'ಮಾರ್ಕ್' ಟೈಟಲ್ ನಮ್ಮದು ಎಂದ ನಟ; ಸುದೀಪ್ ಹೊಸ ಚಿತ್ರಕ್ಕೆ ಎದುರಾಯ್ತು ಸಮಸ್ಯೆ

ನಟ ಕಿಚ್ಚ ಸುದೀಪ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಅಭಿಮಾನಿಗಳಿಗೆ ಸಾಕಷ್ಟು ಸರ್‌ಪ್ರೈಸ್‌ ಕಾದಿತ್ತು. 'ಬಿಲ್ಲ ರಂಗ ಬಾಷ' ಚಿತ್ರದ ಹೊಸ ಪೋಸ್ಟರ್ ಜೊತೆಗೆ 'ಮಾರ್ಕ್' ಚಿತ್ರದ ಸಣ್ಣ ಟೀಸರ್ ಝಲಕ್ ಬಂದಿತ್ತು. ಸೂಪರ್ ಹಿಟ್ 'ಮ್ಯಾಕ್ಸ್' ಕಾಂಬಿನೇಷನ್‌ನಲ್ಲಿ ಬರ್ತಿರೋ ಹೊಸ ಸಿನಿಮಾ ಇದು.

ವಿಜಯ್ ಕಾರ್ತಿಕೇಯನ್ 'ಮಾರ್ಕ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ಸಂಭ್ರಮದಲ್ಲಿ 'ಮಾರ್ಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಟೀಸರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೊಸ ಹೇರ್‌ಸ್ಟೈಲ್‌ನಲ್ಲಿ ಕಿಚ್ಚ ದರ್ಶನ ಕೊಟ್ಟಿದ್ದಾರೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಅಜಯ್ ಮಾರ್ಕಂಡೆ ಪಾತ್ರದಲ್ಲಿ ಸುದೀಪ್ ಅಬ್ಬರಿಸಲಿದ್ದಾರೆ.

Fans Celebrate Sudeep s Mark Teaser Launch But Title Dispute Emerges

'ಮ್ಯಾಕ್ಸ್' ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎಂಬ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ದರ್ಬಾರ್ ನಡೆಸಿದ್ದರು. ಮಹಾಕ್ಷಯ್ ಎನ್ನುವುದನ್ನು ಶಾರ್ಟ್ ಆಗಿ ಮ್ಯಾಕ್ಸ್ ಎಂದು ಮಾಡಿ ಟೈಟಲ್ ಫಿಕ್ಸ್ ಮಾಡಿದ್ದರು. ಅದೇ ರೀತಿ ಈಗ ಅಜಯ್ ಮಾರ್ಕಂಡೆ ಹೆಸರನ್ನು 'ಮಾರ್ಕ್' ಎಂದು ಶಾರ್ಟ್ ಮಾಡಿ ಟೈಟಲ್ ಬರುವಂತೆ ಫಿಕ್ಸ್ ಮಾಡಿದ್ದಾರೆ. ಇದೆಲ್ಲದರ ನಡುವೆ 'ಮಾರ್ಕ್' ಟೈಟಲ್ ನಮ್ದು ಎಂದು ಯುವಕನೊಬ್ಬ ಚಕಾರ ಎತ್ತಿದ್ದಾನೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ.

ಗೌರವ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಾವು 'ಮಾರ್ಕ್' ಎಂಬ ಸಿನಿಮಾ ಮಾಡಲು ಮುಂದಾಗಿದ್ದೆವು. ಈಗಾಗಲೇ ಫಿಲ್ಮ್ ಚೇಂಬರ್‌ನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಇದೀಗ ಸುದೀಪ್ ಸರ್ ಚಿತ್ರಕ್ಕೂ ಅದೇ ಟೈಟಲ್ ಫಿಕ್ಸ್ ಮಾಡಿರುವುದು ನಮಗೆ ಅಚ್ಚರಿ ತಂದಿದೆ. ಈಗಾಗಲೇ ನಮಗೆ ಟೈಟಲ್ ಕೊಟ್ಟಿದ್ದರೂ ಮತ್ತೊಬ್ಬರಿಗೆ ಹೇಗೆ ಟೈಟಲ್ ಕೊಡೋಕೆ ಸಾಧ್ಯ, ಈ ಗೊಂದಲ ಪರಿಹರಿಸಿ ನಮಗೆ ಟೈಟಲ್ ಕೊಡಬೇಕು ಎಂದು ಮನು ರಾಜ್ ಎಂಬ ಯುವಕ ಮನವಿ ಮಾಡಿದ್ದಾರೆ.

ಇದೇ ವರ್ಷ ಮೇ 20ರಂದ 'ಮಾರ್ಕ್' ಟೈಟಲ್ ರಿಜಿಸ್ಟರ್ ಮಾಡಿಸಿರುವುದಾಗಿ ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಮಾರ್ಕ್' ಟೈಟಲ್ ಕೇಳಿ ಗೌರವ್ ಮೂವಿ ಮೇಕರ್ಸ್ ಸಂಸ್ಥೆ ಅರ್ಜಿ ಸಲ್ಲಿಸಿದೆ. ಆದರೆ ಸುದೀಪ್ ಅವರ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಟೈಟಲ್ ಕೊಟ್ಟಿರುವಂತೆ ಕಾಣುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿ ಎರಡೆರಡು ವಾಣಿಜ್ಯ ಮಂಡಳಿಗಳಿವೆ. ಅದೇ ಇಂತಹ ಗೊಂದಲಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ. ಈ ಹಿಂದೆ ಕೂಡ ಇದೇ ರೀತಿ ಒಂದೇ ಟೈಟಲ್ ಅನ್ನು ಎರಡೂ ವಾಣಿಜ್ಯ ಮಂಡಳಿಗಳಲ್ಲಿ ರಿಜಿಸ್ಟರ್ ಮಾಡಿಸಿ ಕೆಲವರು ಸಿನಿಮಾ ನಿರ್ಮಾಣ ಮಾಡಿದ್ದರು. ಅದು ಭಾರೀ ಚರ್ಚೆಗೆ ಕಾರಣವಾಗಿತ್ತು. ಮುಂದಿ 'ಮಾರ್ಕ್' ಸಿನಿಮಾ ಟೈಟಲ್ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಾ ಕಾದು ನೋಡಬೇಕಿದೆ.

ಸುದೀಪ್ ನಟನೆಯ 'ಮಾರ್ಕ್' ಚಿತ್ರವನ್ನು 5 ಭಾಷೆಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ದೀಪ್ಶಿಕಾ, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ, ರೋಶಿನಿ ಪ್ರಕಾಶ್, ಡ್ರ್ಯಾಗನ್ ಮಂಜು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಂದಹಾಗೆ ಇದು 'ಮ್ಯಾಕ್ಸ್' ಸೀಕ್ವೆಲ್ ಅಲ್ಲ. ಆ ಕಥೆಗೂ ಈ ಕಥೆಗೂ ಲಿಂಕ್ ಇಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

More from Filmibeat

English summary
Fans Celebrate Sudeep’s Mark Teaser Launch, But Title Dispute Emerges
Read more about: sudeep sandalwood max
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X