For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆಗಿನ ಫೋಟೋ ತೆಗೆಯುವಂತೆ ಕುರುಕ್ಷೇತ್ರ 'ಭೀಮ'ನಿಗೆ ಒತ್ತಾಯ

  By ಫಿಲ್ಮಿಬೀಟ್ ಡೆಸ್ಕ್
  |

  25 ಕೋಟಿ ಲೋನ್ ವಿವಾದ, ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪಗಳಿಂದ ನಟ ದರ್ಶನ್ ಹೆಸರು ವಿವಾದಕ್ಕೆ ಸಿಲುಕಿಕೊಂಡಿತ್ತು. ನಿರ್ದೇಶಕ ಇಂದ್ರಜಿತ್ ಲಂಕೇಶ್ ಎಂಟ್ರಿಯಿಂದ ಈ ಪ್ರಕರಣ ಹಲವು ರೀತಿಯ ಆಯಾಮಗಳು ಪಡೆದುಕೊಂಡಿತ್ತು. ಇಂದ್ರಜಿತ್ vs ದರ್ಶನ್ ಎನ್ನುವಂತೆ ವಾದ-ಪ್ರತಿವಾದಗಳು ನಡೆದವು.

  ದರ್ಶನ್ ಜೊತೆಗಿನ ಫೋಟೋ ತೆಗೆಯುವಂತೆ ಡ್ಯಾನಿಶ್ ಗೆ ಬೆದರಿಕೆ ಹಾಕ್ತಿದ್ದಾರ..?

  ಈ ಸಂಬಂಧ ದೂರು-ಪ್ರತಿದೂರುಗಳು ಸಹ ದಾಖಲಾಗಿದೆ. ದರ್ಶನ್ ಬೆಂಬಲಿಗರ ವಿರುದ್ಧ ಇಂದ್ರಜಿತ್ ದೂರು ದಾಖಲಿಸಿದ್ದರೆ, ರಾಜ್ಯದ ಹಲವು ಕಡೆ ಇಂದ್ರಜಿತ್ ವಿರುದ್ಧ ನಟ ದರ್ಶನ್ ಅಭಿಮಾನಿಗಳು ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೆಲವು ಸಿನಿ ಪ್ರಮುಖ ದರ್ಶನ್ ಪರ ಬೆಂಬಲವಾಗಿ ನಿಂತರು. ಅನೇಕರು ಮೌನಕ್ಕೆ ಶರಣಾದರು. ಇದೀಗ, ಕುರುಕ್ಷೇತ್ರ ಸಿನಿಮಾದಲ್ಲಿ ಭೀಮನ ಪಾತ್ರ ಮಾಡಿದ್ದ ಡ್ಯಾನಿಶ್ ಅಖ್ತರ್ ಸೈಫ್‌ಗೆ ದರ್ಶನ್ ಜೊತೆಗಿನ ಫೋಟೋ ತೆಗೆಯುವಂತೆ ಒತ್ತಾಯ ಹೆಚ್ಚಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಮುಂದೆ ಓದಿ...

  ಪ್ರೊಫೈಲ್ ಪಿಕ್ಚರ್ ಬದಲಾಯಿಸುವಂತೆ ಒತ್ತಾಯ

  ಪ್ರೊಫೈಲ್ ಪಿಕ್ಚರ್ ಬದಲಾಯಿಸುವಂತೆ ಒತ್ತಾಯ

  ಕುರುಕ್ಷೇತ್ರದ ಮೂಲಕ ನಟ ಡ್ಯಾನಿಶ್ ಅಖ್ತರ್ ಸೈಫ್ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಅಲ್ಲಿಂದಲೂ ದರ್ಶನ್ ಜೊತೆ ಡ್ಯಾನಿಶ್ ಉತ್ತಮ ಸ್ನೇಹ ಹೊಂದಿದ್ದಾರೆ. ಇದರ ಪ್ರತೀಕವಾಗಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ದರ್ಶನ್ ಜೊತೆಗಿರುವ ಫೋಟೋವನ್ನು ಪ್ರೊಫೈಲ್ ಡಿಪಿಗೆ ಹಾಕಿದ್ದಾರೆ. ಈ ಫೋಟೋವನ್ನು ತೆಗೆಯುವಂತೆ ಹಲವರು ಒತ್ತಾಯ ಮಾಡ್ತಿದ್ದಾರೆ ಎಂದು ಸ್ವತಃ ಡ್ಯಾನಿಶ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

  ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ

  ಎಂದಿಗೂ ಬದಲಾಯಿಸಿಲ್ಲ

  ಎಂದಿಗೂ ಬದಲಾಯಿಸಿಲ್ಲ

  ''ಕರ್ನಾಟಕದ ಕೆಲವು ಜನರು ದರ್ಶನ್ ಸರ್ ಅವರೊಂದಿಗೆ ಪ್ರೊಫೈಲ್ ಪಿಕ್ಚರ್ ಡಿಪಿ ಬದಲಾಯಿಸಿ ಎಂದು ಹೇಳುತ್ತಾರೆ. ನಾನು ಎಂದಿಗೂ ದರ್ಶನ್ ಸರ್ ಅವರೊಂದಿಗೆ ನನ್ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸುವುದಿಲ್ಲ ಎಂದು ಹೇಳಲು ಬಯಸುತ್ತೇನೆ. ದರ್ಶನ್ ಸರ್ ನನ್ನ ಹೃದಯದಲ್ಲಿದೆ ... ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ'' ಎಂದು ಡ್ಯಾನಿಶ್ ಟ್ವೀಟ್ ಮಾಡಿದ್ದಾರೆ.

  ಡ್ಯಾನಿಶ್ ಕರೆತಂದಿದ್ದೆ ದರ್ಶನ್

  ಡ್ಯಾನಿಶ್ ಕರೆತಂದಿದ್ದೆ ದರ್ಶನ್

  ಹಿಂದಿ ಕಿರುತೆರೆಯಲ್ಲಿ ನಟಿಸುತ್ತಿದ್ದ ಡ್ಯಾನಿಶ್ ಅಖ್ತರ್ ಸೈಫ್ ಅವರನ್ನು ಕನ್ನಡ ಇಂಡಸ್ಟ್ರಿಗೆ ಕರೆತಂದಿದ್ದೇ ನಟ ದರ್ಶನ್. ಕುರುಕ್ಷೇತ್ರ ಚಿತ್ರದಲ್ಲಿ ಭೀಮನ ಪಾತ್ರ ಇವರೇ ಮಾಡಬೇಕು ಎಂದು ನಿರ್ಮಾಪಕರ ಬಳಿ ಆಯ್ಕೆ ಮಾಡಿಕೊಂಡರಂತೆ. ಆಗಿನಿಂದಲೂ ಡ್ಯಾನಿಶ್‌ಗೆ ದರ್ಶನ್ ಅವರ ಅಭಿಮಾನಿ. ಪ್ರತಿ ಸಂದರ್ಭದಲ್ಲೂ ದರ್ಶನ್ ಪರ ನಿಂತಿದ್ದಾರೆ.

  ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಬಯಸುತ್ತೇನೆ ಎಂದ 'ಕುರುಕ್ಷೇತ್ರ'ದ ಭೀಮಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಬಯಸುತ್ತೇನೆ ಎಂದ 'ಕುರುಕ್ಷೇತ್ರ'ದ ಭೀಮ

  ಕೋಟಿಗೊಬ್ಬ-3, ಕಬ್ಜ ಚಿತ್ರಗಳಲ್ಲಿ ನಟನೆ

  ಕೋಟಿಗೊಬ್ಬ-3, ಕಬ್ಜ ಚಿತ್ರಗಳಲ್ಲಿ ನಟನೆ

  ಕುರುಕ್ಷೇತ್ರ ಸಿನಿಮಾದ ನಂತರ ಹಲವು ಕನ್ನಡ ಸಿನಿಮಾಗಳಲ್ಲಿ ಡ್ಯಾನಿಶ್ ಅಖ್ತರ್ ಸೈಫ್ ನಟಿಸುತ್ತಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಸಿನಿಮಾ ಮಾಡಿದ್ದರು. ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈಗ ಉಪೇಂದ್ರ ಜೊತೆ ಕಬ್ಜ ಚಿತ್ರದಲ್ಲೂ ನಟಿಸುತ್ತಿದ್ದಾರೆ.

  English summary
  Fans ask Danish Akhtar saifi to remove his twitter DP with Darshan: Here is what actor replied.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X