twitter
    For Quick Alerts
    ALLOW NOTIFICATIONS  
    For Daily Alerts

    ಗಡಿನಾಡಿನಲ್ಲಿ ಅನಾವರಣ ಆಗಲಿದೆ ಯಜಮಾನ್ರ ಪುತ್ಥಳಿ

    |

    ಸ್ಯಾಂಡಲ್ ವುಡ್ ನ ಯಜಮಾನ, ಸಾಹಸ ಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಅಭಿಮಾನಿಗಳು ಏನಾದರೊಂದು ಕಾರ್ಯಕ್ರಮ ನಡೆಸುತ್ತಲೆ ಇರುತ್ತಾರೆ. ಸೆಪ್ಟಂಬರ್ 18ರಂದು ಡಾ.ವಿಷ್ಣುವರ್ಧನ ನಾಟಕೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಇದಕ್ಕು ಮೊದಲೆ ಈಗ ವಿಷ್ಣು ಅಭಿಮಾನಿಗಳು ಸಾಹಸ ಸಿಂಹನ ಪುತ್ಥಳಿಯನ್ನು ನಿರ್ಮಾಣ ಮಾಡಿ ಅದ್ದೂರಿಯಾಗಿ ಅನಾವರಣ ಮಾಡುತ್ತಿದ್ದಾರೆ.

    ವಿಶೇಷ ಅಂದ್ರೆ ಗಡಿನಾಡಿನಲ್ಲಿ ವಿಷ್ಣುವರ್ಧನ್ ಪ್ರತಿಮೆಯನ್ನು ಅನಾವರಣ ಮಾಡುತ್ತಿದ್ದಾರೆ. ಕೋಲಾರ ಜಿಲ್ಲೆಯ, ಮಾಲೂರು ತಾಲೂಕಿನ ಅಹನ್ಯ ಗ್ರಾಮದಲ್ಲಿ ಅಭಿಮಾನಿಗಳು ವಿಷ್ಣುವರ್ಧನ್ ಪುತ್ಥಳಿಯನ್ನು ನಿರ್ಮಾಣ ಮಾಡಿದ್ದಾರೆ. ಈ ಪ್ರತಿಮೆಯನ್ನು ಇದೆ ತಿಂಗಳು ಸೆಪ್ಟೆಂಬರ್ 8ರಂದು ಬೆಳಗ್ಗೆ 8ಗಂಟೆಗೆ ಅನಾವರಣ ಮಾಡುತ್ತಿದ್ದಾರೆ.

    ಎರಡುವರೆ ದಶಕದ ಬಳಿಕ ಮತ್ತೆ ಬಂದ ಕಮಾಂಡೋ ಅಜಯ್ಎರಡುವರೆ ದಶಕದ ಬಳಿಕ ಮತ್ತೆ ಬಂದ ಕಮಾಂಡೋ ಅಜಯ್

    ವಿಷ್ಣುರ್ವಧನ್ ಅಪ್ಪಟ ಅಭಿಮಾನಿ ಭರತ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅಪಾರ ಸಂಖ್ಯೆ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವಿಷ್ಣುವರ್ಧನ್ ಪ್ರತಿಮೆಗಳು ಈಗಾಗಲೆ ಸಾಕಷ್ಟು ಇವೆ. ಆದ್ರೆ ಗಡಿನಾಡಿನಲ್ಲಿ ಅನಾವರಣ ಆಗುತ್ತಿರುವುದು ವಿಶೇಷ.

    Fans Built Sahasa Simha Vishnuvardhan Satue In Kolar Border

    ವಿಷ್ಣುವರ್ಧನ್ ಹೆಸರನ್ನು ಕನ್ನಡಿಗರ ಮದಾಳದಲ್ಲಿ ಹಚ್ಚ ಹಸಿರಾಗಿರಿಸುವ ಸಲುವಾಗಿ ಯಜಮಾನ್ರಿಗೊಂದು ರಂಗನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದೆ ತಿಂಗಳು 18ರಿಂದ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಅಭಿಮಾನಿಗಳು ಈ ಅದ್ಭುತ ಕಾರ್ಯಕ್ಕೆ ಕಿಚ್ಚ ಸುದೀಪ್ ಕೂಡ ಸಾಥ್ ನೀಡಿದ್ದಾರೆ.

    English summary
    Fans built Sahasa Simha Vishnuvardhan statue in Kolar border.
    Friday, September 6, 2019, 15:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X