ಫೆಬ್ರವರಿ 16: ದಾಸನ ಅಭಿಮಾನಿಗಳ ನಿರೀಕ್ಷೆಗಳು 6
Recommended Video

ಫೆಬ್ರವರಿ 16 ರಂದು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹಬ್ಬ ನಡೆಯಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವಿದ್ದು, ಕೋಟ್ಯಾಂತರ ಅಭಿಮಾನಿಗಳು ಡಿ ಬಾಸ್ ಜನುಮದಿನವನ್ನ ಆಚರಿಸಲು ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ.
ಬರ್ತಡೇ ಅಂದ್ಮೇಲೆ ಆ ನಟರ ಹೊಸ ಸಿನಿಮಾಗಳಿಂದ ಪೋಸ್ಟರ್, ಟ್ರೈಲರ್, ಫಸ್ಟ್ ಲುಕ್ ಹೀಗೆ ಉಡುಗೊರೆಗಳನ್ನ ಅಭಿಮಾನಿಗಳು ನಿರೀಕ್ಷೆ ಮಾಡ್ತಾರೆ. ಅದರಲ್ಲೂ ದರ್ಶನ್ ಅವರ ಬರ್ತಡೇ ಅಂದ್ಮೇಲೆ ಅದು ಸ್ವಲ್ಪ ಜಾಸ್ತಿನೇ ಇರುತ್ತೆ.
ಕುರುಕ್ಷೇತ್ರ, ಯಜಮಾನ, ಒಡೆಯ, ರಾಬರ್ಟ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ದರ್ಶನ್ ಅವರಿಗೆ, ಈ ಬಾರಿ ಸಿಕ್ಕಾಪಟ್ಟೆ ಸರ್ಪ್ರೈಸ್ ಸಿಗಲಿವೆ. ಸದ್ಯಕ್ಕೆ ನಿಖರವಾದ ಮಾಹಿತಿ ಇಲ್ಲವಾದರೂ, ಅಭಿಮಾನಿಗಳು ಮಾತ್ರ 6 ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಂದೆ ಓದಿ.....

'ಮದಕರಿ ನಾಯಕ' ಚಿತ್ರಕ್ಕೆ ಚಾಲನೆ
ರಾಕ್ ಲೈನ್ ವೆಂಕಟೇಶ್ ಮತ್ತು ದರ್ಶನ್ ಕಾಂಬಿನೇಷನ್ ನಲ್ಲಿ ತಯಾರಾಗಲಿರುವ ಐತಿಹಾಸಿಕ ಚಿತ್ರ 'ಗಂಡುಗಲಿ ಮದಕರಿ ನಾಯಕ' ಸಿನಿಮಾಗೆ ಚಾಲನೆ ದೊರೆಯಬಹುದು. ಸಿನಿಮಾ ಮಾಡ್ತೀವಿ ಎಂದಷ್ಟೇ ಹೇಳಿರುವ ರಾಕ್ ಲೈನ್ ವೆಂಕಟೇಶ್ ಅಧಿಕೃತವಾಗಿ ಆ ದಿನ ಘೋಷಣೆ ಮಾಡಬಹುದು.

