ಅಭಿಮಾನಿಗಳಿಂದ ನಿರ್ಮಾಣವಾಯ್ತು ಅಂಬಿಯ ಪ್ರತಿಮೆ
ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ದೈಹಿಕವಾಗಿ ದೂರವಾಗಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅವರು ಅಭಿಮಾನಿಗಳ ಮನಸ್ಸಿನಿಂದ ಎಂದೂ ದೂರವಾಗುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.
ಅಂಬರೀಶ್ ಎಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತ ಎನ್ನುವುದಕ್ಕೆ ಉದಾಹರಣೆಯಾಗಿ ಅವರ ಒಂದು ಪ್ರತಿಮೆ ತಲೆ ಎತ್ತಿ ನಿಂತಿದೆ. ಮಂಡ್ಯ ಜಿಲ್ಲೆಯ ಅಭಿಮಾನಿಗಳು ಒಂದು ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಅಂಬರೀಶ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿರುವ ಗ್ರಾಮಸ್ಥರು ತಮ್ಮ ಪ್ರೀತಿಯ ನಟನಿಗೆ ಈ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಗ್ರಾಮಸ್ಥರು ಅಂಬಿಯ ಪ್ರತಿಮೆ ಅನಾವರಣಗೊಳಿಸಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಪ್ರೀತಿಯನ್ನು ತೋರಿದ್ದಾರೆ. ಅಂಬಿ ಮರೆಯಾದ ಮಾಣಿಕ್ಯ ಎಂದು ಕಂಬನಿ ಮಿಡಿದಿದ್ದಾರೆ.
English summary
Fans built actor Ambareesh in Mandya. Kannada Actor, Former Minister, Congress Politician Ambareesh (66) passed away on November 24th in Bengaluru


Click it and Unblock the Notifications