ದರ್ಶನ್ ಪತ್ನಿಗೆ 'ಡಿ' ಕಂಪನಿ ಶ್ರೀ ರಕ್ಷೆ ; ಅತ್ತಿಗೆ ಆಜ್ಞೆ ಮಾಡಿ ಎಂದ ಅಭಿಮಾನಿಗಳು..!
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಹೀಗಾಗಿಯೇ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಸೆಲೆಬ್ರೀಟಿ ಪಟ್ಟವನ್ನೂ ಕಟ್ಟಿದರು. ಆದರೆ, ಕೆಲವೊಮ್ಮೆ ಕಾಲ ಚಕ್ರ, ಅಭಿಮಾನಿಗಳ ಅಭಿಮಾನದ ಪರೀಕ್ಷೆಯನ್ನ ಮಾಡುತ್ತೆ. ಸಂದಿಗ್ದ ಪರಿಸ್ಥಿತಿಗೆ ದೂಡುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಸಂಖ್ಯಾತ.. ಅಗಣಿತ ಅಭಿಮಾನಿಗಳು ಸದ್ಯಕ್ಕೆ ಇಂಥಹದ್ದೇ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಇದ್ದಾರೆ. ಸಮಾಧಾನದ ಸಂಗತಿ ಎಂದರೆ ಈ ಕಠಿಣ ಪರಿಸ್ಥಿತಿಯಲ್ಲಿಯೂ ಕೆಲವರು ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ. ತಮ್ಮ ನೆಚ್ಚಿನ ನಾಯಕ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರ ಬೆನ್ನ ಹಿಂದೆ ಬಂಡೆಕಲ್ಲಿನಂತೆ ನಿಂತಿದ್ದಾರೆ. ಪವಿತ್ರ ಗೌಡ ವಿರುದ್ಧ ಹರಿಹಾಯುತ್ತಿದ್ದಾರೆ.
ದರ್ಶನ್- ವಿಜಯ ಲಕ್ಷ್ಮೀ ಹಾಗೂ ಪವಿತ್ರಾ ಗೌಡ ನಡುವೆ ನಡೆಯುತ್ತಿರುವ ಸಂಸಾರ ಸಮರಕ್ಕೆ ಇಂದು ಎಂಟ್ರಿ ಕೊಟ್ಟಿರುವ ಅಭಿಮಾನಿಗಳು, ಸಾಮಾಜಿಕ ಜಾಲತಾಣದ ಮೂಲಕ ವಿಜಯ ಲಕ್ಷ್ಮೀ ಅವರಿಗೆ ಧೈರ್ಯವನ್ನ ತುಂಬುವ ಕೆಲಸವನ್ನ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಅತ್ತಿಗೆ ಕುಗ್ಗಬೇಡಿ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಅತ್ತಿಗೆ ನೀವು ತಲೆ ಕೆಡಿಸಿಕೊಳ್ಳಬೇಡಿ, ಒಂದೇ ಒಂದು ಮಾತು ಹೇಳಿ ಇನ್ನೊಂದು ಸಲ ಬಾಸ್ ಬಗ್ಗೆ ಪೋಸ್ಟ್ ಹಾಕಬಾರದು ಹಾಗೇ ಮಾಡ್ತೀವಿ ಎಂದು ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಪವಿತ್ರಾ ಗೌಡಗೆ ಸವಾಲನ್ನ ಹಾಕ್ತಿದ್ದಾರೆ.

ವಿಜಯಲಕ್ಷ್ಮೀ ಹೇಳಿದ್ದೇನು..?
ಈ ಮಹಿಳೆಗೆ ಪ್ರಜ್ಞೆ ಇದ್ದಿದ್ದರೆ ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುತ್ತಿರಲಿಲ್ಲ. ಈ ಕಾರ್ಯ ಆಕೆಯ ನೈತಿಕತೆ ಮತ್ತು ಆದರ್ಶ ಎಂಥಹದ್ದು ಎಂದು ತೋರಿಸುತ್ತದೆ. ವ್ಯಕ್ತಿಯೊಬ್ಬ ವಿವಾಹಿತನೆಂದು ತಿಳಿದಿದ್ದರೂ ಸಹ ಈಕೆ ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಮತ್ತು ಲಾಭಕ್ಕಾಗಿ ಹತ್ತಿರವಾಗುತ್ತಾಳೆ. ಖುಷಿ ಗೌಡ, ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಎಂಬುದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ ಈ ಚಿತ್ರಗಳು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು'
ಸದ್ಯಕ್ಕೆ ವಿಜಯ ಲಕ್ಷ್ಮೀ ಅವರಿಗೆ ಅಭಿಮಾನಿಗಳಲ್ಲಿಯೇ ಒಂದು ವರ್ಗ ಬೆಂಬಲ ಕೊಡ್ತಿದೆ. ಪವಿತ್ರಾ ಗೌಡ ಮೇಲೆ ಕೆಂಡವನ್ನೂ ಕಾರುತ್ತಿದೆ. ಒಂದರ್ಥದಲ್ಲಿ ಇದು ನಿಜಕ್ಕೂ ಅಭಿಮಾನಿಗಳ ಪಾಲಿಗೆ ಸತ್ವ ಪರೀಕ್ಷೆಯ ಸಮಯ.


Click it and Unblock the Notifications











