"ಲೇಸರ್‌ ಟ್ರೀಟ್‌ಮೆಂಟ್‌ನಲ್ಲೂ ಹೋಗಲ್ಲ": ದರ್ಶನ್ ಎದೆಗಿಳಿದ "ಸೆಲೆಬ್ರಿಟಿ" ಟ್ಯಾಟೂ ಬಗ್ಗೆ ಆರ್ಟಿಸ್ಟ್ ಹೇಳಿದ್ದಿಷ್ಟು

ನಟ ದರ್ಶನ್ 'ಕಾಟೇರ' ಸಿನಿಮಾ ಚಿತ್ರೀಕರಣದಿಂದ ಬಿಡುವು ಮಾಡ್ಕೊಂಡು ಚುನಾವಣ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಇನ್ನು ದರ್ಶನ್ ವರ್ಕೌಟ್‌ ವಿಡಿಯೋವೊಂದು ರಿಲೀಸ್ ಆಗಿ ಭಾರೀ ಸದ್ದು ಮಾಡ್ತಿದೆ. ದರ್ಶನ್ ಡೆಡಿಕೇಷನ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೇ ವಿಡಿಯೋ ದಾಸನ ಎದೆ ಮೇಲಿರುವ "ನನ್ನ ಪ್ರೀತಿಯ ಸೆಲೆಬ್ರಿಟೀಸ್" ಟ್ಯೂಟೂ ಬಗ್ಗೆ ಕೆಲವರಿಗೆ ಅನುಮಾನ ಹುಟ್ಟಾಕ್ಕಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮನೆಯ ಜಿಮ್‌ನಲ್ಲಿ ವರ್ಕೌಟ್ ಮಾಡಿರುವ ವಿಡಿಯೋವೊಂದು ಇತ್ತೀಚೆಗೆ ರಿಲೀಸ್ ಆಗಿತ್ತು. ಆ ವಿಡಿಯೋ ಕೊನೆಯಲ್ಲಿ ದರ್ಶನ್ ಟೀಶರ್ಟ್ ಬಿಚ್ಚಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ದರ್ಶನ್ ಎದೆ ಖಾಲಿ ಖಾಲಿ ಕಂಡಿದೆ. ಅರೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಾಸ ತಮ್ಮ ಸೆಲೆಬ್ರಿಟಿಗಳ ಹೆಸರನ್ನು ಎದೆಮೇಲೆ ಹಚ್ಚೆ ಹಾಕಿಸಿಕೊಂಡಿದ್ದರಲ್ಲ. ಈಗ ನೋಡಿದ್ರೆ ಅದು ಕಾಣಿಸುತ್ತಿಲ್ಲ. ದರ್ಶನ್ ಟ್ಯಾಟೂ ಪರ್ಮನೆಂಟ್ ಅಲ್ವಾ? ಟೆಂಪರರಿನಾ? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿತ್ತು. ಇದಕ್ಕೆ ದರ್ಶನ್ ಅಭಿಮಾನಿಗಳು ಸ್ಪಷ್ಟನೆ ನೀಡಿದ್ದಾರೆ.

Fans clarification on Darshans chest tattoo is temporary or permanent through an artist Girish statement

ಈ ವರ್ಕೌಟ್ ವಿಡಿಯೋ ಇತ್ತೀಚೆಗೆ ಶೂಟ್ ಮಾಡಿರುವುದು ಅಲ್ಲ. ಬಹಳ ಹಿಂದಿನದ್ದು. ಆಗ ದರ್ಶನ್ ಅವರು ಇನ್ನು ಟ್ಯೂಟೂ ಹಾಕಿಸಿರಲಿಲ್ಲ. ಹಾಗಾಗಿ ವಿಡಿಯೋದಲ್ಲಿ ದರ್ಶನ್ ಅವರ ಎದೆಮೇಲೆ ಟ್ಯಾಟೂ ಕಾಣಿಸುತ್ತಿಲ್ಲ ಎಂದು ಹೇಳಿ ಅದಕ್ಕೆ ಒಂದಷ್ಟು ಸಾಕ್ಷಿಯನ್ನು ಒದಗಿಸಿದ್ದರು. ಅಲ್ಲಿಗೆ ಸುಮ್ಮನಾಗದ ಅಭಿಮಾನಿಗಳು ದರ್ಶನ್ ಅವರಿಗೆ ಟ್ಯಾಟೂ ಹಾಕಿದ ಆರ್ಟಿಸ್ಟ್ ಹೇಳಿಕೆಯನ್ನು ಈಗ ಸಾಕ್ಷಿಯಾಗಿ ನೀಡಿದ್ದಾರೆ. ಯಾವುದೇ ಕಾರಣಕ್ಕೂ ದರ್ಶನ್ ಅವರ ಎದೆಮೇಲಿನ ಟ್ಯಾಟೂ ಅಳಿಸಲು ಸಾಧ್ಯವಿಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿದ್ಧಾರೆ.

