ಅಭಿಮಾನಿಗಳ ಈ 5 ಆಸೆಯನ್ನ 'ಯಜಮಾನ' ಈಡೇರಿಸಿದ್ರೆ ಸಾಕಂತೆ.!

Recommended Video

Yajamana Movie: ಅಭಿಮಾನಿಗಳ ಈ 5 ಆಸೆಯನ್ನ 'ಯಜಮಾನ' ಈಡೇರಿಸಿದ್ರೆ ಸಾಕಂತೆ.!

ನಟ ದರ್ಶನ್ ಅಭಿನಯದ ಯಜಮಾನ ಸಿನಿಮಾ ಮಾರ್ಚ್ 1 ರಂದು ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಕಾಣುತ್ತಿದೆ. ಕೆಜಿಎಫ್, ನಟಸಾರ್ವಭೌಮ ಚಿತ್ರದ ನಂತರ ಮತ್ತೊಂದು ಕನ್ನಡ ಸಿನಿಮಾ ದೇಶದ ಗಮನ ಸೆಳೆಯಲು ಸಜ್ಜಾಗಿದೆ.

ಈಗಾಗಲೇ ಟ್ರೈಲರ್ ಮತ್ತು ಹಾಡಿನ ಮೂಲಕ ಬಹುದೊಡ್ಡ ಸದ್ದು ಮಾಡಿರುವ ಯಜಮಾನ, ರಿಲೀಸ್ ಆದ್ಮೇಲೆ ಸ್ಯಾಂಡಲ್ ವುಡ್ ಬಾಕ್ಸ್ ಅಫೀಸ್ ಜೊತೆಗೆ ಕನ್ನಡ ಇಂಡಸ್ಟ್ರಿಯ ಕಡೆ ಇತರೆ ಇಂಡಸ್ಟ್ರಿಯವರು ನೋಡುವಂತೆ ಮಾಡುತ್ತೆ ಎಂಬ ಮಾತು ಗಾಂಧಿನಗರದಲ್ಲಿ ಚರ್ಚೆಯಾಗ್ತಿದೆ.

ಇದೆಲ್ಲ ಏನೇ ಇದ್ರು ಡಿ ಬಾಸ್ ಅಭಿಮಾನಿಗಳಿಗೆ ಈ ಐದು ಆಸೆಗಳು ಈಡೇರಿದ್ರೆ ಸಾಕಪ್ಪಾ ಅಂತಿದ್ದಾರೆ. ಕೇವಲ ಡಿ ಫ್ಯಾನ್ಸ್ ಮಾತ್ರಲ್ಲ ಈ 5 ಆಸೆ ನೆರವೇರಿದ್ರೆ ಕನ್ನಡ ಸಿನಿ ರಸಿಕರು ಕೂಡ ಫುಲ್ ಖುಷ್ ಆಗ್ತಾರೆ ಎನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟಕ್ಕೂ ಏನದು ಐದು ಆಸೆ? ಮುಂದೆ ಓದಿ......

ಮೊದಲ ದಿನದ ಕಲೆಕ್ಷನ್?

ಮೊದಲ ದಿನದ ಕಲೆಕ್ಷನ್?

ದರ್ಶನ್ ಸಿನಿಮಾಗಳು ಅಂದ್ರೆ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಸೆಟ್ ಮಾಡುತ್ತೆ ಎಂಬ ಮಾತಿದೆ. ಅದರಲ್ಲೂ ಮೊದಲ ದಿನ ಗಳಿಕೆಯಲ್ಲಿ ಈ ಹಿಂದಿನ ದಾಖಲೆಗಳನ್ನ ಉಡೀಸ್ ಮಾಡ್ಬೇಕು ಎಂಬ ಲೆಕ್ಕಾಚಾರ ಹಾಕ್ತಿದ್ದಾರೆ ಡಿ ಹುಡುಗರು. ಫಸ್ಟ್ ಡೇ ಕಲೆಕ್ಷನ್ ಯಜಮಾನ ಪಾಲಿಗೆ ಬಹುದೊಡ್ಡ ನಿರಿಕ್ಷೆಯಾಗಿ ಕಾಣುತ್ತಿದೆ.

ಒಟ್ಟಾರೆ ಕಲೆಕ್ಷನ್?

ಒಟ್ಟಾರೆ ಕಲೆಕ್ಷನ್?

ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟ, ಬಾಕ್ಸ್ ಅಫೀಸ್ ಸುಲ್ತಾನ ಎಂದೆಲ್ಲ ಕರೆಸಿಕೊಳ್ಳುವ ದರ್ಶನ್ ಚಿತ್ರ, ಒಟ್ಟು ಕಲೆಕ್ಷನ್ ನಲ್ಲೂ ಹೊಸ ರೆಕಾರ್ಡ್ ಮಾಡಬೇಕು ಎನ್ನುವುದು ಅಭಿಮಾನಿಗಳ ಆಸೆ. ದರ್ಶನ್ ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿಕೊಂಡರೇ ಒಟ್ಟಾರೆ ಕಲೆಕ್ಷನ್ ನಲ್ಲಿ ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ. ಈಗ ಯಜಮಾನ ಅದನ್ನೆಲ್ಲಾ ದಾಟಿ ಹೋಗಲಿದೆ ಎಂಬ ಆಸೆ ಹುಟ್ಟಿಕೊಂಡಿದೆ.

