Just In
Don't Miss!
- News
ಸ್ಪೀಕರ್ ಕಾಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಚಂದ್ರಶೇಖರ್ ಮಾದರಿ ಕೆಲಸ!
- Sports
ಐಪಿಎಲ್ 2021: ಸಿಎಸ್ಕೆ ಉಳಿಸಿಕೊಂಡಿರುವ, ಕೈ ಬಿಟ್ಟಿರುವ ಆಟಗಾರರ ಪಟ್ಟಿ
- Automobiles
ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಭಿಮಾನೋತ್ಸವ; ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಸಖತ್ ಪ್ಲಾನ್
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಪ್ರತಿವರ್ಷ ಯಶ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಯಶ್ ಮನೆ ಮುಂದೆ ಅಭಿಮಾನಿಗಳ ದಂಡೆ ನೆರೆದಿರುತ್ತಿತ್ತು. ಆದರೆ ಈ ಬಾರಿ ಉತ್ಸಾಹ, ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.
ಆದರೂ ಅಭಿಮಾನಿಗಳು ತಮ್ಮದೆ ರೀತಿಯಲ್ಲಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರೆ. ಈಗಾಗಲೇ ಯಶ್ ಜನ್ಮದಿನಚಾರಣೆಗೆ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಮಾಡುವುದಾಗಿ ಸಿನಿಮಾತಂಡ ಘೋಷಣೆ ಮಾಡಿದೆ. ಇಡೀ ಭಾರತೀಯ ಸಿನಿಮಾರಂಗ ಟೀಸರ್ ಗಾಗಿ ಎದುರು ನೋಡುತ್ತಿದೆ. ಇದೇ ಸಮಯದಲ್ಲಿ ಯಶ್ ಅಭಿಮಾನಿ ಬಳಗ ಅಭಿಮಾನೋತ್ಸವ ಹೆಸರಿನಲ್ಲಿ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಲು ತಯಾರಿ ಮಾಡಿಕೊಂಡಿದ್ದಾರೆ.
ಹುಟ್ಟುಹಬ್ಬ ಆಚರಣೆ: ಅಭಿಮಾನಿಗಳಿಗೆ ವಿಶೇಷ ಸಂದೇಶ ಕೊಟ್ಟ ಯಶ್

ಚಿತ್ರಮಂದಿರದಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ
ಇದೇ ಸಮಯದಲ್ಲಿ ಅಭಿಮಾನಿಗಳು ಸಹ ಯಶ್ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸುತ್ತಿದ್ದಾರೆ. 'ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ'ದ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಕೆಜಿಎಫ್-2 ಟೀಸರ್ ರಿಲೀಸ್ ಆಗಲಿದೆ.

ಗರುಡ ರಾಮ್ ವಿಶೇಷ ಅತಿಥಿ
ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಗರುಡ ರಾಮ್ ಭಾಗಿಯಾಗಲಿದ್ದಾರೆ. ಇನ್ನು 2021ನೇ ಸಾಲಿನ ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ರಕ್ತ ದಾನ, ಅನ್ನ ದಾನ ಸೇರಿದಂತೆ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಯಶ್ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
'ಕೆಜಿಎಫ್-2' ಪಾತ್ರ ಸಿಕ್ಕಿದ್ದು ಹೇಗೆ? ಪ್ರಶಾಂತ್ ನೀಲ್ ಮತ್ತು ಸಿನಿಮಾದ ಬಗ್ಗೆ ರವೀನಾ ಟಂಡನ್ ಮಾತು

ವಿಡಿಯೋ ಮೂಲಕ ಯಶ್ ಮನವಿ
ಈ ವರ್ಷ ಅದ್ದೂರಿ ಹುಟ್ಟುಹಬ್ಬ ಆಚರಣೆ ಬೇಡ, ನೀವೆಲ್ಲಿದ್ದೀರೊ ಅಲ್ಲಿಂದನೆ ಆಶೀರ್ವಾದ ಮಾಡಿ ಎಂದು ಯಶ್ ಮನವಿ ಮಾಡಿಕೊಂಡಿದ್ದಾರೆ. 'ನನಗೆ ನಿಮ್ಮ ಆರೋಗ್ಯ, ನಿಮ್ಮ ಕುಟುಂಬದವರ ಆರೋಗ್ಯ ಹೆಚ್ಚು ಮುಖ್ಯ, ಹಾಗಾಗಿ ಈ ಬಾರಿ ಗುಂಪು ಗೂಡಿ ಹುಟ್ಟುಹಬ್ಬ ಆಚರಿಸುವ ಬದಲಿಗೆ, ತಾವುಗಳು ಎಲ್ಲಿ ಇರುತ್ತೀರೋ ಅಲ್ಲಿಂದಲೇ ಶುಭ ಹಾರೈಸಿ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳಿಸಿ' ಎಂದಿದ್ದಾರೆ ಯಶ್.

ಟೀಸರ್ ನೋಡಿ ಆನಂದಿಸಿ ಎಂದ ಯಶ್
ಹುಟ್ಟುಹಬ್ಬದ ದಿನವೇ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಆಗಲಿದ್ದು, ಟೀಸರ್ ಅನ್ನು ನೋಡಿ ಆನಂದಿಸಿ, ಪ್ರತಿಕ್ರಿಯಿಸಿ ಎಂದು ಮನವಿ ಮಾಡಿದ್ದಾರೆ ನಟ ಯಶ್.