ಮೊನ್ನೆ ದರ್ಶನ್ ಗೆ ಆಗಿದ್ದೇ ಈಗ ಯಶ್ ಗೂ ಆಯ್ತು.!

Recommended Video

Lok Sabha Elections 2019 : ಮೊನ್ನೆ ದರ್ಶನ್, ನಿನ್ನೆ ಯಶ್. ಏನದು ಸ್ಟೋರಿ? | Oneindia Kannada

ನಟ ದರ್ಶನ್ ಮತ್ತು ಯಶ್ ಇಬ್ಬರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಕಳೆದ ಮೂರು ದಿನದಿಂದ ಶ್ರೀರಂಗಪಟ್ಟಣ, ಕೆಆರ್ ಪೇಟೆ, ಕೆ.ಆರ್ ನಗರ, ಮಂಡ್ಯ ನಗರಗಳಲ್ಲಿ ಮತಯಾಚನೆ ಮಾಡ್ತಿರುವ ಡಿ ಬಾಸ್ ಮತ್ತು ರಾಕಿ ಭಾಯ್ ಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಈ ಮಧ್ಯೆ ದರ್ಶನ್ ಪ್ರಚಾರ ಮಾಡುವ ವೇಳೆ ಕೆಲವು ಅಭಿಮಾನಿಗಳು ಡಿ ಬಾಸ್ ವಿರುದ್ಧ ಆಕ್ರೋಶಗೊಂಡ ಘಟನೆ ನಡೆದಿತ್ತು. ಹಳ್ಳಿ ಹಳ್ಳಿಗೂ ಹೋಗಿ ಮತ ಕೇಳುತ್ತಿರುವ ದರ್ಶನ್ ಅಂದು ಸಂಜೆ ಸಮಯ ಹೆಚ್ಚು ಆದ ಕಾರಣ ಪ್ರಚಾರ ಮುಂದೂಡುವ ನಿರ್ಧಾರಕ್ಕೆ ಬಂದಿದ್ದರು.

ಆದ್ರೆ, ಹಳ್ಳಿಯೊಳಗೆ ಬಾರದೆ ವಾಪಸ್ ಹೋಗುತ್ತಿದ್ದ ದರ್ಶನ್ ವಿರುದ್ಧ ಅಭಿಮಾನಿಗಳು ಮುನಿಸಿಕೊಂಡರು. ಊರಿನ ಒಳಗೆ ಬರಲೇಬೇಕು ಎಂದು ಪಟ್ಟು ಹಿಡಿದರು. ಇಲ್ಲವಾದಲ್ಲಿ ನಿಖಿಲ್ ಗೆ ಮತ ಹಾಕುವುದಾಗಿ ಎಚ್ಚರಿಕೆ ನೀಡಿದರು. ಇದರಿಂದ ನಿರ್ಧಾರ ಬದಲಿಸಿದ ದರ್ಶನ್, ಆ ಊರಿನ ಒಳಗೆ ಹೋಗಿ ಪ್ರಚಾರ ಮಾಡಿದ್ದರು.

Fans argued in front of Yash and Darshan campaign

ನಂತರ ಅಭಿಮಾನಿಗಳು ಕೂಡ ಖುಷಿಯಾಗಿ ದರ್ಶನ್ ಅವರಿಗೆ ಗೌರವದಿಂದ ಜೈಕಾರ ಹಾಕಿ ಸಂಭ್ರಮಿಸಿದರು. ಇಂತಹದ್ದೇ ಘಟನೆ ಯಶ್ ಅವರಿಗೂ ನಡೆಯಿತು. ಸಮಯದ ಅಭಾವದಿಂದ ಊರಿನ ಒಳಗೆ ಹೋಗಲು ಸಾಧ್ಯವಾಗದೇ ವಾಪಸ್ ಹೋಗಲು ಯಶ್ ನಿರ್ಧರಿಸಿದ್ದರು.

ಆದ್ರೆ, ಅಭಿಮಾನಿಗಳು ಬಿಡಲಿಲ್ಲ. ನಮ್ಮ ಊರಿಗೆ ಅಂಬರೀಶ್ ಅವರು ಪ್ರಚಾರಕ್ಕೆ ಬಂದಿದ್ದರು. ನೀವು ಬರಲೇಬೇಕು ಎಂದು ಪಟ್ಟು ಹಿಡಿದರು. ಅಂತಿಮವಾಗಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಯಶ್ ಊರಿನ ಒಳಗೆ ಹೋಗಿ ಪ್ರಚಾರ ಮಾಡಿದ್ರು.

More from Filmibeat

English summary
Kannada actor darshan and yash is campaigning for sumalatha ambarish in mandya each and every village.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X