ಕೀನ್ಯಾದಿಂದ ವಾಪಸ್ ಆದ ಡಿ ಬಾಸ್ ನೋಡಲು ಮುಗಿಬಿದ್ದ ಅಭಿಮಾನಿಗಳು

Recommended Video

ಕೀನ್ಯಾದಿಂದ ವಾಪಸ್ ಆದ ಡಿ ಬಾಸ್ ನೋಡಲು ಮುಗಿಬಿದ್ದ ಅಭಿಮಾನಿಗಳು | Darshan | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಲ್ಡ್ ಲೈಫ್ ಫೋಟೋಗ್ರಫಿಗಾಗಿ ಕೀನ್ಯಾಗೆ ತೆರೆಳಿದ್ದರು. ರಾಬರ್ಟ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ದರ್ಶನ್ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಹಾಕಿ ಕೀನ್ಯಾ ಪ್ರವಾಸ ಕೈಗೊಂಡಿದ್ದರು. ಕೀನ್ಯಾದ ಕಾಡಿನಲ್ಲಿ ವನ್ಯ ಜೀವಿಗಳನ್ನು ಸೆರೆಹಿಡಿದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಕ್ಯಾಮರಾ ಜೊತೆ ಕೀನ್ಯಾಗೆ ತೆರಳಿದ್ದ ದರ್ಶನ್ ಒಂದಿಷ್ಟು ಪ್ರಾಣಿ-ಪಕ್ಷಿಗಳನ್ನು ಸೆರೆಹಿಡಿದುಕೊಂಡು ಬಂದಿದ್ದಾರೆ. ಮನೆಗೆ ತೆರಳಿರುವ ದರ್ಶನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಇಂದು ಬೆಳ್ಳಂಬೆಳಗ್ಗೆ ಅಭಿಮಾನಿಗಳು ದರ್ಶನ್ ಮನೆ ಮುಂದೆ ಜಮಾಯಿಸಿದ್ದರು. ನೆಚ್ಚಿನ ನಟನ ದರ್ಶನಕ್ಕಾಗಿ ಬೆಳಗ್ಗೆಯಿಂದನೆ ಮನೆಮುಂದೆ ಕಾಯುತ್ತಿದ್ದರು.

ಇಂದು ಸಂಡೆ ಹಾಗಾಗಿ ದರ್ಶನ್ ಮನೆಯಲ್ಲೆ ಇದ್ದರು. ರಾಜರಾಜೇಶ್ವರಿ ನಗರದ ನಿವಾಸದ ಮುಂದೆ ಜಮಾಯಿಸಿದ್ದ ಅಭಿಮಾನಿಗಳ ಜೊತೆ ಒಂದಿಷ್ಟು ಸಮಯ ಕಾಲಕಳೆದ್ದಾರೆ. ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟು ಸಂತಸಪಟ್ಟಿದ್ದಾರೆ. ಇನ್ನು ಒಂದಿಷ್ಟು ಅಭಿಮಾನಿಗಳು ಅವರ ವಾಹನದ ಮೇಲೆ ದರ್ಶನ್ ಆಟೋಗ್ರಾಫ್ ಹಾಕಿಸಿಕೊಂಡು ಖುಷಿಪಟ್ಟಿದ್ದಾರೆ.

Fans Are Gathered Infront Of The House To See And Meet Darshan

ದರ್ಶನ್ ಗೆ ಇರುವ ಫ್ಯಾನ್ ಬೇಸ್ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೆ ದರ್ಶನ್ ನೋಡಲು ಮನೆಯವರೆಗೂ ಬರುವ ಅಭಿಮಾನಿಗಳನ್ನು ಯಾವತ್ತು ಕಾಯಿಸುವುದಿಲ್ಲ. ಅಭಿಮಾನಿಗಳನ್ನು ಮಾತನಾಡಿಸಿ ಅವರ ಜೊತೆ ಫೋಟೋಗೆ ಫೋಸ್ ನೀಡಿ ಅಭಿಮಾನಿಗಳ ಆಸೆಯನ್ನು ಈಡೇರಿಸುತ್ತಾರೆ.

ಸದ್ಯ ಕೀನ್ಯಾದಿಂದ ವಾಪಾಸ್ ಆಗಿರುವ ದರ್ಶನ್ ಅಕ್ಟೋಬರ್ 2ರಿಂದ ಮತ್ತೆ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ರಾಬರ್ಟ್ ಚಿತ್ರದ ಮುಂದಿನ ಹಂತದ ಚಿತ್ರೀಕರಣ ಉತ್ತರ ಭಾರತದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಪ್ರಮುಖ ದೃಶ್ಯದ ಚಿತ್ರೀಕರಣಕ್ಕಾಗಿ ಚಿತ್ರತಂಡ ಉತ್ತರ ಭಾರತದ ಕಡೆ ಪಯಾಣ ಬೆಳೆಸಲಿದೆ. ರಾಬರ್ಟ್ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದರ್ಶನ್ ಗೆ ಜೋಡಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor darshan reurn from kenya. Fans are gathered infront of the house to see and meet Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X