ಮತ್ತೆ ಶುರುವಾಯ್ತು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

By Pavithra

ವಿಷ್ಣು ಸ್ಮಾರಕ.. ಸಾಕಷ್ಟು ವರ್ಷಗಳಿಂದ ಬೆಂಗಳೂರಿನಲ್ಲೋ..ಮೈಸೂರಿನಲ್ಲೋ.. ಅನ್ನೋ ಗೊಂದಲದಲ್ಲೇ ಸಮಯ ಕಳೆದು ಹೋಗಿದೆ. ಸರ್ಕಾರ ಬದಲಾಗಿದೆ ಆದರೆ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲು ಯಾರು ಮುಂದಾಗಿಲ್ಲ. ಪ್ರಣಾಳಿಕೆಯಲ್ಲಿ ವಿಷ್ಣು ಸ್ಮಾರಕವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲೇ ಮಾಡುವುದಾಗಿ ತಿಳಿಸಿದ್ದ ಕುಮಾರಸ್ವಾಮಿ ಅವರಿಗೆ ವಿಷ್ಣು ಅಭಿಮಾನಿಗಳು ಮನವಿ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ಡಾ.ವಿಷ್ಣು ಸ್ಮಾರಕ ನಿರ್ಮಿಸಿಕೊಡಬೇಕೆಂದು ವಿಎಸ್ಎಸ್ ಸಂಘಟನೆಯಿಂದ ಮನವಿ ಪತ್ರ ಸಲ್ಲಿಸಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಹೋರಾಟಗಳು ಮಾಡಿ, ಅನೇಕ ಸಲ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಆದ್ದರಿಂದ ಹೊಸ ಸರ್ಕಾರದ ಅವಧಿಯಲ್ಲಿ ಮತ್ತೆ ವಿಎಸ್ಎಸ್ ತನ್ನ ಪ್ರಯತ್ನ ಆರಂಭಿಸಿದೆ.

Fans appeal to Kumaraswamy build Vishnuvardhan Memorial in Bangalore

ರಾಜ್ಯದಲ್ಲಿ ವಿಷ್ಣುವರ್ಧನ್ ಅವರನ್ನು ಕಡೆಗಣಿಸಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಷ್ಣುವರ್ಧನ್ ಅವರ ಜೊತೆ ಉತ್ತಮ ಸ್ನೇಹವನ್ನು ಹೊಂದಿದ್ದರು. ರಾಜಕೀಯವನ್ನು ಹೊರತು ಪಡಿಸಿದಂತೆ ವಯಕ್ತಿವಾಗಿ ಆತ್ಮೀಯರಾಗಿದ್ದರು. ಅದೇ ವಿಶ್ವಾಸದಲ್ಲಿ ಅಭಿಮಾನಿಗಳು ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿಕೊಂಡಿ ಎಂದು ಕೇಳಿಕೊಂಡಿದ್ದಾರೆ.

Fans appeal to Kumaraswamy build Vishnuvardhan Memorial in Bangalore

ಮೊದಲಿಗೆ ಸ್ಮಾರಕದ ವಿಚಾರವಾಗಿ ನಿಮ್ಮ ಬಳಿ ಚರ್ಚೆ ಮಾಡಲು ಸಮಯ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ..ಇಲ್ಲಿ ಇರುವುದು ಇಚ್ಛಾ ಶಕ್ತಿಯ ಕೊರತೆ ಎಂದು ವಿಎಸ್ಎಸ್ ನ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಸಂಘಟನೆಯವರು ಭೇಟಿ ಆಗುವ ಮುಂಚೆಯೇ ನಟಿ ಭಾರತಿ ಹಾಗೂ ಅನಿರುದ್ಧ್ ಸಿ ಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಶುಭಕೋರಿ ಬಂದಿದ್ದಾರೆ. ಮನವಿ ಸ್ವೀಕರಿಸಿರುವ ಮುಖ್ಯಮಂತ್ರಿಯವರು ಇದಕ್ಕೆ ಹೇಗೆ ಸ್ಪಂದಿಸಲಿದ್ದಾರೆ ಎನ್ನುವುದು ಕಾದು ನೋಡಬೇಕಾಗಿದೆ.

More from Filmibeat

English summary
Fans appeal to Chief Minister Kumaraswamy to build late actor Vishnuvardhan Memorial in Bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X