For Quick Alerts
  ALLOW NOTIFICATIONS  
  For Daily Alerts

  ಟ್ವಿಟರ್‌ನಲ್ಲಿ ಅಪ್ಪು ಅಭಿಮಾನಿಗಳಿಂದ ಪುನೀತ್ ಚತುರ್ಥಿ!

  |

  ಎಲ್ಲೆಲ್ಲೂ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಗಣೇಶ ಹಬ್ಬ ಜೋರಾಗಿದೆ. ವರುಣನ ಅರ್ಭಟದ ನಡುವೆಯೂ ಗಣೇಶ ಚತುರ್ಥಿ ಸಂಭ್ರಮ ಎದ್ದು ಕಾಣುತ್ತಿದೆ. ಇತ್ತ ಪವರ್‌ಸ್ಟಾರ್ ಅಭಿಮಾನಿಗಳು ಗಣೇಶ ಹಬ್ಬದಂದೇ ಪುನೀತ್ ಚತುರ್ಥಿ ಮಾಡುವುದಕ್ಕೆ ಸಜ್ಜಾಗಿದ್ದಾರೆ.

  ಕೊರೊನಾ ಅಂತ ಒಂದೆರಡು ವರ್ಷ ಗಣೇಶ ಹಬ್ಬವನ್ನು ಸರಿಯಾಗಿ ಆಚರಣೆ ಮಾಡಿರಲಿಲ್ಲ. ಹಾಗಾಗಿ ಈ ಬಾರಿ ಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡಲು ಜನರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಗಣೇಶ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಲು ಸಜ್ಜಾಗಿದ್ದಾರೆ. ಈ ಕಾರಣಕ್ಕೆ ಟ್ವಿಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

  ಲಾರ್ಡ್ ಗಣೇಶನ ಜೊತೆ 'ಕೋಟ್ಯಾಧಿಪತಿ' ಅಪ್ಪು: 9 ದಿನ ಅಭಿಮಾನಿಗಳ ಸಂಭ್ರಮ!ಲಾರ್ಡ್ ಗಣೇಶನ ಜೊತೆ 'ಕೋಟ್ಯಾಧಿಪತಿ' ಅಪ್ಪು: 9 ದಿನ ಅಭಿಮಾನಿಗಳ ಸಂಭ್ರಮ!

  ಟ್ವಿಟರ್‌ನಲ್ಲಿ ಪುನೀತ್ ಚತುರ್ಥಿ

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವು ಇನ್ನೂ ಮಾಸಿಲ್ಲ. ಆದರೆ, ಅಭಿಮಾನಿಗಳು ಆ ನೋವನ್ನು ಒಳಗಿಟ್ಟುಕೊಂಡೇ ಅಪ್ಪು ನೆನಪುಗಳನ್ನು ಸವಿಯಲು ಮುಂದಾಗಿದ್ದಾರೆ. ಈಗಾಗಲೇ ಅವರ ನೆನಪಿನಲ್ಲಿ ಏನಾದರೂ ಒಂದು ಕಾರ್ಯವನ್ನು ಮಾಡುತ್ತಲೇ ಇದ್ದಾರೆ. ರಾಜ್ಯದಲ್ಲಿ ಏನೇ ಸಂಭ್ರಮವಿದ್ದರೂ, ಅಲ್ಲಿ ಅಭಿಮಾನಿಗಳು ಅಪ್ಪುವನ್ನು ನೆನಪಿಸಿಕೊಳ್ಳುತ್ತಾರೆ.

  ಈ ಬಾರಿ ಕೂಡ ಗಣೇಶ ಚತುರ್ಥಿಯನ್ನು ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ಸಂಭ್ರಮಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ. ಹೀಗಾಗಿಯೇ ಟ್ವಿಟರ್‌ನಲ್ಲಿ ಪುನೀತ್ ಚತುರ್ಥಿ ಆಚರಣೆ ಮಾಡಲು ಅಭಿಮಾನಿಗಳು ಅಪ್ಪು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇಂದು (ಆಗಸ್ಟ್ 30) ಮಧ್ಯಾಹ್ನ 12.30ರಿಂದ ಪುನೀತ್ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ.

  ಟ್ವಿಟ್ಟರ್‌ನಲ್ಲಿ ಪುನೀತ್ ಚತುರ್ಥಿ ಟ್ರೆಂಡಿಂಗ್

  ಅಭಿಮಾನಿಗಳು ಕರೆ ನೀಡುತ್ತಿದ್ದಂತೆ ಟ್ವಿಟರ್‌ನಲ್ಲಿ ಪುನೀತ್ ಚತುರ್ಥಿ ಟ್ರೆಂಡಿಂಗ್ ಶುರುವಾಗಿದೆ. ಅಪ್ಪು ಅಭಿಮಾನಿಗಳು ಟ್ರೆಂಡಿಂಗ್ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಗಣೇಶನ ಜೊತೆ ಪುನೀತ್ ರಾಜ್‌ಕುಮಾರ್ ಇರುವ ಪೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

  "ಬನ್ನಿ ಸ್ನೇಹಿತರೆ ನಮ್ಮ ಅಪ್ಪು ಅವರನ್ನು ಗಣೇಶ ಹಬ್ಬದಂದು ವಿಜೃಂಭಣೆಯಿಂದ ನೆನಪಿಸಿಕೊಳ್ಳೋಣ. ಈ ವರ್ಷದ ಗಣೇಶ ಹಬ್ಬವನ್ನು ನಮ್ಮ ಹೆಮ್ಮೆಯ ಅಪ್ಪು ಅವರ ನೆನಪಿನಲ್ಲಿ ಹ್ಯಾಶ್‌ಟ್ಯಾಗ್ ಬಳಸುವುದರ ಮೂಲಕ ಹಾಗೂ ಅವರ ಫೋಟೊವನ್ನು ಗಣೇಶ ಪೆಂಡಾಲ್‌ಗಳಲ್ಲಿ ಹಾಕುವುದರ ಮೂಲಕ ಆಚರಿಸೋಣ." ಎಂದು ಅಭಿಮಾನಿಗಳು ಕರೆ ನೀಡಿದ್ದರು.

  Fans Called to Celebrate Puneeth Chaturthi in Twitter on August 30 at 12.30pm

  ಗಣೇಶನ ಜೊತೆ ಅಪ್ಪು ಮೂರ್ತಿ ಟ್ರೆಂಡಿಂಗ್

  ಈ ಬಾರಿ ಗಣೇಶ ಹಬ್ಬದ ಜೊತೆ ರಾಜ್ಯ ಮೂಲೆ ಮೂಲೆಯಲ್ಲಿ ಪುನೀತ್ ರಾಜ್‌ಕುಮಾರ್ ಮೂರ್ತಿಯನ್ನು ಮಾಡುತ್ತಿದ್ದಾರೆ. ಗಣೇಶನ ಜೊತೆ ಅಪ್ಪು ಇರುವ ಮೂರ್ತಿಗಳಿಗೆ ಬೇಡಿಕೆನೂ ಹೆಚ್ಚಾಗಿದೆ. ಬೇರೆ ಬೇರೆ ಪರಿಕಲ್ಪನೆಯಲ್ಲಿ ಗಣೇಶ ಮೂರ್ತಿಯನ್ನು ಮಾಡುತ್ತಿದ್ದಾರೆ. ಗಣೇಶನ ಜೊತೆ ಅಪ್ಪು ಮೂರ್ತಿ ಇಟ್ಟು ಪೂಜೆ ಮಾಡುವುದಕ್ಕೂ ಸಜ್ಜಾಗಿದ್ದಾರೆ.

  ಕಾರವಾರದ ಅಂಕೋಲಾದಲ್ಲಿರುವ ಪುನೀತ್ ರಾಜ್‌ಕುಮಾರ್ ಅಭಿಮಾನಿ ಈ ಬಾರಿ ವಿಶಿಷ್ಠವಾಗಿ ಗಣೇಶ ಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳ ಪರಿಶ್ರಮದಿಂದ ಪುನೀತ್ ನಡೆಸಿಕೊಡುತ್ತಿದ್ದ ಕೋಟ್ಯಾಧಿಪತಿ ಶೈಲಿಯಲ್ಲೇ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ. ಕರ್ನಾಟಕದ ನಾನಾ ಭಾಗಗಳಲ್ಲಿ ಗಣೇಶನ ಹಬ್ಬದಲ್ಲಿ ಪುನೀತ್ ಮೂರ್ತಿ ಸಿದ್ಧವಾಗುತ್ತಿವೆ. ಗಣೇಶನ ಪಕ್ಕ ಕುಳಿದ ಅಪ್ಪು, ಗಣೇಶನ ಆಶೀರ್ವಾದ ಪಡೆಯುತ್ತಿರುವ ಅಪ್ಪು, ಅಪ್ಪು ಕೈಯಲ್ಲಿ ಗಣೇಶ ಮೂರ್ತಿ, ಅಪ್ಪು ಗಲ್ಲ ಹಿಡಿದ ಗಣೇಶ, ಅಪ್ಪುಗೆ ಮೋದಕ ತಿನ್ನಿಸುತ್ತಿರುವ ಗಣೇಶ. ಹೀಗೆ ಮೂರ್ತಿ ತಯಾರಕರು ತಮ್ಮದೇ ವಿಶಿಷ್ಠ ಕಲ್ಪನೆಯಲ್ಲಿ ಬಗೆ ಬಗೆಯ ಗಣೇಶ ಹಾಗೂ ಅಪ್ಪು ಮೂರ್ತಿಗಳನ್ನು ತಯಾರಿಸಿದ್ದಾರೆ.

  English summary
  Fans Called to Celebrate Puneeth Chaturthi in Twitter on August 30 at 12.30pm
  Tuesday, August 30, 2022, 14:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X