KGF 2 : 'ಕೆಜಿಎಫ್ 2' ಮತ್ತು 'ಬೀಸ್ಟ್' ಚಿತ್ರಕ್ಕಿಲ್ಲ ಸ್ಟಾರ್ ವಾರ್, ಫ್ಯಾನ್ಸ್ ಲೆಕ್ಕಾಚಾರವೇ ಬೇರೆ!
ಒಂದೊಳ್ಳೆ ಹೈಪ್ ಕ್ರಿಯೇಟ್ ಮಾಡಿರೋ ಸಿನಿಮಾಗೆ ಎಲ್ಲಿಲ್ಲದ ಬೇಡಿಕೆ ಇರುತ್ತೆ. ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ ಎದುರು ಮತ್ತೊಂದು ರಿಲೀಸ್ ಆಗುವುದು ತೀರಾ ವಿರಳ. ಆದರೆ, ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅಲ್ಲಿ ಪರಿಸ್ಥಿತಿ ಹೇಗಿರಬೇಡ? ಒಬ್ಬ ನಟನ ಫ್ಯಾನ್ಸ್ ಮತ್ತೊಬ್ಬ ನಟನ ಸಿನಿಮಾದ ಬಗ್ಗೆ ಮಾತನಾಡೋದು, ಸ್ಟಾರ್ ವಾರ್ ಎಲ್ಲವೂ ಕಾಮನ್ ಆಗಿ ಆರಂಭ ಆಗುತ್ತೆ.
ಆದರೆ ಯಶ್ ಅಭಿನಯದ 'ಕೆಜಿಎಫ್ 2' ಮತ್ತು ವಿಜಯ್ ದಳಪತಿ ಅಭಿನಯದ 'ಬೀಸ್ಟ್' ಸಿನಿಮಾದ ಅಭಿಮಾನಿಗಳು ಮಾತ್ರ ಇಲ್ಲಿ ಭಿನ್ನವಾಗಿ ಕಾಣುತ್ತಾರೆ. ಯಾವುದೆ ಸ್ಟಾರ್ ವಾರ್ ಬೇಡ ಅಂತ ಅಭಿಮಾನಿಗಳೇ ನಿರ್ಧಾರಕ್ಕೆ ಬಂದಿದ್ದಾರೆ. ಎರಡೂ ಸಿನಿಮಾಗಳಿಗೂ ಇಬ್ಬರು ಸ್ಟಾರ್ ನಟರ ಫ್ಯಾನ್ಸ್ ಸಪೋರ್ಟ್ ಮಾಡುತ್ತಿದ್ದಾರೆ.
'ನೋ ಸ್ಟಾರ್ ವಾರ್' ಎಂದು ತಮಗೆ ತಾವೇ ತೀರ್ಮಾನಿಸಿಕೊಂಡಿರುವ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಎರಡೂ ಸಿನಿಮಾಗೂ ಒಳ್ಳೆದಾಗಲಿ ಎಂದು ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.

ಏಪ್ರಿಲ್ 13ಕ್ಕೆ 'ಬೀಸ್ಟ್' ರಿಲೀಸ್
ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಹಾಗೂ ಖ್ಯಾತ ನಟಿ ಪೂಜಾ ಹೆಗ್ಡೆ ಅಭಿನಯದ ಬೀಸ್ಟ್' ಸಿನಿಮಾ ಇದೇ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ. ಬಹುನಿರೀಕ್ಷಿತ ಚಿತ್ರ 'ಬೀಸ್ಟ್'ನೊಂದಿಗೆ ತೆರೆಯ ಮೇಲೆ ಬರಲು ದಳಪತಿ ಸಿದ್ಧರಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಸಖತ್ ಗ್ಲಾಮರಸ್ ಆಗಿ ನಟಿಸಿದ್ದಾರೆ. ಆದರೆ, ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2' ಚಿತ್ರವು ಏಪ್ರಿಲ್ 14ರಂದು ತೆರೆಗೆ ಬರುತ್ತಿರುವುದು 'ಬೀಸ್ಟ್' ತಂಡಕ್ಕೆ ದೊಡ್ಡ ಸವಾಲೊಡ್ಡಲಿದೆ ಎನ್ನಲಾಗಿದೆ.
