For Quick Alerts
  ALLOW NOTIFICATIONS  
  For Daily Alerts

  'ರಕ್ಷಿತ್ ಶೆಟ್ಟಿನಾ ಮದುವೆ ಆಗಿ' ಎಂದ ಅಭಿಮಾನಿಗೆ ರಮ್ಯಾ ಕೊಟ್ಟ ಉತ್ತರವೇನು?

  |

  ರಮ್ಯಾ ಮತ್ತೆ ಸಿನಿಮಾ ಯಾವಾಗ ಮಾಡ್ತಾರೆ....? ರಮ್ಯಾ ಸಕ್ರಿಯ ರಾಜಕಾರಣದಲ್ಲಿ ಮತ್ತೆ ತೊಡಗಿಕೊಳ್ಳುತ್ತಾರಾ...? ರಮ್ಯಾ ಅವರ ಮದುವೆ ಯಾವಾಗ...? ಮೋಹಕ ತಾರೆಯ ವಿಚಾರ ಚರ್ಚೆಗೆ ಬಂದರೆ ಈ ಮೂರು ಪ್ರಶ್ನೆಗಳು ಜೊತೆಯಲ್ಲಿ ಹುಟ್ಟಿಕೊಳ್ಳುತ್ತದೆ.

  ಅಭಿಮಾನಿಗಳು ಏನೇ ಪ್ರಶ್ಮೆ ಕೇಳಿದ್ರೂ ಉತ್ತರ ಕೊಡ್ತಾರೆ - ರಮ್ಯಾ | Filmibeat Kannada

  ಸಿನಿಮಾ ಮತ್ತೆ ಮಾಡಲ್ಲ, ಸಕ್ರಿಯ ರಾಜಕಾರಣ ಆಗಲ್ಲ ಎಂದು ಅದಾಗಲೇ ರಮ್ಯಾ ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಮದುವೆ ಬಗ್ಗೆ ಸ್ಪಷ್ಟ ನಿರ್ಧಾರ ಅಥವಾ ನಿಲುವು ತಿಳಿಸಿರಲಿಲ್ಲ. ಮದುವೆ, ಬಾಯ್‌ಫ್ರೆಂಡ್, ಪ್ರೀತಿ ಈ ವಿಚಾರವಾಗಿ ರಮ್ಯಾ ಎಲ್ಲಿಯೂ ಮಾತಾನಾಡಿಲ್ಲ. ಇದೀಗ, ಇನ್ಸ್ಟಾಗ್ರಾಂನಲ್ಲಿ ರಮ್ಯಾ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳು ರಮ್ಯಾ ಅವರ ಮದುವೆ ಬಗ್ಗೆ ಪ್ರಶ್ನಿಸಿದ್ದಾರೆ. ಅದರಲ್ಲೊಬ್ಬ ಅಭಿಮಾನಿ ''ನೀವು ರಕ್ಷಿತ್ ಶೆಟ್ಟಿ ಅವರನಾ ಮದುವೆ ಆಗಿ'' ಎಂದು ಕೇಳಿದ್ದಾನೆ. ಅದಕ್ಕೆ ರಮ್ಯಾ ಕೊಟ್ಟ ಉತ್ತರವೇನು? ಮುಂದೆ ಓದಿ...

  ರಕ್ಷಿತ್ ಶೆಟ್ಟಿನಾ ಟ್ಯಾಗ್ ಮಾಡಿದ ರಮ್ಯಾ

  ರಕ್ಷಿತ್ ಶೆಟ್ಟಿನಾ ಟ್ಯಾಗ್ ಮಾಡಿದ ರಮ್ಯಾ

  ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ವೇಳೆ ರಮ್ಯಾ ಅವರಿಗೆ ''ನೀವು ರಕ್ಷಿತ್ ಶೆಟ್ಟಿನಾ ಮದುವೆ ಆಗಿ'' ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಬಹಳ ಕೂಲ್ ಆಗಿ ಉತ್ತರಿಸಿದ ರಮ್ಯಾ, ರಕ್ಷಿತ್ ಶೆಟ್ಟಿ ಅವರ ಇನ್ಸ್ಟಾ ಖಾತೆಯನ್ನು ಟ್ವೀಟ್ ಮಾಡಿ ನಗುವ ಎಮೋಜಿ ಹಾಕಿದ್ದಾರೆ.

