»   » ಧನಂಜಯ್ 'ಕಿಲ್ಲಿಂಗ್' ಲುಕ್ ಗೆ ಅಭಿಮಾನಿಗಳಿಂದ 'ಡೆಡ್ಲಿ' ಕಾಮೆಂಟ್ಸ್.!

ಧನಂಜಯ್ 'ಕಿಲ್ಲಿಂಗ್' ಲುಕ್ ಗೆ ಅಭಿಮಾನಿಗಳಿಂದ 'ಡೆಡ್ಲಿ' ಕಾಮೆಂಟ್ಸ್.!

Posted By:
Subscribe to Filmibeat Kannada
ಟಗರು ಟೀಸರ್ ಲಾಂಚ್ : ಧನಂಜಯ್ ಮಾಸ್ ಲುಕ್ ಗೆ ಅಭಿಮಾನಿಗಳು ಫಿದಾ | Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಎಲ್ಲೆಡೆ ಪ್ರಶಂಸೆ ಪಡೆದುಕೊಂಡಿದೆ. ಶಿವಣ್ಣ ಖಡಕ್ ಲುಕ್ ಗೆ ಕ್ಲೀನ್ ಬೌಲ್ಡ್ ಆಗಿರುವ ಚಿತ್ರಪ್ರೇಮಿಗಳು ಚಿತ್ರದ 'ಡೆಡ್ಲಿ' ವಿಲನ್ ಗೂ ಅಷ್ಟೇ ಫಿದಾ ಆಗಿದ್ದಾರೆ.

ಹೌದು, 'ಟಗರು' ಚಿತ್ರದಲ್ಲಿ 'ಡಾಲಿ' ಆಗಿ ಅಬ್ಬಿರಿಸಿರುವ ಧನಂಜಯ್, ಟೀಸರ್ ನಲ್ಲಿ ಘರ್ಜಿಸಿದ್ದಾರೆ. ಫಸ್ಟ್ ಲುಕ್ ನಲ್ಲಿ ಎಲ್ಲರ ಗಮನ ಸೆಳೆದಿದ್ದ ಸ್ಪೆಷಲ್ ಸ್ಟಾರ್ ಈಗ ಟೀಸರ್ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

'ಟಗರಿ'ನ ಅಖಾಡದಲ್ಲಿ 'ರಕ್ತ ಚರಿತ್ರೆ' ಸೃಷ್ಟಿಸಿರುವ ಧನಂಜಯ್ ಬಗ್ಗೆ ಟ್ವಿಟ್ಟರ್ ನಲ್ಲಿ ಬಂದಿರುವ 'ಡೆಡ್ಲಿ' ಕಾಮೆಂಟ್ ಗಳೇನು ಎಂದು ಮುಂದೆ ಓದಿ.....

ಧನಂಜಯ್ ಗೆ ಇದು ಸ್ಪೆಷಲ್ ಸಿನಿಮಾ

ಇದುವರೆಗೂ ಲವರ್ ಬಾಯ್ ಪಾತ್ರಗಳಲ್ಲಿ ಹೆಚ್ಚು ಮಿಂಚಿದ್ದ ಧನಂಜಯ್ ಇದೇ ಮೊದಲ ಬಾರಿಗೆ ಔಟ್ ಅಂಡ್ ಔಟ್ ರಗಡ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಅಷ್ಟೇ ಅಲ್ಲದೇ ಧನಂಜಯ್ ಈ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿರುವುದು ವಿಶೇಷ.

ಹುಷಾರು... ಈ 'ಟಗರು'ಗೆ ಮೈ ತುಂಬ ಸಿಕ್ಕಾಪಟ್ಟೆ ಪೋಗರು

ಧನಂಜಯ್ 'ಸೂಪರ್'

'ಟಗರು' ಟೀಸರ್ ನೋಡಿದ ನಂತರ ಧನಂಜಯ್ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. 'ಡಾಲಿ' ಗೆಟಪ್ ನಲ್ಲಿ ಸ್ಪೆಷಲ್ ಸ್ಟಾರ್ ಸಖತ್ ಸೌಂಡ್ ಮಾಡ್ತಿದ್ದಾರೆ. ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.

