ ವಾಹಿನಿ ಹೆಸರು ಬಳಸಿ ಕೆಟ್ಟದಾಗಿ ಫ್ಯಾನ್ಸ್ ವಾರ್ ಆರಂಭಿಸಿದ್ದಾರೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ನಂಬಲಾಗದಂತೆ ಮಾಡಿ ತಮಾಷೆ ನೋಡುತ್ತಿದ್ದಾರೆ.

ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಸುಖಾಸುಮ್ಮನೆ ಕೆಲವರು ಚಿತ್ರದ ವಿರುದ್ಧ ದ್ವೇಷ ಸಾಧಿಸಲು ಆರಂಭಿಸಿದ್ದಾರೆ. ಬಾಯ್ಕಾಟ್ ಮಾರ್ಕ್ ಟ್ರೆಂಡ್ ಆರಂಭಿಸಿದ್ದಾರೆ. ಇಲ್ಲ ಸಲ್ಲದ ಆರೋಪ ಮಾಡಿ ಸಿನಿಮಾವನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಚಿತ್ರದ ವಿರುದ್ಧ ಷಡ್ಯಂತ್ರ ಮಾಡುತ್ತಿರುವವರಿಗೆ ಸುದೀಪ್ ತಿರುಗೇಟು ನೀಡಿದ್ದಾರೆ. ನಾವು ಎಲ್ಲದ್ದಕ್ಕೂ ಸಿದ್ಧ ಎಂದಿದ್ದಾರೆ.

Fan War Turns Ugly Ahead of Mark Release Fake media Posts Cauvery Issue Dragged In

ಅಭಿಮಾನಿಗಳ ಹೆಸರಿನಲ್ಲಿ ಕೆಲ ಕಿಡಿಗೇಡಿಗಳ ಹುಚ್ಚಾಟ ಎಲ್ಲೆ ಮೀರುತ್ತಿದೆ. 'ಮಾರ್ಕ್‌' ಚಿತ್ರದಲ್ಲಿ ತಮಿಳು ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದಾರೆ, ಹಾಗಾಗಿ ನೋಡಬಾರದು ಎಂದು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಒಬ್ಬ ನಟನ ಚಿತ್ರವನ್ನು ಮತ್ತೊಬ್ಬ ನಟನ ಅಭಿಮಾನಿಗಳು ಟಾರ್ಗೆಟ್ ಮಾಡಿ ನೆಗೆಟಿವ್ ಪ್ರಚಾರ ಮಾಡುವುದು, ಅದಕ್ಕೆ ತಿರುಗೇಟು ಎನ್ನುವಂತೆ ಈ ನಟನ ಚಿತ್ರವನ್ನು ಆ ನಟನ ಅಭಿಮಾನಿಗಳು ಸೋಲಿಸಲು ನೋಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ತೆಲುಗು, ತಮಿಳು ಚಿತ್ರರಂಗಗಳಲ್ಲಿ ಇದ್ದ ಈಗ ಕೀಳುಮಟ್ಟದ ವಾಡಿಕೆ ಈಗ ಕನ್ನಡ ಚಿತ್ರರಂಗದಲ್ಲಿ ಕೂಡ ಸದ್ದು ಮಾಡ್ತಿದೆ.

'ಡೆವಿಲ್' ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಹಾಗಾಗಿ 'ಮಾರ್ಕ್' ಚಿತ್ರವನ್ನು ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಸದ್ಯ ಕಾವೇರಿ ನೀರಿನ ವಿಚಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ 'ಮಾರ್ಕ್' ಚಿತ್ರಕ್ಕೆ ಹಿನ್ನಡೆ ಮಾಡುವ ಪ್ರಯತ್ನ ಶುರುವಾಗಿದೆ. ಅದಕ್ಕೆ ಟಿವಿ9 ಕನ್ನಡ ವಾಹಿನಿಯ ಹೆಸರನ್ನು ಕಿಡಿಗೇಡಿಗಳು ಬಳಸಿಕೊಂಡಿದ್ದಾರೆ. ತಾವೇ ಪೋಸ್ಟ್ ಹಾಕಿದರೆ ಯಾರು ನಂಬುವುದಿಲ್ಲ ಎನ್ನುವ ಕಾರಣಕ್ಕೆ ಟಿವಿ9 ವಾಹಿನಿ ವರದಿ ಮಾಡಿದೆ ಎಂದು ಬಿಂಬಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. "ಮಾರ್ಕ್' ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಕಾವೇರಿ ನದಿ ತಮಿಳುನಾಡಿಗೆ ಸೇರಿದ್ದು ಎಂದು ಹೇಳಿದ್ದಾರೆ" ಟಿವಿ9 ವಾಹಿನಿ ವರದಿ ಮಾಡಿದಂತೆ ಒಂದು ಫೇಕ್ ಪೋಸ್ಟ್ ಕ್ರಿಯೇಟ್ ಮಾಡಿದ್ದಾರೆ. ಅದಕ್ಕೆ ಟಿವಿ9 ವಾಹಿನಿ ಲೋಗೊ ಬಳಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

