'KGF 2' ಸಿನಿಮಾ ನೋಡ್ತಿರಾ? ಚಿಕ್ಕದಾಗಿ ವಿಡಿಯೋ ವಿಮರ್ಶೆ ಮಾಡಿ, ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಳ್ಳಿ

'ಕೆಜಿಎಫ್ ಚಾಪ್ಟರ್ 2' ರಿಲೀಸ್‌ಗೆ ಇನ್ನೇನು ಗಂಟೆಗಳಷ್ಟೆ ಬಾಕಿ ಇದೆ. ನೀವು ಕೂಡ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ನೋಡಲು ಎಕ್ಸೈಟ್ ಆಗಿರುತ್ತೀರಾ. ಸಿನಿಮಾ ನೋಡಿ ನಿಮಗೆ ಖುಷಿ ಅನ್ನಿಸಬಹುದು. ಕೆಲವು ಕಡೆ ಹೀಗೆ ಯಾಕೆ ಮಾಡಿದ್ದಾರೆ ಅಂತ ಪ್ರಶ್ನೆ ಮೂಡ ಬಹುದು, 'ಕೆಜಿಎಫ್ ಚಾಪ್ಟರ್ 2' ಯಾವುದಕ್ಕೂ ಕಮ್ಮಿ ಇಲ್ಲಾ ಗುರೂ ಅಂತ ನೀವು ನೀವೇ ಮಾತನಾಡಿಕೊಳ್ತೀರಾ. ಹೀಗೆ ನಿಮಗೆ ಏನೆಲ್ಲಾ ಅನ್ನಿಸುತ್ತೋ ಅದನ್ನು ನೀವು ನಮಗೆ ಕಳುಹಿಸಿಕೊಡಿ. ನಾವು ವೀಕ್ಷಕರಿಗೆ ನೀಡುವ ವಿಮರ್ಶೆಗಿಂತ ನೀವುಗಳೇ ಉತ್ತಮವಾಗಿ, ಕ್ರಿಯೇಟಿವ್ ಆಗಿ ವಿಮರ್ಶೆ ಮಾಡಿ, ಫಿಲ್ಮಿ ಬೀಟ್ ಜೊತೆ ಹಂಚಿಕೊಳ್ಳಿ.

Recommended Video

Yash | KGF 2 ಸಿನಿಮಾ ಬಗ್ಗೆ ನಮ್ಮೊಂದಿಗೆ ನಿಮ್ಮ ವಿಮರ್ಶೆ ಹಂಚಿಕೊಳ್ಳಿ | Filmibeat Kannada

Fans Can Send KGF Chapter 2 Review Video After Watching the Movie To FilmiBeat Kannada

ಹೌದು.. ಇಷ್ಟುದಿನ ಯಾವುದೇ ಸಿನಿಮಾ ರಿಲೀಸ್ ಆದರೆ ನಾವು ನಿಮಗೆ ಆ ಸಿನಿಮಾ ಬಗ್ಗೆ ವಿಮರ್ಶೆ ನೀಡುತ್ತಿದ್ದೆವು. ಆದರೆ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಬಗ್ಗೆ ನೀವೇ ನಮಗೆ ವಿಮರ್ಶೆ ಕಳುಹಿಸಿ ಕೊಡಿ. ಅದಕ್ಕೆ ನೀವು ಮಾಡಬೇಕಿರೋದು ಇಷ್ಟೇ ಏಪ್ರಿಲ್ 14 ಸಂಜೆ ಒಳಗಾಗಿ 'ಕೆಜಿಎಫ್ ಚಾಪ್ಟರ್ 2' ಸಿನಿಮಾವನ್ನು ವೀಕ್ಷಿಸಿ, ಚಿತ್ರದ ಬಗ್ಗೆ ನಿಮಗೆ ಏನು ಅನಿಸುತ್ತೋ ಅದನ್ನು ವಿಡಿಯೋ ಮಾಡುವ ಮೂಲಕ ನಮಗೆ ನೀವು ತಲುಪಿಸಬೇಕು. ನೀವು ಮಾಡುವ ವಿಡಿಯೋ ಒಂದೂವರೆ ನಿಮಿಷ ಮೀರದೆ ಇರಲಿ. ಹಾಗೆ ಉತ್ತಮ ಬೆಳಕು ಹಾಗೂ ನಿಮ್ಮ ಧ್ವನಿಯಲ್ಲಿ ಸ್ಪಷ್ಟತೆ ಇರುವಂತೆ ನೋಡಿಕೊಳ್ಳಿ. ನೀವು ಕಳುಹಿಸುವ ಉತ್ತಮ ರಿವ್ಯೂಗಳನ್ನು ಏಪ್ರಿಲ್ 14 ಬೆಳಗ್ಗೆಯಿಂದಲೇ ಫಿಲ್ಮಿಬೀಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಪಬ್ಲಿಷ್ ಮಾಡಲಾಗುತ್ತೆ.

Fans Can Send KGF Chapter 2 Review Video After Watching the Movie To FilmiBeat Kannada

ನಿಮಗೆ ವೀಡಿಯೊ ಮೂಲಕ ವಿಮರ್ಶೆ ನೀಡಲು ಕಷ್ಟ ಆದರೆ ಬರವಣಿಗೆ ಮೂಲಕವೂ ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿಕೊಡಬಹುದು. ನಿಮ್ಮ ಹೆಸರಿನೊಂದಿಗೆ ಬರವಣಿಗೆಯ ವಿಮರ್ಶೆಯನ್ನು ಪೋಸ್ಟ್ ಮಾಡಲಾಗುತ್ತೆ. ಅಕ್ಷರ ಸ್ಪಷ್ಟವಾಗಿದ್ದು, ಅಚ್ಚ ಕನ್ನಡದಲ್ಲಿ ಇದ್ದರೆ ಉತ್ತಮ. ಆಯ್ದ ಬರವಣಿಗೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತೆ. ಹೀಗೆ ವಿಡಿಯೋ ಮತ್ತು ಬರವಣಿಗೆ ವಿಮರ್ಶೆಗಳನ್ನು ನಮ್ಮ https://www.facebook.com/KannadaFilmibeat/ ಹಾಗೂ https://instagram.com/filmibeatkannada?igshid=YmMyMTA2M2Y= ಕ್ಕೆ ಕಳುಹಿಸಿ.

More from Filmibeat

English summary
Great Opportunity for Our Readers Kannada Filmibeat is Requesting Fans to send KGF Chapter 2 Video Review after Watching the Movie. Will publish in our site.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X