ಈ ವರ್ಷ ನಟ ದರ್ಶನ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ತಮ್ಮ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಪ್ರದರ್ಶಿಸಲು ಟ್ಯಾಟೂ ಹಾಕಿಸಿಕೊಂಡಿದ್ದರು. ಎಂಜಿ ರಸ್ತೆಯ ಚರ್ಚೆ ಸ್ಟ್ರೀಟ್‌ನಲ್ಲಿರುವ "ಬ್ರಹ್ಮ ಟ್ಯಾಟೂ ಸ್ಟುಡಿಯೋ"ದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದರು. ಟ್ಯಾಟೂ ಆರ್ಟಿಸ್ಟ್ ಗಿರೀಶ್ "ನನ್ನ ಪ್ರೀತಿಯ ಸೆಲೆಬ್ರಿಟೀಸ್" ಎನ್ನುವ ಟ್ಯಾಟುವನ್ನು ದರ್ಶನ್ ಅವರ ಎದೆ ಮೇಲೆ ಹಾಕಿದ್ದರು. ಇದಕ್ಕಾಗಿ ಹಿಡಿಸಿದ್ದು ಮುಕ್ಕಾಲು ಗಂಟೆ ಸಮಯ. ದರ್ಶನ್‌ಗೆ ಹಾಕಿರುವ ಟ್ಯಾಟೂ ಬಗ್ಗೆ ಈ ಹಿಂದೆ ಯೂಟ್ಯೂಬ್‌ ಚಾನಲ್‌ವೊಂದರ ಸಂದರ್ಶನದಲ್ಲಿ ಗಿರೀಶ್ ಮಾತನಾಡಿದ್ದರು. ಅದರ ವಿಶೇಷತೆ ಏನು ಎಂದು ವಿವರಿಸಿದ್ದರು.

Fans clarification on Darshans chest tattoo is temporary or permanent through an artist Girish statement

ಟ್ಯಾಟೂ ಆರ್ಟಿಸ್ಟ್ ಗಿರೀಶ್ ಮಾತನಾಡಿ "ಇದು ಪರ್ಮನೆಂಟ್ ಟ್ಯಾಟೂ. ಲೈಫ್ ಲಾಂಗ್ ಇರುತ್ತೆ ಇದು. ತೆಗೆಯೋಕ್ಕಾಗಲ್ಲ. ತೆಗೆಸಿಕೊಳ್ಳಬೇಕು ಅಂದ್ರು ಕಷ್ಟ. ದರ್ಶನ್ ಅವ್ರು ಏನು ಹೇಳಿದ್ರು ಅಂದ್ರೆ, ಟ್ಯಾಟು ಹಾಕಿದ್ರೆ ಪರ್ಮನೆಂಟ್ ಆಗಿ ನನ್ನ ಜೊತೆಗೆ ಇರ್ಬೇಕು ಅಂದ್ರು. ಯಾವುದೇ ಕಾರಣಕ್ಕೂ ಹೋಗಬಾರ್ದು. ಫೇಡ್‌ ಕೂಡ ಆಗಬಾರದು. ಅಷ್ಟು ಚೆನ್ನಾಗಿ ಟ್ಯಾಟು ಹಾಕಿ ಅಂದ್ರು. ನಾವು ಮಾಡಿರೋರು ಪರ್ಮನೆಂಟ್ ಟ್ಯಾಟೂ. ಬಹಳ ಕಷ್ಟ. ತೆಗೆಯೋಕ್ಕಾಗಲ್ಲ"

"ನಾನು ಬಳಸಿರುವುದು ಹೈಗ್ರೇಡ್ ಇಂಕ್. ಅದು ಲಂಡನ್‌ನಿಂದ ಬರುತ್ತೆ. ಅದನ್ನು ಲೇಸರ್‌ನಲ್ಲೂ ತೆಗೆಯೋಕ್ಕಾಗಲ್ಲ. ಅಂತಹ ಇಂಕ್ ಅದು. ತುಂಬಾ ಅಂದ್ರೆ ತುಂಬಾ ಕಷ್ಟ ತೆಗೆಯೋದು. ಅಷ್ಟು ಬಲವಾದ ನಿರ್ಣಯ ಅವರದ್ದು. ದರ್ಶನ್ ಅವರಲ್ಲಿ ಎಂತಹ ದೃಢತೆ ಇತ್ತು ಅಂದ್ರೆ, ಒಮ್ಮೆ ಹಾಕಿಸಿದ್ರೆ ತೆಗೆಯುವ ಅವಕಾಶವೇ ಇರಬಾರದು ಅನ್ನುವುದೇ ಅವರ ಮನಸ್ಸಿನಲ್ಲಿ ಇತ್ತು. ಹಾಗಾಗಿ ಬಂದು ಟ್ಯಾಟೂ ಹಾಕಿಸಿದ್ರು. ನಿಜವಾಗಿಯೂ ಅದು ಪರ್ಮನೆಂಟ್ ಟ್ಯಾಟು, ತೆಗೆಯೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ನಮ್ಗೆ ಗೊತ್ತಿರುತ್ತೆ ಅದನ್ನು ಹೇಗೆ ಹಾಕಿದ್ದೀವಿ ಅಂತ. ಫಾರಿನರ್ಸ್ ಆದ್ರೆ ಲೈಟ್ ಆಗಿ ಟ್ಯಾಟೂ ಹಾಕ್ತಾರೆ. ಅದನ್ನು ಲೇಸರ್‌ನಲ್ಲಿ ತೆಗೆಯಬಹುದು. ಇಂಡಿಯನ್ಸ್ ಹಾಕಿಸಿಕೊಳ್ಳುವ ಟ್ಯಾಟೂನ ಲೇಸರ್‌ನಲ್ಲಿ ತೆಗೆಯೋಕ್ಕಾಗಲ್ಲ. ಅಂತದ್ದನ್ನು ಹಾಕಿಸಿಕೊಳ್ತಾರೆ" ಎಂದಿದ್ದರು.

ಒಟ್ನಲ್ಲಿ ನೆಚ್ಚಿನ ನಟನ ಟ್ಯಾಟೂ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆ ದರ್ಶನ್ ಅಭಿಮಾನಿಗಳು ಈ ವಿಡಿಯೋ ತೋರಿಸಿ ಉತ್ತರ ಕೊಟ್ಟಿದ್ದಾರೆ. ವರ್ಕೌಟ್ ವಿಡಿಯೋ ಹಳೆಯದ್ದು. ದರ್ಶನ್ ಅವರು ಹಾಕಿಸಿಕೊಳ್ಳುವುದಕ್ಕು ಮುನ್ನ ಸೆರೆ ಹಿಡಿದಿರುವುದು. ದರ್ಶನ್ ಅವರ ಎದೆಯಲ್ಲಿ ಅಭಿಮಾನಿಗಳ ಪ್ರೀತಿ ಈಗಲೂ ಇದೆ, ಎಂದೆಂದೂ ಇರುತ್ತದೆ ಎಂದು ತಿರುಗೇಟು ನೀಡಿದ್ಧಾರೆ.

More from Filmibeat

English summary
Fans clarification on Darshan's chest tattoo is temporary or permanent through an artist Girish statement. artist Girish Said that Tattoo which Darshan got on his chest is permanent, it couldn't remove easily. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X