ಯುಗಾದಿಗೆ ಹಳೆ ಪಿಕ್ ಬಳಕೆ, ಪ್ರವಾಸದಲ್ಲೂ ರಾಧಿಕಾ ಸಿಂಗಲ್ ಫೋಟೊ; ಅಭಿಮಾನಿಗಳಲ್ಲಿ ಶುರು ಅನುಮಾನ!

ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಬಿಗ್ಗೆಸ್ಟ್ ಚಿತ್ರ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಇದೇ ಏಪ್ರಿಲ್ 14ಕ್ಕೆ ಒಂದು ವರ್ಷ ಕಳೆಯಲಿದೆ. ಆ ವರ್ಷ ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನು ಬರೆದಿದ್ದ ಈ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿತ್ತು.

ಹೀಗೆ ದೊಡ್ಡ ಮಟ್ಟದ ಚಿತ್ರವನ್ನು ನೀಡಿದ ಯಶ್ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಮೂಡಿದೆ. ಯಶ್ 19ನೇ ಸಿನಿಮಾವನ್ನು ಯಾವ ನಿರ್ದೇಶಕ ನಿರ್ದೇಶಿಸಲಿದ್ದಾರೆ, ಯಾವ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ ಹಾಗೂ ಯಾವ ರೀತಿಯ ಕಥೆಯನ್ನು ಯಶ್ ಆರಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಹಾಗೂ ಚಿತ್ರ ಪ್ರೇಮಿಗಳನ್ನು ಕಾಡಿವೆ.

Fans are doubting about look change as Yash not appeared on social media since 1 month

ಹೀಗೆ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದ್ದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ಕೆಜಿಎಫ್ ಎರಡನೇ ಚಾಪ್ಟರ್ ಬಿಡುಗಡೆಯಾಗಿ ವರ್ಷ ಕಳೆದರೂ ತಮ್ಮ ಮುಂದಿನ ಚಿತ್ರ ಯಾವುದು ಎಂಬುದನ್ನು ಘೋಷಿಸಿಲ್ಲ ಹಾಗೂ ಕೊಂಚ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡದ ಕಾರಣ ಸಾಕಷ್ಟು ಸುದ್ದಿಗಳು ಹಾಗೂ ಊಹಾಪೋಹಗಳು ಈ ಕುರಿತು ಹರಿದಾಡುತ್ತಿದ್ದು, ಇದೀಗ ಯಶ್ ಹಾಗೂ ರಾಧಿಕಾ ಪಂಡಿತ್ ನಡೆದುಕೊಳ್ಳುತ್ತಿರುವ ರೀತಿ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿವೆ.

ಹೌದು, ಯಶ್ 19 ಚರ್ಚೆ ಒಂದೆಡೆ ಜೋರಾಗಿದ್ದರೆ, ಮತ್ತೊಂದೆಡೆ ಯಶ್ ಇತ್ತೀಚಿನ ದಿನಗಳಲ್ಲಿ ತಮ್ಮ ಹೊಸ ಫೋಟೊವನ್ನು ಎಲ್ಲಿಯೂ ಹಂಚಿಕೊಳ್ಳದೇ ಇರುವುದು ಸದ್ಯ ಅನುಮಾನಕ್ಕೆ ಕಾರಣವಾಗಿದೆ. ರಾಧಿಕಾ ಪಂಡಿತ್ ಕಳೆದ ಎರಡು ದಿನಗಳ ಹಿಂದೆ ಯುರೋಪ್ ಪ್ರವಾಸದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಯಾವುದೇ ಫೋಟೊದಲ್ಲಿಯೂ ಯಶ್ ಜತೆ ಕಾಣಿಸಿಕೊಂಡಿಲ್ಲ. ಆದರೆ ಈ ಫೋಟೊಗಳನ್ನೆಲ್ಲಾ ಕ್ಲಿಕ್ಕಿಸಿದ್ದು ಯಶ್ ಎಂಬುದನ್ನು ಸಹ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

Fans are doubting about look change as Yash not appeared on social media since 1 month

ಹಿಂದೆಲ್ಲಾ ಪ್ರವಾಸ ಕೈಗೊಂಡಾಗ ಇಬ್ಬರೂ ಇರುವ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದ ರಾಧಿಕಾ ಪಂಡಿತ್ ಈಗ ತನ್ನ ಕಳೆದ ಐದಾರು ಪೋಸ್ಟ್‌ಗಳಲ್ಲಿ ತನ್ನ ಸಿಂಗಲ್ ಫೋಟೊಗಳನ್ನು ಮಾತ್ರ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿದರೆ ಯಶ್ ತಮ್ಮ ಮುಂದಿನ ಚಿತ್ರಕ್ಕಾಗಿ ಲುಕ್ ಬದಲಿಸಿಕೊಂಡಿದ್ದಾರಾ ಎಂಬ ಅನಮಾನ ಮೂಡುತ್ತದೆ. ಅಭಿಮಾನಿಗಳೂ ಸಹ ಇದೇ ಅನುಮಾನವನ್ನು ಹೊರಹಾಕಿದ್ದು ಲುಕ್ ರಿವೀಲ್ ಆಗಬಾರದು ಎಂಬ ಕಾರಣದಿಂದ ಈ ರೀತಿ ಹೆಜ್ಜೆ ಇಡುತ್ತಿರಬಹುದಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೇ ಯುಗಾದಿ ಹಬ್ಬದ ಪ್ರಯುಕ್ತ ರಾಧಿಕಾ ಪಂಡತ್ ಹಬ್ಬದ ಆಚರಣೆಯ ಹೊಸ ಫೋಟೊಗಳನ್ನು ಹಂಚಿಕೊಂಡು ಹಬ್ಬಕ್ಕೆ ಶುಭಾಶಯ ಕೋರಿದ್ದರು. ಆದರೆ ಈ ಫೋಟೊಗಳಲ್ಲಿ ಯಶ್ ಜತೆಗಿನ ಸೆಲ್ಫಿ ಫೋಟೊ ಮಾತ್ರ 2020ನೇ ವರ್ಷದ್ದಾಗಿತ್ತು. ಹೀಗೆ ಯುಗಾದಿ ಹಬ್ಬದ ದಿನವೂ ಸಹ ಹಳೆ ಫೋಟೊವನ್ನು ಹಂಚಿಕೊಂಡದ್ದು ಯಶ್ ಲುಕ್ ಬದಲಾಗಿರಬಹುದು ಎಂಬ ಅನುಮಾವನ್ನು ದುಪ್ಪಟ್ಟುಗೊಳಿಸಿವೆ. ಇನ್ನು ಯಶ್ ಅಂತಿಮವಾಗಿ ಜನರ ಕಣ್ಣಿಗೆ ಕಾಣಿಸಿಕೊಂಡಿದ್ದು ಮಾರ್ಚ್ 8ರಂದು ರಾಧಿಕಾ ಪಂಡಿತ್ ಅಪ್‌ಲೋಡ್ ಮಾಡಿದ್ದ ಹುಟ್ಟುಹಬ್ಬದ ಫೋಟೊದಲ್ಲಿ ಮಾತ್ರ. ಅತ್ತ ಯಶ್ ತಮ್ಮ ಮುಂದಿನ ಚಿತ್ರದ ಅಪ್‌ಡೇಟ್ ಅನ್ನು ಏಪ್ರಿಲ್ 14ರಂದು ನೀಡಲಿದ್ದಾರೆ ಎಂಬ ಸುದ್ದಿ ಇದ್ದು, ಯಶ್ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.

More from Filmibeat

English summary
Fans are doubting about look change as Yash not appeared on social media since 1 month. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X