ಈ ವೈರಲ್ ಪೋಸ್ಟ್ ಸ್ಕ್ರೀನ್‌ ಶಾಟ್ ಫೇಕ್, ವಿಜಯ್ ಕಾರ್ತಿಕೇಯನ್ ಇಂತಹ ಯಾವುದೇ ಹೇಳಿಕೆ ನೀಡಿಲ್ಲ, ಇಂತಹ ಪೋಸ್ಟ್ ನಾವು ಮಾಡಿಲ್ಲ ಎಂದು ಟಿವಿ9 ವಾಹಿನಿ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ "ಕಾವೇರಿ ನೀರು ನಮ್ಮದ್ದಲ್ಲ, ತಮಿಳರಿಗೆ ಸೇರಿದ್ದು" ಎಂದು ಈ ಹಿಂದೆ ನಟ ದರ್ಶನ್ ಹೇಳಿಕೆ ಕೊಟ್ಟಿರುವುದಾಗಿ ಇಂಥದ್ದೇ ಮತ್ತೊಂದು ಫೇಕ್ ಪೋಸ್ಟ್ ಸ್ಕ್ರೀನ್‌ ಶಾಟ್ ಅನ್ನು ಕಿಡಿಗೇಡಿಗಳು ವೈರಲ್ ಮಾಡುತ್ತಿದ್ದಾರೆ. ಅದು ಕೂಡ ಫೇಕ್ ಎನ್ನುವುದು ಸ್ಪಷ್ಟವಾಗುತ್ತಿದ್ದು ಇದ್ದಕ್ಕೆ ಯಾವುದೇ ಆಧಾರ ಇಲ್ಲ. ಒಟ್ಟಾರೆ ಈ ಫ್ಯಾನ್ಸ್ ವಾರ್ ಭಿನ್ನ ವಿಭಿನ್ನ ಸ್ವರೂಪ ಪಡೆದುಕೊಳ್ಳುತ್ತಿದೆ. ಸೂಕ್ಷ್ಮ ವಿಚಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ವಿಕೃತಿ ಮೆರೆಯುವ ಪ್ರಯತ್ನ ಮಾಡುತ್ತಿದ್ದಾರೆ.

'ಡೆವಿಲ್' ಚಿತ್ರದ 10 ಸಾವಿರಕ್ಕೂ ಅಧಿಕ ಪೈರಸಿ ಲಿಂಕ್ ಡಿಲೀಟ್ ಮಾಡಲಾಗಿದೆ. ಯಾವುದನ್ನು ನಾವು ಇಟ್ಕೊಂಡು ಅಭ್ಯಾಸ ಇಲ್ಲ, ವಾಪಸ್ ತಗೋಳಕ್ಕೆ ರೆಡಿಯಾಗಿ ಎಂದು ಕೆಲವರು ರಾಜಾರೋಷವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 'ಮಾರ್ಕ್' ಚಿತ್ರವನ್ನು ಪೈರಸಿ ಮಾಡಿ ಸೋಲಿಸುವ ಹಠಕ್ಕೆ ಬಿದ್ದಿದ್ದಾರೆ. ಈ ಎಲ್ಲಾ ವಿಚಾರಗಳು ಸುದೀಪ್ ಗಮನಕ್ಕೆ ಬಂದೇ ಹುಬ್ಬಳ್ಳಿಯಲ್ಲಿ ಆ ರೀತಿ ಸವಾಲು ಹಾಕಿದಂತೆ ಕಾಣುತ್ತಿದೆ.

More from Filmibeat

Read more about: devil darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X