ಎರಡೂ ಸಿನಿಮಾಗಳ ತಾಕತ್ತೇ ಬೇರೆ
ಅಭಿಮಾನಿಗಳು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಹುದು ಎಂಬುದನ್ನು ಯಶ್ ಮತ್ತು ವಿಜಯ್ ಅಭಿಮಾನಿಗಳು ಮಾಡಿ ತೋರಿಸಿದ್ದಾರೆ. ಎರಡೂ ಸಿನಿಮಾಗಳಿಗೆ ಅದರದ್ದೇ ಆದ ತಾಕತ್ತು ಇದೆ. ಹೀಗಾಗಿ ಎರಡೂ ಸಿನಿಮಾಗಳಿಗೂ ಸಲ್ಲುವ ಕ್ರೆಡಿಟ್ ಸಿಕ್ಕೆ ಸಿಗುತ್ತೆ ಎಂದು ಫ್ಯಾನ್ಸ್ ನಂಬಿದ್ದಾರೆ. ಸಾಧ್ಯವಾದಷ್ಟು ಎರಡೂ ಸಿನಿಮಾಗೂ ಒಳ್ಳೆಯದಾಗಲಿ ಎನ್ನುವ ನಿಟ್ಟಿನಲ್ಲಿ ಟ್ವೀಟ್ ಮಾಡುತ್ತಿದ್ದಾರೆ.
'ಬೀಸ್ಟ್' ಮತ್ತು 'ಕೆಜಿಎಫ್ 2' ಯುದ್ಧದಲ್ಲಿ ಗೆಲ್ಲೋದ್ಯಾರು?
ಇನ್ನು 'ಕೆಜಿಎಫ್ 2' ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕೆಜಿಎಫ್ ಪಾರ್ಟ್ 1 ರಿಲೀಸ್ ಆಗಿದ್ದಾಗ ತಮಿಳುನಾಡಿನಲ್ಲೂ ಉತ್ತಮ ಪ್ರದರ್ಶನ ಕಂಡಿತ್ತು. ಇದಾದ ಬಳಿಕ ನಟ ಯಶ್‌ಗೆ ತಮಿಳುನಾಡು ಸೇರಿದಂತೆ ಹಲವು ಕಡೆಗಳಿಂದ ಅಭಿಮಾನಿಗಳು ಹೇರಳವಾಗಿ ಹುಟ್ಟಿಕೊಂಡಿದ್ದಾರೆ. ಹೀಗಾಗಿ ಹಲವರಂತೂ ತಮಿಳುನಾಡಿನಲ್ಲಿ 'ಬೀಸ್ಟ್' ಮತ್ತು 'ಕೆಜಿಎಫ್ 2' ಜಟಾಪಟಿಯಲ್ಲಿ 'ಕೆಜಿಎಫ್ 2' ಒಂದು ಹೆಜ್ಜೆ ಮುಂದಿರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತದಲ್ಲಿಯೇ ಅತಿ ನಿರೀಕ್ಷಿತ ಸಿನಿಮಾ 'ಕೆಜಿಎಫ್ 2'
'ಕೆಜಿಎಫ್ 2' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾವು ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಸಿನಿಮಾದ ಮೊದಲ ಹಾಡು ಮಾರ್ಚ್ 21 ರಂದು ಬಿಡುಗಡೆ ಆಗಿ ಎಲ್ಲೆಡೆ ವೈರಲ್ ಆಗುತ್ತಿದೆ. 'ಕೆಜಿಎಫ್ 2' ಭಾರತದಲ್ಲಿಯೇ ಅತಿ ನಿರೀಕ್ಷಿತ ಸಿನಿಮಾ ಆಗಿರುವುದರಿಂದ ಈ ಸಿನಿಮಾಗೆ ಪೈಪೋಟಿ ನೀಡಲು ಬರುತ್ತಿರುವ 'ಬೀಸ್ಟ್' ಬಗ್ಗೆ ಚಿತ್ರತಂಡ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲಾ. ಸಿನಿಮಾದಲ್ಲಿ ಯಶ್ ಜೊತೆಗೆ ನಟ ಸಂಜಯ್ ದತ್ ವಿಲನ್ ಆಗಿ ನಟಿಸಿದ್ದಾರೆ. ಜೊತೆಗೆ ರವೀನಾ ಟಂಡನ್ ಇದ್ದಾರೆ. ಪ್ರಕಾಶ್ ರೈ, ತೆಲುಗಿನ ರಾವ್ ರಮೇಶ್ ಇನ್ನೂ ಹಲವು ಕಲಾವಿದರು 'ಕೆಜಿಎಫ್ 2' ಸಿನಿಮಾದಲ್ಲಿದ್ದಾರೆ.


Click it and Unblock the Notifications