ಸೌತ್ ಇಂಡಸ್ಟ್ರಿಗೆ ಮೆಚ್ಚುಗೆ?

ಸೌತ್ ಇಂಡಸ್ಟ್ರಿಗೆ ಮೆಚ್ಚುಗೆ?

ಯಜಮಾನ ಕನ್ನಡ ಸಿನಿಮಾ. ಬೇರೆ ಭಾಷೆಯಲ್ಲಿ ರಿಲೀಸ್ ಆಗುತ್ತಿಲ್ಲ. ಆದ್ರೂ, ಯಜಮಾನನ ಅಬ್ಬರ ಹೊರರಾಜ್ಯಗಳಲ್ಲಿ ಜೋರಾಗಿಯೇ ಇದೆ. ಸಿನಿಮಾ ರಿಲೀಸ್ ಆದ್ಮೇಲೆ ಕೂಡ ಯಜಮಾನ ಸಿನಿಮಾ ಸೌತ್ ಇಂಡಸ್ಟ್ರಿ ಮಂದಿಯ ಗಮನ ಸೆಳೆಯಬೇಕು ಎಂಬ ನಿರೀಕ್ಷೆ ಇದೆ. ಕೇವಲ ಸೌತ್ ಇಂಡಿಯಾ ಮಾತ್ರವಲ್ಲ ವರ್ಲ್ಡ್ ವೈಡ್ ಅಬ್ಬರಿಸಬೇಕು ಎಂಬ ಆಸೆ ಇದೆ.

ಎಂಟರ್ ಟೈನ್ ಮೆಂಟ್ ಬೇಕೇ ಬೇಕು

ಎಂಟರ್ ಟೈನ್ ಮೆಂಟ್ ಬೇಕೇ ಬೇಕು

ಕಲೆಕ್ಷನ್, ದಾಖಲೆ, ಹೆಸರು ಎಲ್ಲದರ ಮಧ್ಯೆ ಸಿನಿಮಾ ಮನರಂಜನೆಯಿಂದ ಕೂಡಿರಬೇಕು. ಸಿನಿಮಾ ನೋಡಲು ಬರುವ ಪ್ರೇಕ್ಷಕನಿಗೆ ಖುಷಿಪಡಿಸುವಂತಿರಬೇಕು ಎಂಬುದು ಕೂಡ ಅಭಿಮಾನಿಗಳ ಆಸೆ. ಯಾಕಂದ್ರೆ, ದರ್ಶನ್ ಅವರ ಈ ಹಿಂದಿನ ಕೆಲವು ಸಿನಿಮಾಗಳು ಅಷ್ಟಾಗಿ ಖುಷಿ ಪಡಿಸುವಲ್ಲಿ ಸಕ್ಸಸ್ ಆಗಿರಲಿಲ್ಲ.

ದರ್ಶನ್ ಗೆ ದೊಡ್ಡ ಸಕ್ಸಸ್

ದರ್ಶನ್ ಗೆ ದೊಡ್ಡ ಸಕ್ಸಸ್

ಎಲ್ಲದಕ್ಕಿಂತ ಮಿಗಿಲಾಗಿ ಚಾಲೆಂಜಿಂಗ್ ಸ್ಟಾರ್ ಗೆ ದೊಡ್ಡ ಸಕ್ಸಸ್ ಬೇಕಿದೆ. ಯಾಕಂದ್ರೆ, ಈ ಹಿಂದಿನ ದರ್ಶನ್ ಸಿನಿಮಾಗಳು ಮೊದಲ ವಾರ ಸದ್ದು ಮಾಡಿದ್ದು ಬಿಟ್ಟರೇ ನಂತರ ಸೈಲೆಂಟ್ ಆದ ಉದಾಹರಣೆಗಳಿವೆ. ಹಾಗಾಗಿ, ಯಜಮಾನ ಚಿತ್ರದ ಮೂಲಕ ಡಿ ಬಾಸ್ ಗೆ ದೊಡ್ಡ ಗೆಲುವು ತಂದುಕೊಡಬೇಕು ಎಂಬ ಆಸೆ, ನಿರೀಕ್ಷೆ ಫ್ಯಾನ್ಸ್ ಗೆ ಇದೆ. ಈ ಐದು ಆಸೆಗಳು ಈಡೇರಿದ್ರೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ.

More from Filmibeat

English summary
Yajamana is an upcoming Kannada language action drama film written and directed by V. Harikrishna and Pon Kumaran and produced by Shylaja Nag and B Suresh will release on march 1st. It stars Darshan, Rashmika Mandanna and Tanya Hope in lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X