ಕನ್ನಡಕ್ಕೆ ಸ್ಟೈಲಿಶ್ ವಿಲನ್

ಧನಂಜಯ್ ಅವರ ಲುಕ್ ಗೆ ಮರುಳಾಗಿರುವ ಅಭಿಮಾನಿಗಳು ಕನ್ನಡಕ್ಕೊಬ್ಬ ಸ್ಟೈಲಿಶ್ ವಿಲನ್ ಸಿಕ್ಕಿದ್ದಾರೆ ಎಂಬ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.

ದುನಿಯಾ ಸೂರಿಗೆ ಪವರ್ ಸ್ಟಾರ್ ಕೊಟ್ಟರು ಬಂಪರ್ ಗಿಫ್ಟ್.!

ಈ ಚಿತ್ರದಿಂದ ಧನಂಜಯ್ ಅದೃಷ್ಟ ಬದಲಾಗುತ್ತೆ

ನಿರ್ದೇಶಕ ಸೂರಿ ಅವರ ನೈಜ ಪಾತ್ರಗಳಿಗೆ ಧನಂಜಯ್ ಮತ್ತು ವಸಿಷ್ಠ ಸಿಂಹ ಜೀವ ತುಂಬಿದ್ದಾರೆ. ಈ ಚಿತ್ರದಿಂದ ಇವರ ಅದೃಷ್ಟ ಬದಲಾಗುತ್ತೆ ಎಂಬ ಆಶಯ ಅಭಿಮಾನಿಗಳದ್ದು.

ಟೀಸರ್ ಲಾಂಚ್ ಗೂ ಮುನ್ನ ಶಿವಣ್ಣ-ಮಾನ್ವಿತಾ ಏನ್ ಮಾಡಿದ್ರು ಗೊತ್ತಾ?

ಇದು ಧನಂಜಯ್ ಶೋ ಪಕ್ಕಾ

ಧನಂಜಯ್ ಅಭಿಮಾನಿಗಳಿಗೆ 'ಟಗರು' ಪಕ್ಕಾ ಫುಲ್ ಹಂಗಾಮ ಆಗಲಿದೆ ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯ.

ಟಗರಿನ ಕೆಟ್ಟ ವಿಲನ್.!

ಧನಂಜಯ್ ಅವರ ಪಾತ್ರ ಎಷ್ಟರು ಕ್ರೂರವಾಗಿದೆ ಅಂದ್ರೆ, 'ಡಾಲಿ' ಪಾತ್ರವನ್ನ ಅತ್ಯಂತ ಕೆಟ್ಟ ವಿಲನ್ ಎಂದು ಹೊಗಳುತ್ತಿದ್ದಾರೆ.

ಸ್ಯಾಂಡಲ್ ವುಡ್ ನ 'ಮಾಸ್ ಸ್ಟಾರ್'

ಧನಂಜಯ್ ಈ ಚಿತ್ರದ ನಂತರ ಕನ್ನಡದ ಮಾಸ್ ಸ್ಟಾರ್ ಆಗಿ ಹೊರಹೊಮ್ಮುತ್ತಾರೆ ಎನ್ನುವುದು ಚಿತ್ರ ರಸಿಕರ ಭವಿಷ್ಯ.

ಶಿವಣ್ಣನ 'ಟಗರು' ಈ ವರ್ಷ ಫೀಲ್ಡ್ ಗೆ ಇಳಿಯುವುದಿಲ್ಲ.!

'ಕಿಲ್ಲಿಂಗ್' ಲುಕ್

ಇದುವರೆಗೂ ಧನಂಜಯ್ ಅವರು ಅಭಿನಯಿಸಿರುವ ಇಷ್ಟು ಸಿನಿಮಾ ಹಾಗೂ ಪಾತ್ರಗಳಲ್ಲಿ ಇದು ವಿಶೇಷವಾದ ಪಾತ್ರ. ಸಖತ್ ಕಿಲ್ಲಿಂಗ್ ಆಗಿದೆ.

English summary
Kannada Fans are appreciate to the Tagaru Teaser and Dhananjay. The movie features Shiva Rajkumar, Dhananjaya, Vasista Simha and Others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X