  ಮದುವೆ, ಲವ್, ಡೇಟಿಂಗ್?

  ಮದುವೆ, ಲವ್, ಡೇಟಿಂಗ್?

  ಈ ವೇಳೆ ರಮ್ಯಾ ಅವರಿಗೆ ಹಲವರು ಮದುವೆ ಬಗ್ಗೆ ಪ್ರಶ್ನಿಸಿದ್ದಾರೆ. ಮೇಡಂ ಬೇಗ ಮದುವೆ ಆಗಿ, ನೀವು ಮದುವೆ ಆಗ್ಬಿಟ್ಟಿದ್ದೀರಾ?, ಮೇಡಂ ನನ್ನನ್ನು ಮದುವೆ ಆಗಿ, ದಯವಿಟ್ಟು ಮದುವೆ ಆಗಿ'' ಎಂದು ಪದೇ ಪದೇ ಕೇಳಿದ್ದಾರೆ. ಇದಕ್ಕೆಲ್ಲಾ ಕೂಲ್ ಆಗಿ ರಮ್ಯಾ ಉತ್ತರಿಸಿದ್ದಾರೆ. ಡೇಟಿಂಗ್ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೂ ''ಇಲ್ಲ'' ಎಂದು ಉತ್ತರಿಸಿದ್ದಾರೆ.

  ಮದುವೆ ಆದ್ರೆ ಖುಷಿಯಿಂದ ಇರೋಕೆ ಆಗಲ್ಲ

  ಮದುವೆ ಆದ್ರೆ ಖುಷಿಯಿಂದ ಇರೋಕೆ ಆಗಲ್ಲ

  ಮದುವೆ, ಮದುವೆ ಅಂತ ಪದೇ ಪದೇ ಎದುರಾದ ಪ್ರಶ್ನೆಗಳಿಂದ ನಟಿ ರಮ್ಯಾ ಸುಸ್ತಾದರು. ''ಮದುವೆ,,,, ಮದುವೆ,,,,ಮಾಡುವುದಕ್ಕೆ ಇದೊಂದೇ ಕೆಲಸ ಇರುವುದು ಅನ್ನೋ ಹಾಗೆ. ಮದುವೆ ಆದ್ಮೇಲೆ ಖುಷಿಯಿಂದ ಇರುವುದಕ್ಕೆ ಆಗಲ್ಲ ಗೊತ್ತಾ?'' ಎಂದು ಒಬ್ಬ ಅಭಿಮಾನಿಗೆ ಪ್ರತಿಕ್ರಿಯಿಸುವ ಮೂಲಕ ಮದುವೆ ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

  ರಕ್ಷಿತ್ ಶೆಟ್ಟಿಗೆ ಮೊದಲ ಕ್ರಶ್ ರಮ್ಯಾ

  ರಕ್ಷಿತ್ ಶೆಟ್ಟಿಗೆ ಮೊದಲ ಕ್ರಶ್ ರಮ್ಯಾ

  ರಮ್ಯಾ ಅಂದ್ರೆ ರಕ್ಷಿತ್ ಶೆಟ್ಟಿ ಅವರಿಗೆ ಬಹಳ ಇಷ್ಟ. ರಕ್ಷಿತ್ ಜೀವನದಲ್ಲಿ ಮೊದಲ ಸೆಲೆಬ್ರಿಟಿ ಕ್ರಶ್ ಹಾಗೂ ಕೊನೆಯ ಸೆಲೆಬ್ರಿಟಿ ಕ್ರಶ್ ರಮ್ಯಾ ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಟ್ರೈಲರ್ ನೋಡಿ ರಮ್ಯಾ ಹೊಗಳಿದ್ದರು. ಈಗ ಅಭಿಮಾನಿಯೊಬ್ಬ 'ರಕ್ಷಿತ್ ಅವರನ್ನು ಮದುವೆ ಆಗಿ'' ಎಂದು ಕೇಳಿದ್ದಾನೆ. ಅದಕ್ಕೆ ರಕ್ಷಿತ್ ಖಾತೆ ಟ್ಯಾಗ್ ಮಾಡಿದ್ದಾರೆ ನಟಿ. ಈ ಕುರಿತು ರಕ್ಷಿತ್ ಉತ್ತರ ಏನಿರುತ್ತೋ ಕಾದುನೋಡಬೇಕಿದೆ.

  English summary
  Fans asked to Actress Ramya to get Married with Rakshit shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X