ಅಭಿಮಾನಿಗಳ ಆಸೆಯಂತೆ ಇವರು 'ಗೀತಾ' ಆಗಬೇಕಂತೆ

By Pavithra

Recommended Video

ಅಭಿಮಾನಿಗಳ ಪ್ರಕಾರ ಇವರು ಗೀತಾ ಆಗ್ಬೇಕಂತೆ..! | FIlmibeat Kannada

ಗೋಲ್ಡನ್ ಸ್ಟಾರ್ ಗಣೇಶ್ 'ಚಮಕ್' ಸಿನಿಮಾ ನಂತರ ಎರಡು ಮೂರು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರೀಕರಣದ ಜೊತೆ ಜೊತೆಯಲ್ಲಿ ಕ್ರಿಕೆಟ್ ಆಡಲು ಸಿದ್ದವಾಗಿದ್ದಾರೆ ಗೋಲ್ಡನ್ ಸ್ಟಾರ್ . ಇವುಗಳ ಮಧ್ಯೆ ಗಣೇಶ್ ನಿರೂಪಣೆಯಲ್ಲಿ ಮೂಡಿ ಬರುವ ಸೂಪರ್ ಮಿನಿಟ್ ಕೂಡ ಆರಂಭವಾಗ್ತಿದೆ.

ಇತ್ತ ಅಭಿಮಾನಿಗಳು ಮಾತ್ರ ಗಣೇಶ್ ಅವರ ಹೊಸ ಸಿನಿಮಾ ಯಾವಾಗ ಸೆಟ್ಟೇರುತ್ತೆ? ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾತುರರಾಗಿದ್ದಾರೆ. ಹಾಗಂತ ಗಣೇಶ್ ಸಿನಿಮಾಗಳಲ್ಲಿ ಅಭಿನಯಿಸದೇ ಸುಮ್ಮನೇ ಕೂತಿಲ್ಲ. ಗಣೇಶ್ ಸಾಲು ಸಾಲು ಚಿತ್ರಗಳಲ್ಲಿ ಅಭಿನಯ ಮಾಡುತ್ತಿದ್ದಾರೆ.

ಚಿತ್ರೀಕರಣ ಮುಗಿಸಿ ಸಿನಿಮಾ ಬಗ್ಗೆ ಮಾಹಿತಿ ನೀಡುವ ಉದ್ದೇಶ ಚಿತ್ರತಂಡದ್ದು. ಸೆಟ್ಟೇರುವ ಮುನ್ನವೇ ಸದ್ದು ಮಾಡಿರುವ 'ಗೀತಾ' ಸಿನಿಮಾ ಅಭಿಮಾನಿಗಳಿಗೆ ಹೆಚ್ಚು ಹುಟ್ಟಿಸಿದೆ. ಅದರ ಜೊತೆಯಲ್ಲಿ ಚಿತ್ರಕ್ಕೆ ನಾಯಕಿ ಇವರೇ ಆಗಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ ಗೋಲ್ಡನ್ ಸ್ಟಾರ್ ಅಭಿಮಾನಿಗಳು.

'ಗೀತಾ' ಸಿನಿಮಾದ ನಾಯಕಿ ಯಾರು

'ಗೀತಾ' ಸಿನಿಮಾದ ನಾಯಕಿ ಯಾರು

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗೀತಾ' ಚಿತ್ರಕ್ಕೆ ನಾಯಕಿ ಹುಡುಕಾಟ ಶುರುವಾಗಿದೆ. ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಅಭಿಮಾನಿಗಳು ನಾಯಕಿ ಇವರೇ ಆಗಲಿ ಅಂತಿದ್ದಾರೆ.

ರಚಿತಾ ಜೋಡಿ ಆಗಲಿ ಎಂದ ಫ್ಯಾನ್ಸ್

ರಚಿತಾ ಜೋಡಿ ಆಗಲಿ ಎಂದ ಫ್ಯಾನ್ಸ್

ಗಣೇಶ್ ಅಭಿಮಾನಿಗಳು 'ಗೀತಾ' ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆದರೆ ಚೆನ್ನಾಗಿರುತ್ತೆ ಎನ್ನುವ ಸಲಹೆಯನ್ನು ಕೊಟ್ಟಿದ್ದಾರೆ. ಇಬ್ಬರು ಆನ್ ಸ್ಕ್ರೀನ್ ಜೋಡಿ ಚೆನ್ನಾಗಿದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

ಮತ್ತೆ ತೆರೆ ಮೇಲೆ ಗಣಿ-ರಚ್ಚು

ಮತ್ತೆ ತೆರೆ ಮೇಲೆ ಗಣಿ-ರಚ್ಚು

ಈ ಹಿಂದೆ ಗಣೇಶ್ ಮತ್ತು ರಚಿತಾ ರಾಮ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 'ದಿಲ್ ರಂಗೀಲಾ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗೆ ನಾಯಕಿಯಾಗಿದ್ದರು ರಚಿತಾ. ಇಬ್ಬರ ಜೋಡಿಯನ್ನ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

ಕಲಾವಿದರ ಆಯ್ಕೆಯಲ್ಲಿ ಚಿತ್ರತಂಡ

ಕಲಾವಿದರ ಆಯ್ಕೆಯಲ್ಲಿ ಚಿತ್ರತಂಡ

'ಗೀತಾ' ಸಿನಿಮಾವನ್ನು ವಿಜಯ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದು ಅಕ್ಟೋಬರ್ ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಮೈಸೂರು, ಬೆಂಗಳೂರು, ಕಲ್ಕತ್ತಾದಲ್ಲಿ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದೆ ಸಿನಿಮಾತಂಡ. ಹರಿಕೃಷ್ಣ ಮ್ಯೂಸಿಕ್, ಶ್ರೀಶಾ ಕ್ಯಾಮೆರಾ ವರ್ಕ್ ಗೀತಾ ಚಿತ್ರಕ್ಕಿರಲಿದೆ.

More from Filmibeat

English summary
Golden star Ganesh Fans believe that Rachita Ram should be the heroine of the Golden Star Ganesh starrer Geeta movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X