»   » ಶಿವಣ್ಣ ಅವರ ಕಾಫಿ ಕಪ್ ವೈರಲ್ ಆಯ್ತು ಕಣ್ರೀ

ಶಿವಣ್ಣ ಅವರ ಕಾಫಿ ಕಪ್ ವೈರಲ್ ಆಯ್ತು ಕಣ್ರೀ

Posted By: Staff
Subscribe to Filmibeat Kannada

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುವುದರೊಂದಿಗೆ ಎಲ್ಲೆಡೆ ಜನಮನ ಗೆದ್ದು ಪ್ರಶಂಸೆಗೆ ಪಾತ್ರವಾಗಿದೆ.

ಅಂದಹಾಗೆ ಈ ಸಿನಿಮಾ ಬರೀ ಬಾಕ್ಸಾಫೀಸ್ ಕೊಳ್ಳೆ ಹೊಡೆದು ಯಶಸ್ವಿ ಆಗೋದು ಮಾತ್ರವಲ್ಲದೇ ಇಡೀ ಕರ್ನಾಟಕದಾದ್ಯಂತ ಇದೀಗ ಕ್ರೇಜ್ ಅನ್ನು ಸೃಷ್ಟಿಸುತ್ತಿದೆ.['ವೀರಪ್ಪನ್' ಒಂದು ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?]

Fans and Director's follow the Varma's 'Killing Veerappan' poster

ಹೌದು ಹೆಚ್ಚು ಡೈಲಾಗ್, ಫೈಟ್, ರೊಮ್ಯಾನ್ಸ್, ಡ್ಯುಯೆಟ್ ಸಾಂಗ್ ಇಲ್ಲದ ವಿಭಿನ್ನ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಅವರು ಕೈಯಲ್ಲಿ ಕಾಫಿ ಕಪ್ ಹಿಡಿದು, ಅದನ್ನು ಬಲಗಡೆ ಇರುವ ಕಣ್ಣಿನ ಹತ್ತಿರ ಹಿಡಿದುಕೊಂಡು ಬಹಳ ಗಾಢವಾಗಿ ಚಿಂತಿಸುತ್ತಿರುವಂತಹ ಪೋಸ್ಟರ್ ಅನ್ನು ಅಭಿಮಾನಿಗಳು ಕಾಪಿ ಮಾಡುತ್ತಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ.

ಬರೀ ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕರಾದ ಪವನ್ ಒಡೆಯರ್ ಅವರು ಅದೇ ಮಾದರಿಯಲ್ಲಿ ಫೊಟೋ ತೆಗೆಸಿಕೊಂಡು 'ಕಿಲ್ಲಿಂಗ್ ವೀರಪ್ಪನ್ ಗೆ ಮನಸೋತಿದ್ದೇನೆ' ಎಂದಿದ್ದಾರೆ.['ಆರ್.ಜಿ.ವಿ' ಆಪರೇಷನ್ ಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]

Fans and Director's follow the Varma's 'Killing Veerappan' poster

ಜೊತೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು 'ಇಂಪ್ರೆಸ್ಸ್ ಡ್ 'ಕಿಲ್ಲಿಂಗ್ ವೀರಪ್ಪನ್' ಎಂದು ಶಿವಣ್ಣ ಅವರದೇ ಭಂಗಿಯಲ್ಲಿ ಫೊಟೋ ತೆಗೆಸಿಕೊಂಡು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿದ್ದಾರೆ.

ಅಂತೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಈ ಪೋಸ್ ಸಖತ್ ಫೇಮಸ್ ಆಗಿದ್ದು, ಇದನ್ನು ಅಭಿಮಾನಿಗಳು ಕೂಡ ಫಾಲೋ ಮಾಡಿದ್ದನ್ನು ನೋಡಿದ ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ದಂಗಾಗಿದ್ದಾರಂತೆ.[ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ]

Fans and Director's follow the Varma's 'Killing Veerappan' poster

ಇದೇ ಜನವರಿ 7 ರಂದು ಶಿವರಾಜ್ ಕುಮಾರ್, ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ಸಂದೀಪ್ ಭಾರದ್ವಾಜ್ ಕಾಣಿಸಿಕೊಂಡಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದ ತೆಲುಗು ಅವತರಣಿಕೆ ತೆರೆ ಮೇಲೆ ಬರಲಿದ್ದು, ಆಮೇಲೆ ಆಂಧ್ರದಲ್ಲಿ ಅದ್ಯಾವ ಕ್ರೇಜ್ ಹುಟ್ಟುತ್ತೋ ಕಾದು ನೋಡಬೇಕು.

English summary
Sandalwood Hattrick Hero Shivarajkumar Fans are following the Ram Gopal Varma directorial Kannada Movie 'Killing Veerappan' Poster. Kannada Actor Shiva Rajkumar, Kannada Actress Parul Yadav, Actress Yagna Shetty in the lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada