ರಕ್ಷಿತ್-ಶಾನ್ವಿ ನಡುವೆ ಏನೋ ನಡೀತಾ ಇದೆಯಂತೆ, ನಿಜಾನಾ..?

Recommended Video

Fans comments about Rakshit Shetty and Shanvi Srivastava photo | FILMIBEAT KANNADA

ನಟ ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಶ್ರೀವತ್ಸವ್ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗಲೇ, ಈ ಜೋಡಿ ನಡುವೆ ಈಗ ಏನೋ ನಡೆಯುತ್ತಾ ಇದೆಯಂತೆ. ಹೀಗೆಂದು ಹೇಳುತ್ತಿರುವುದು ರಕ್ಷಿತ್ ಶೆಟ್ಟಿ ಅಭಿಮಾನಿಗಳು.

ಆನ್ ಸ್ಕ್ರೀನ್ ಮೇಲೆ ಮುದ್ದು ಮುದ್ದಾಗಿ ಕಾಣಿಸುವ ತಾರ ಜೋಡಿಗಳು ರಿಯಲ್ ಲೈಫ್ ನಲ್ಲಿಯೂ ಒಂದಾಗಬೇಕು ಎನ್ನುವ ಆಸೆ ಅಭಿಮಾನಿಗಳಿಗೆ ಇರುತ್ತದೆ. ಅದೇ ರೀತಿ ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಶ್ರೀವತ್ಸವ್ ಮದುವೆ ಆಗಬೇಕು ಎನ್ನುವುದು ಕೆಲವು ಅಭಿಮಾನಿಗಳ ಆಸೆಯಾಗಿದೆ. ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಈ ರೀತಿಯಾಗಿ ಟ್ವೀಟ್ ಮಾಡಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳು ಈ ರೀತಿಯ ಹೇಳುವುದಕ್ಕೂ ಕಾರಣ ಇದೆ. ರಕ್ಷಿತ್ ಶೆಟ್ಟಿ ಟ್ವಿಟ್ಟರ್ ನಲ್ಲಿ ಹಾಕಿರುವ ಒಂದು ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ, ಗೊಂದಲ ಎರಡನೂ ಮೂಡಿಸಿದೆ.

ಶಾನ್ವಿ ಶ್ರೀವತ್ಸವ್ ಹುಟ್ಟುಹಬ್ಬದ ಶುಭಾಶಯ

ಶಾನ್ವಿ ಶ್ರೀವತ್ಸವ್ ಹುಟ್ಟುಹಬ್ಬದ ಶುಭಾಶಯ

ನಟಿ ಶಾನ್ವಿ ಶ್ರೀವತ್ಸವ್ ಇಂದು (ಡಿಸೆಂಬರ್ 8) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ವಿಶೇಷವಾಗಿ ಶಾನ್ವಿಯ ಚಿತ್ರರಂಗದ ಅನೇಕ ಸ್ನೇಹಿತರು ಶುಭಾಶಯ ತಿಳಿಸಿದ್ದಾರೆ. ಹಾಗೆಯೇ ನಟ ರಕ್ಷಿತ್ ಶೆಟ್ಟಿ ಕೂಡ ಟ್ವಿಟ್ಟರ್ ನಲ್ಲಿ ಶಾನ್ವಿಗೆ ವಿಶ್ ಮಾಡಿ, ಅವರ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ, ಆ ಫೋಟೋ ಮೇಲೆ ಶಾನ್ವಿ ಬಗ್ಗೆ ರಕ್ಷಿತ್ ಬರೆದ ಬರಹ ಗೊಂದಲ ಮೂಡಿಸಿದೆ.

ಕಷ್ಟ ಸುಖದಲ್ಲಿ ಜೊತೆಗೆ ಇದ್ದೆ

ಕಷ್ಟ ಸುಖದಲ್ಲಿ ಜೊತೆಗೆ ಇದ್ದೆ

''ನಾನು ಇಷ್ಟು ದಿನ ಕೆಲಸ ಮಾಡಿದ ಬೆಸ್ಟ್ ಕೋ ಸ್ಟಾರ್ ನೀನು ಎಂದು ಮಾತ್ರ ನಿನ್ನ ಬಗೆ ಹೇಳಿ ಬಿಡಲು ಸಾಧ್ಯವಿಲ್ಲ. ಕಾರಣ ನೀನು ಒಬ್ಬ ಸ್ನೇಹಿತೆಯಾಗಿ, ಕಳೆದ ಎರಡು ವರ್ಷಗಳಿಂದ ನನ್ನ ಒಳ್ಳೆಯ ಮತ್ತು ಕಷ್ಟದ ಸಮಯದಲ್ಲಿ ಜೊತೆಗೆ ಇದ್ದೆ. ಈ ಜರ್ನಿಯಲ್ಲಿ ಭಾಗ ಆಗಿರುವುದಕ್ಕೆ ಧನ್ಯವಾದ. ಹ್ಯಾಪಿ ಬರ್ತ್ ಡೇ ಅಂಡ್ ಮಚ್ ಲವ್.'' ಎಂದು ಬರೆದಿದ್ದಾರೆ.

ಅಭಿಮಾನಿಗಳ ಕಾಮೆಂಟ್ಸ್ ಗಳು

ಅಭಿಮಾನಿಗಳ ಕಾಮೆಂಟ್ಸ್ ಗಳು

ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಶ್ರೀವಾತ್ಸವ ಫೋಟೋ ನೋಡಿ, ಅದರಲ್ಲಿಯೂ ರಕ್ಷಿತ್ ಬರಹ ನೋಡಿ, ಅನೇಕರು ಕಾಮೆಂಟ್ಸ್ ಮಾಡುತ್ತಿದ್ದಾರೆ. ಓಹೋ.. ಏನೋ ನಡೀತಾ ಇದೆ.. ಸೂಪರ್ ಜೋಡಿ, ಮದುವೆ ಆಗಿ ಎಂದು ಹೇಳುತ್ತಿದ್ದಾರೆ. ಒಬ್ಬರಲ್ಲ... ಇಬ್ಬರಲ್ಲ... ಅನೇಕರು ಇದೇ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ರಕ್ಷಿತ್ ಈ ಕಾಮೆಂಟ್ಸ್ ಗಳಿಗೆ ಉತ್ತರ ನೀಡಿಲ್ಲ.

ಪದೇ ಪದೇ ಹೀಗೆ ಆಗುತ್ತಿದೆ

ಪದೇ ಪದೇ ಹೀಗೆ ಆಗುತ್ತಿದೆ

ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆಯೂ ಮೊದಲು ಅಭಿಮಾನಿಗಳು ಈ ರೀತಿ ಕಾಮೆಂಟ್ಸ್ ಮಾಡುತ್ತಿದ್ದರು. ಆ ಬಳಿಕ ನಟಿ ಮೇಘನಾ ಗಾಂವ್ಕರ್ ಜೊತೆಗಿನ ಫೋಟೋ ನೋಡಿಯೂ ಹೀಗೆ ಹೇಳುತ್ತಿದ್ದರು. ಇದೀಗ ಶಾನ್ವಿ ಹಾಗೂ ರಕ್ಷಿತ್ ಫೋಟೋಗೂ ಈ ರೀತಿಯ ಕಾಮೆಂಟ್ ಬರುತ್ತಿದೆ. ಶಾನ್ವಿಯನ್ನು ರಕ್ಷಿತ್ ಹೊಗಳಿದ ಶೈಲಿಗೆ ಅಭಿಮಾನಿಗಳು ಗೊಂದಲ ಮತ್ತು ಕುತೂಹಲದಿಂದ ಕಾಮೆಂಟ್ಸ್ ಮಾಡುತ್ತಿದ್ದಾರೆ.

More from Filmibeat

English summary
Fans comments about Rakshit Shetty and Shanvi Srivastava photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X