ಕುರುಕ್ಷೇತ್ರ ಟ್ರೈಲರ್ ಬರಬಹುದು
ಕುರುಕ್ಷೇತ್ರ ಸಿನಿಮಾ ದರ್ಶನ್ ಅವರ 50ನೇ ಚಿತ್ರ ಎನ್ನಲಾಗಿದೆ. ಇದುವರೆಗೂ ಟೀಸರ್ ಬಿಟ್ಟರೇ ಯಾವ ಮಾಹಿತಿಯೂ ಬಿಟ್ಟುಕೊಟ್ಟಿಲ್ಲ ನಿರ್ಮಾಪಕ ಮುನಿರತ್ನ. ಬಹುಶಃ ದರ್ಶನ್ ಬರ್ತಡೇಗೆ ಕುರುಕ್ಷೇತ್ರ ಟ್ರೈಲರ್ ಬಂದರೂ ಅಚ್ಚರಿ ಇಲ್ಲ. ಸದ್ಯಕ್ಕೆ ಈ ಬಗ್ಗೆ ಯಾವ ಸುಳಿವು ಸಿಕ್ಕಿಲ್ಲ. ಆದ್ರೆ, ಈ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಯಜಮಾನ ರಿಲೀಸ್ ಡೇಟ್
ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರಗಳ ಪೈಕಿ ಯಜಮಾನ ಒಂದು. ದಾಸನ ಹುಟ್ಟುಹಬ್ಬಕ್ಕೆ ಟ್ರೈಲರ್ ಬರಬಹುದು ಎಂಬ ಅಂದಾಜಿನಲ್ಲಿದ್ದ ಅಭಿಮಾನಿಗಳಿಗೆ ಫೆಬ್ರವರಿ 10ರಂದೇ ಟ್ರೈಲರ್ ಬರಲಿದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ. ಬಹುಶಃ ಡಿ ಬಾಸ್ ಹುಟ್ಟುಹಬ್ಬಕ್ಕೆ ಮೊದಲು ಉಡುಗೊರೆ ನೀಡುತ್ತಿರುವ ಯಜಮಾನ ತಂಡ ಆ ದಿನ ರಿಲೀಸ್ ಡೇಟ್ ಘೋಷಣೆ ಮಾಡಬಹುದು.

ಒಡೆಯ ಫಸ್ಟ್ ಲುಕ್
ಕುರುಕ್ಷೇತ್ರ ಮತ್ತು ಯಜಮಾನ ಚಿತ್ರದ ನಂತರ ಒಡೆಯ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರದ ಫಸ್ಟ್ ಲುಕ್ ಅಥವಾ ಟೀಸರ್ ಬರಬಹುದು. ಎಂ ಡಿ ಶ್ರೀಧರ್ ಈ ಚಿತ್ರವನ್ನ ನಿರ್ದೇಶನ ಮಾಡಿ, ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದಾರೆ.

ರಾಬರ್ಟ್ ಪೋಸ್ಟರ್
ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿರುವ ರಾಬರ್ಟ್ ಸಿನಿಮಾದ ಪೋಸ್ಟರ್ ಬಂದಿತ್ತು. ಬಹುಶಃ ಚಾಲೆಂಜಿಂಗ್ ಸ್ಟಾರ್ ಬರ್ತಡೇಗೆ ರಾಬರ್ಟ್ ಚಿತ್ರತಂಡ ದರ್ಶನ್ ಗೆಟಪ್ ನ ಫಸ್ಟ್ ಲುಕ್ ರಿಲೀಸ್ ಮಾಡಬಹುದು ಎಂಬ ನಿರೀಕ್ಷೆ ಇದೆ.

ಪಾಶುಪತಾಸ್ತ್ರ ಘೋಷಣೆ
ಈ ಮಧ್ಯೆ ಹೊಸಬರೇ ಸೇರಿ ದರ್ಶನ್ ಅವರಿಗೆ ಸಿನಿಮಾ ಮಾಡ್ತಿದ್ದಾರೆ. ಆ ಚಿತ್ರಕ್ಕೆ ಪಾಶುಪತಾಸ್ತ್ರ ಎಂದು ಹೆಸರಿಟ್ಟಿದ್ದು, ಇದು ಪೊಲಿಟಿಕಲ್ ಥ್ರಿಲ್ಲರ್ ಎಂದು ಹೇಳಲಾಗ್ತಿದೆ. ದರ್ಶನ್ ಹುಟ್ಟುಹಬ್ಬದಂದೇ ಈ ಚಿತ್ರವೂ ಘೋಷಣೆಯಾಗಬಹುದು ಎಂಬ ಮಾತಿದೆ. ಒಟ್ಟು, ಈ ಆರು ಚಿತ್ರಗಳ ಜೊತೆಗೆ ಉಳಿದ ಯಾವ ಚಿತ್ರತಂಡಗಳು ಸರ್ಪ್ರೈಸ್ ನೀಡಲಿದೆ ಎಂಬುದು ಕಾದು ನೋಡಬೇಕಿದೆ.


Click it and Unblock the Notifications











