'ಗಂಧದ ಗುಡಿ'ಗೆ ಅದ್ಧೂರಿ ಸ್ವಾಗತ: ಯಾವ ಜಿಲ್ಲೆಯಲ್ಲಿ ಹೇಗಿದೆ ಸೆಲೆಬ್ರೇಷನ್

By ಫಿಲ್ಮಿಬೀಟ್ ಡೆಸ್ಕ್

ದಿವಂಗತ ನಟ ಪುನೀತ್​ ರಾಜ್​ಕುಮಾರ್​, ಕೊನೆಯದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ಗಂಧದ ಗುಡಿ' ಚಿತ್ರ ಇಂದು ರಾಜ್ಯದ್ಯಂತ ತೆರೆಕಂಡಿದೆ. ಅಕಾಲಿಕವಾಗಿ ಅಗಲಿದ ನೆಚ್ಚಿನ ನಟನನ್ನು ಹೊಸ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಕಣ್ತುಂಬಿಕೊಳ್ಳುತ್ತಿರುವ ಕ್ಷಣ ಅಭಿಮಾನಿಗಳ ಭಾವುಕತೆಗೆ ಈದಿನ ಸಾಕ್ಷಿಯಾಗಿದೆ.

ಇತ್ತ ಕೋಟೆ ನಾಡು ಚಿತ್ರದುರ್ಗದ ಚಿತ್ರ ಮಂದಿರದಲ್ಲಿ ಪುನೀತ್ ಪೋಟೋ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಮತ್ತೊಂದು ಕಡೆ ಸಿಹಿ ಹಂಚಿ ಸಂಭ್ರಮಿಸಿದರು. ಇದನ್ನೆಲ್ಲ ನೋಡಿದರೆ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಇನ್ನು ಜಿಲ್ಲೆಯ ವಿವಿಧ ತಾಲ್ಲೂಕಿನ ಚಿತ್ರಮಂದಿಗಳನ್ನು ಸಿಂಗರಿಸಿದ್ದು, ಅಪ್ಪು ಕಟೌಟ್​ಗಳಿಗೆ ಪೂಜೆ,ಹಾಲಿನ ಅಭಿಷೇಕ ಮಾಡಿದ್ದಾರೆ. ಪುನೀತ್​ಗೆ ಜೈಕಾರ ಕೂಗುತ್ತಾ ಎಲ್ಲರೂ ಗಂಧದಗುಡಿ ಸಿನಿಮಾವನ್ನು ತಪ್ಪದೇ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

ಚಿತ್ರದುರ್ಗದಲ್ಲಿ ಅಭಿಮಾನಿಗಳಿಂದ ಹಬ್ಬ

ಚಿತ್ರದುರ್ಗದಲ್ಲಿ ಅಭಿಮಾನಿಗಳಿಂದ ಹಬ್ಬ

ಚಿತ್ರದುರ್ಗ ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆಗೆ ಮೊದಲ ಶೋ ಪ್ರಾರಂಭವಾಯಿತು. ಎಲ್ಲ ಟಿಕೆಟ್ ಮಾರಟವಾಗಿದ್ದವು. ನಂತರ ಚಳ್ಳಕೆರೆ ನಗರದಲ್ಲಿ ಬೆಳಿಗ್ಗೆ 6.30 ಸುಮಾರಿಗೆ ಚಿತ್ರ ಆರಂಭವಾಯಿತು. ಇದಲ್ಲದೆ ಹೊಸದುರ್ಗ, ಹಿರಿಯೂರು ಸೇರಿದಂತೆ ಮತ್ತಿತರರು ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪರದೆಯ ಮೇಲೆ ಕಾಣಿಸಿಕೊಂಡಿದೆ.

ಬಳ್ಳಾರಿಯಲ್ಲಿ ಅಭಿಮಾನಿಗಳ ಉತ್ಸಾಹ

ಬಳ್ಳಾರಿಯಲ್ಲಿ ಅಭಿಮಾನಿಗಳ ಉತ್ಸಾಹ

ಬಳ್ಳಾರಿಯಲ್ಲಿಯೂ ಸಹ ಪುನೀತ್ ರಾಜ್‌ಕುಮಾರ್ ನಟನೆಯ 'ಗಂಧದ ಗುಡಿ' ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಬಳ್ಳಾರಿಯ ನಟರಾಜ ಥಿಯೇಟರ್ ಮೊದಲ‌ ಶೋ ಆರಂಭ. ಬೆಳಗ್ಗೆ 7 ಕ್ಕೆ‌ ಆರಂಭವಾದ ಮೊದಲ ಪ್ರದರ್ಶನ ಹೌಸ್ ಪುಲ್ ಆಗಿದೆ. ಪುನೀತ್ ನೋಡಿ ಶಿಳ್ಳೆ ಚಪ್ಪಾಳೆ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಂಭ್ರಮ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಂಭ್ರಮ

ಇನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲೂ ಗಂಧದ ಗುಡಿ ಸಿನಿಮಾವನ್ನು ಸಂಭ್ರಮದಿಂದ ಸ್ವಾಗತಿಸಲಾಯ್ತು. ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳು ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಚಿತ್ರಮಂದಿರದಲ್ಲಿ ಹಬ್ಬದ ವಾತಾವರಣವಿತ್ತು. ಪುನೀತ್ ಕಟೌಟ್ ಗೆ ಹಾರ ಹಾಕಿ, ಹಾಲಿನ ಅಭಿಷೇಕವನ್ನು ಅಭಿಮಾನಿಗಳು ಮಾಡಿದರು. ಜೊತೆಗೆ ಅರಣ್ಯ ಅಧಿಕಾರಿಗಳಿಗೆ ಸನ್ಮಾನ ಮಾಡಿ, ಗಿಡ ನೆಡುವ ಕಾರ್ಯಕ್ರಮವನ್ನು ಸಹ ಅಭಿಮಾನಿಗಳು ಮಾಡಿದರು.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಗಳಲ್ಲಿಯೂ ಹಬ್ಬ

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಗಳಲ್ಲಿಯೂ ಹಬ್ಬ

ಚಿಕ್ಕಬಳ್ಳಾಪುರ, ಕೋಲಾರಗಳಂತಹಾ ಗಡಿಗೆ ಹತ್ತಿರವಾಗಿರುವ ಜಿಲ್ಲೆಗಳಲ್ಲಿಯೂ 'ಗಂಧದ ಗುಡಿ' ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಪುನೀತ್ ಅವರ ದೊಡ್ಡ ದೊಡ್ಡ ಕಟೌಟ್‌ಗಳನ್ನು ನಿಲ್ಲಿಸಿ. ಹಾಲಿನಭಿಷೇಕ ಮಾಡಿ, ತಮಟೆ ಭಾರಿಸಿ ಖುಷಿಯಿಂದ ಕುಣಿದು ಸಿನಿಮಾವನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಇಂಥಹುದೇ ದೃಶ್ಯಗಳು ಹಲವು ಚಿತ್ರಮಂದಿರಗಳ ಮುಂದೆ ನೋಡಲು ಸಿಕ್ಕಿವೆ.

More from Filmibeat

English summary
Fans celebrate Puneeth Rajkumar's Gandhada Gudi movie release in many district. Fans felicitating forest officers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X