»   » 'ಟ್ಯೂಬ್ ಲೈಬ್' ಪ್ರದರ್ಶನದ ವೇಳೆ ಸಲ್ಲು ಫ್ಯಾನ್ಸ್ ಮಾಡಿದ ಎಡವಟ್ಟು.!

'ಟ್ಯೂಬ್ ಲೈಬ್' ಪ್ರದರ್ಶನದ ವೇಳೆ ಸಲ್ಲು ಫ್ಯಾನ್ಸ್ ಮಾಡಿದ ಎಡವಟ್ಟು.!

Posted By:
Subscribe to Filmibeat Kannada

ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆಯುತ್ತಾ ಬಂದಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲೂ ಕೂಡ ನಿಧಾನವಾಗಿ ಹೆಜ್ಜೆ ಇಡುತ್ತಿದೆ. ಹೀಗಿದ್ದರೂ, ಸಲ್ಲು ಅಭಿಮಾನಿಗಳ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದಾರೆ.

ಲೆಕ್ಕಾಚಾರ ಉಲ್ಟಾ ಮಾಡಿದ 'ಟ್ಯೂಬ್ ಲೈಟ್' ಮೊದಲ ದಿನ ಗಳಿಸಿದ್ದೆಷ್ಟು?

ಹೌದು, ಮಹಾರಾಷ್ಟ್ರದ ಮಾಲೆಗಾಂವ್ ಚಿತ್ರಮಂದಿರದಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳು ಅತಿರೇಕದ ಅಭಿಮಾನ ಪ್ರದರ್ಶಿಸಿದ್ದು, ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ್ದಾರೆ. ಇದರಿಂದ ಯಾವುದೇ ಅಪಾಯವಾಗಿಲ್ಲವಾದರೂ, ಚಿತ್ರಮಂದಿರದಲ್ಲಿದ್ದ ಪ್ರೇಕ್ಷಕರು ಕೆಲ ಕಾಲ ಗಾಬರಿಗೊಂಡಿದ್ದರು. ಇನ್ನು ಅಭಿಮಾನಿಗಳ ವಿರುದ್ಧ ಥಿಯೇಟರ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೊದಲ ವಾರಂತ್ಯದಲ್ಲಿ 'ಟ್ಯೂಬ್ ಲೈಟ್' ಮಾಡಿದ ಕಲೆಕ್ಷನ್ ಎಷ್ಟು?

Fans burst crackers during Salman Khan’s Tubelight screening in theater

ಸಾಮಾನ್ಯವಾಗಿ ಬೆಳ್ಳಿಪರದೆ ಮೇಲೆ ನಾಯಕನ ಪರಿಚಯವಾಗುತ್ತಿದ್ದಂತೆ ಹೂವು ಚೆಲ್ಲುವುದು, ನಾಣ್ಯಗಳನ್ನ ಚೆಲ್ಲುವುದು, ಬಣ್ಣ ಚೆಲ್ಲುವುದು ನೋಡಬಹುದು. ಆದ್ರೆ, ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಚಿತ್ರಕ್ಕೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ ಸಲ್ಲು ಅಭಿಮಾನಿಗಳು. ಮಾಲೆಗಾಂವ್ ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿ ಸಂಭ್ರಮಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಶಾರುಖ್ ಅಭಿನಯದ 'ರಯೀಸ್' ಚಿತ್ರ ಪ್ರದರ್ಶನದ ವೇಳೆ ಶಾರೂಖ್ ಫ್ಯಾನ್ಸ್ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ್ದರು.

ಸಲ್ಮಾನ್ 'ಟ್ಯೂಬ್ ಲೈಟ್' ಪ್ರಭಾವ ಹೆಚ್ಚು, ಪ್ರಕಾಶ ಕಡಿಮೆ

ಅಂದ್ಹಾಗೆ, 'ಟ್ಯೂಬ್ ಲೈಟ್' ಚಿತ್ರವನ್ನ ಕಬೀರ್ ಖಾನ್ ನಿರ್ದೇಶನ ಮಾಡಿದ್ದು, ಸೈನೋ-ಇಂಡೋ ಯುದ್ಧದ ಸುತ್ತಾ ಕಥೆ ಮಾಡಲಾಗಿದೆ. ಸಲ್ಮಾನ್ ಖಾನ್ ಮತ್ತು ಶೋಹಿಲ್ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚೈನೀಸ್ ನಟಿ ಝುಝು (zhu zhu) ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ 5 ದಿನಗಳಲ್ಲಿ 'ಟ್ಯೂಬ್ ಲೈಟ್' ಚಿತ್ರದ ಸಮಾರು 98 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.

English summary
Fans of Salman Khan burst firecrackers during the screening of the actor's latest movie Tubelight's directed by Kabir Khan and leave audience shocked.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada