'ಶಿವಣ್ಣನ ಮಹೋತ್ಸವ'ಕ್ಕೆ ಸಜ್ಜಾಗುತ್ತಿದ್ದಾರೆ ಅಭಿಮಾನಿಗಳು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಶಿವಣ್ಣನ ಮೊಹೋತ್ಸವಕ್ಕೆ ಸಜ್ಜಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಡುವೆಯೂ ಅಭಿಮಾನಿಗಳು ಸಂಭ್ರಮಕ್ಕೆ ಸಿದ್ಧರಾಗಿದ್ದಾರೆ. ಏನಿದು ಶಿವಣ್ಣನ ಮಹೋತ್ಸವ ಅಂತೀರಾ? ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ ಸಮೀಪಿಸುತ್ತಿದೆ.

Recommended Video

ಸುಶಾಂತ್ ಸಾವಿನ ಬಗ್ಗೆ ತನ್ನ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಹೇಳಿದ್ದೇನು ಗೊತ್ತಾ..? | Salman Khan | Sushanth

ಮುಂದಿನ ತಿಂಗಳು ಜುಲೈ 12ಕ್ಕೆ ಶಿವರಾಜ್ ಕುಮಾರ್ ಹುಟ್ಟುಹಬ್ಬ. ಶಿವರಾಜ್ ಕುಮಾರ್ ಹುಟ್ಟುಹಬ್ಬ ಅಂದ್ಮೇಲೆ ಅಭಿಮಾನಿಗಳ ಸಂಭ್ರಮ ತುಸು ಜೋರಾಗೆ ಇರುತ್ತೆ. ಅಭಿಮಾನಿಗಳು ಮನೆಯ ಮುಂದೆಯೆ ಬಂದು ಜಮಾಯಿಸಿರುತ್ತಾರೆ. ಆದರೆ ಈ ಬಾರಿ ಶಿವಣ್ಣನ ಮನೆಯ ಬಳಿ ಹೋಗಿ ಸಂಭ್ರಮಿಸುವ ಹಾಗಿಲ್ಲ. ಕೊರೊನಾ ಹಾವಳಿಯ ಪರಿಣಾಮ ಅಭಿಮಾನಿಗಳು ಸೇರುವ ಹಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿಯೆ ಅಭಿಮಾನಿಗಳು ಹಬ್ಬ ಆಚರಿಸುತ್ತಿದ್ದಾರೆ.

ಈಗಾಗಲೆ ಅಭಿಮಾನಿಗಳು ಶಿವಣ್ಣನ ಮಹೋತ್ಸವ ಎನ್ನುವ ಹೆಸರಿನಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ಶಿವಣ್ಣನ ಮಹೋತ್ಸವ ಎನ್ನುವ ಟೈಟಲ್ ಮತ್ತು ಲೋಗೋವನ್ನು ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದೊರೆ.

Fans Are Celebrating Shivraj Kumars Birthday In The Name Of Shivanna Mahotsava

ಜುಲೈ 12ಕ್ಕೆ ಶಿವಣ್ಣ 58ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಪ್ರತಿ ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿಯೆ ಅಭಿಮಾನಿಗಳು ಸಂಭ್ರಮಿಸಲಿದ್ದಾರೆ.

More from Filmibeat

English summary
Fans are celebrating Shivaraj Kumar's birthday in the name of Shivanna Mahotsava.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X