For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಲ್ಲಿ 12ನೇ ವರ್ಷಕ್ಕೆ ಕಾಲಿಡುತ್ತಿರುವ ಯಶ್: ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜು

  |

  'ಕೆಜಿಎಫ್' ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 12 ವರ್ಷಗಳಾಗುತ್ತಿದೆ. 2008ರಲ್ಲಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಯಶ್ ಇಂದು ಇಡೀ ದೇಶವೆ ಕೊಂಡಾಡುವ ದೊಡ್ಡ ನಟನಾಗಿ ಗುರುತಿಸಿಕೊಂಡಿದ್ದಾರೆ.

  ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Filmibeat Kannada

  'ಜಂಬದ ಹುಡುಗಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯಶ್, ನಂತರ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರಪ್ರೇಕ್ಷಕರ ಮುಂದೆ ಬಂದಿದ್ದಾರೆ. ಶಶಾಂಕ್ ನಿರ್ದೇಶನದ 'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಿರುವ ಯಶ್ 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಮುಂದೆ ಓದಿ...

  ಯಶ್ ಮೇಲೆ ಅಂಬರೀಶ್ ಅಭಿಮಾನಿಗಳ ಮುನಿಸು: ಕಾರಣವೇನು?ಯಶ್ ಮೇಲೆ ಅಂಬರೀಶ್ ಅಭಿಮಾನಿಗಳ ಮುನಿಸು: ಕಾರಣವೇನು?

  ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜು

  ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜು

  ಕೆಜಿಎಫ್ ಸಿನಿಮಾ ನಂತರ ಯಶ್ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಗಡಿಗೂ ಮೀರಿ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಯಶ್ 12 ವರ್ಷದ ಸಂಭ್ರಮವನ್ನು ಅಭಿಮಾನಿಗಳು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ಸಜ್ಜಾಗಿದ್ದಾರೆ. ಕೊರೊನಾ ಹಾವಳಿಯ ಪರಿಣಾಮ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುವುದು, ಸೆಲಬ್ರೇಶನ್ ಮಾಡುವ ಹಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿಯೆ ಯಶ್ 12ನೇ ವರ್ಷದ ಪಯಣವನ್ನು ಹಬ್ಬದಂತೆ ಆಚರಿಸಲು ತಯಾರಾಗಿದ್ದಾರೆ.

  ತಮ್ಮನನ್ನು ಎಷ್ಟು ಮುದ್ದಿಸುತ್ತಾಳೆ ಐರಾ...: ಮುದ ನೀಡುವ ಮುದ್ದಾದ ವಿಡಿಯೋತಮ್ಮನನ್ನು ಎಷ್ಟು ಮುದ್ದಿಸುತ್ತಾಳೆ ಐರಾ...: ಮುದ ನೀಡುವ ಮುದ್ದಾದ ವಿಡಿಯೋ

  2008 ಜುಲೈ 18ಕ್ಕೆ 'ಮೊಗ್ಗಿನ ಮನಸ್ಸು' ರಿಲೀಸ್

  2008 ಜುಲೈ 18ಕ್ಕೆ 'ಮೊಗ್ಗಿನ ಮನಸ್ಸು' ರಿಲೀಸ್

  ಯಶ್ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ 'ಮೊಗ್ಗಿನ ಮನಸ್ಸು' 2008 ಜುಲೈ 18ರಂದು ಈ ಸಿನಿಮಾ ರಿಲೀಸ್ ಆಗಿದೆ. ಸಿನಿಮಾದಲ್ಲಿ ಯಶ್ ಸಂಪೂರ್ಣವಾಗಿ ಇರದಿದ್ದರು ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಜುಲೈ 18 ಅಂದರೆ ಸಂಭ್ರಮಕ್ಕೆ ಇನ್ನೂ ಇನ್ನು ಒಂದು ತಿಂಗಳು ಬಾಕಿ ಇದೆ. ಆದರೆ ಈಗಾಗಲೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಗಳನ್ನು ಶೇರ್ ಮಾಡಿ ಸಂತಸ ಪಡುತ್ತಿದ್ದಾರೆ.

  ಜುಲೈ 18ಕ್ಕೆ ಟ್ವಿಟ್ಟರ್ ಟ್ರೆಂಡ್

  ಜುಲೈ 18ಕ್ಕೆ ಟ್ವಿಟ್ಟರ್ ಟ್ರೆಂಡ್

  ವಿಶೇಷ ಅಂದರೆ ಜುಲೈ 18ರಂದು ಅಭಿಮಾನಿಗಳು ಟ್ವಿಟ್ಟರ್ ಟ್ರೆಂಡ್ ಮಾಡುವಂತೆ ಈಗಾಗಲೆ ಕರೆನೀಡಿದ್ದಾರೆ. "ಚಿತ್ರರಂಗದಲ್ಲಿ ಯಶ್ ಬಾಸ್ 12 ವರ್ಷ ಪೂರೈಸಿದ ಹಿನ್ನಲೆ ಮಾಸಿವ್ ಟ್ರೆಂಡ್ ಮಾಡಲು ತಯಾರಾಗಿ, ಎಲ್ಲರೂ ಭಾಗಿಯಾಗಿ ಗ್ರ್ಯಾಂಡ್ ಸಕ್ಸಸ್ ಮಾಡಿ" ಎಂದು ಪೋಸ್ಟರ್ ಮಾಡಿ ವೈರಲ್ ಮಾಡುತ್ತಿದ್ದಾರೆ.

  ಕೆಜಿಎಫ್ 2 ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ಹಿರಿಯ ನಟಿಕೆಜಿಎಫ್ 2 ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ಹಿರಿಯ ನಟಿ

  ಕೆಜಿಎಫ್-2 ಸಿನಿಮಾದಲ್ಲಿ ಯಶ್

  ಕೆಜಿಎಫ್-2 ಸಿನಿಮಾದಲ್ಲಿ ಯಶ್

  ಕನ್ನಡಾಭಿಮಾನಿಗಳು ಮಾತ್ರವಲ್ಲದೆ ಬೇರೆ ಭಾಷೆಯ ಯಶ್ ಅಭಿಮಾನಿಗಳು ಸಹ ಈ ಪೋಸ್ಟರ್ ಶೇರ್ ಮಾಡಿ ಟ್ರೆಂಡ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಯಶ್ ಸದ್ಯ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿ ಕೊನೆಯ 20 ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಚಿತ್ರತಂಡ, ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡಲಿದೆ.

  English summary
  Kannada Actor Yash will complete 12 years in Kannada film Industry on July 18. Fans are eagerly waiting to celebrate yash's 12 years journey on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X