ಪುನೀತ್ ರಾಜ್ ಕುಮಾರ್ ಟ್ವೀಟ್ ಖಂಡಿಸಿದ ನೆಟ್ಟಿಗರು: ಅಡ್ಮಿನ್ ವಿರುದ್ಧ ಆಕ್ರೋಶ

ಪುನೀತ್ ರಾಜ್ ಕುಮಾರ್ ಇತ್ತೀಚಿಗಷ್ಟೆ ಹುಟ್ಟುಹಬ್ಬವನ್ನು (ಮಾರ್ಚ್ 17) ಆಚರಿಸಿಕೊಂಡರು. ಅಪ್ಪು ಬರ್ತಡೇಗೆ ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ. ದರ್ಶನ್, ಸುದೀಪ್, ಗಣೇಶ್, ಧನಂಜಯ್, ಖುಷ್ಬೂ, ಜಗ್ಗೇಶ್, ಧ್ರುವ ಸರ್ಜಾ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.

Recommended Video

ಅಭಿಮಾನಿಗಳ ಅಕ್ರೋಶಕ್ಕೆ ಕಾರಣವಾದ ಪುನೀತ್ ಟ್ವೀಟ್ | Filmibeat Kannada

ಬರ್ತಡೇಗೆ ಶುಭಕೋರಿದ ತಾರಬಳಗಕ್ಕೆ ಪುನೀತ್ ರಾಜ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ. ಟ್ವಿಟ್ಟರ್ ಮೂಲಕ ವಿಶ್ ಮಾಡಿದ ಪ್ರತಿಯೊಬ್ಬ ಸೆಲೆಬ್ರಿಟಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಸ್ಟಾರ್ಸ್‌ಗೆ ಧನ್ಯವಾದ ತಿಳಿಸುವ ಭರದಲ್ಲಿ ಅಪ್ಪು ಮಾಡಿರುವ ಟ್ವೀಟ್‌ವೊಂದಕ್ಕೆ ವಿರೋಧ ವ್ಯಕ್ತವಾಗಿದೆ.

ಕನ್ನಡ ಕಂಠೀರವ ಡಾ ರಾಜ್ ಕುಮಾರ್ ಅವರ ಮಗ ಆಗಿದ್ದು, ಇಂತಹ ಎಡವಟ್ಟು ಏಕೆ ಆಯಿತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ, ಪುನೀತ್ ರಾಜ್ ಕುಮಾರ್ ಮಾಡಿರುವ ಟ್ವೀಟ್ ಯಾವುದು? ಏನಾಗಿದೆ? ಮುಂದೆ ಓದಿ....

ಪುನೀತ್ ಮಾಡಿದ ಟ್ವೀಟ್ ಏನು?

ಪುನೀತ್ ಮಾಡಿದ ಟ್ವೀಟ್ ಏನು?

ಹೊಂಬಾಳೆ ಫಿಲಂಸ್ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಪುನೀತ್ ಹುಟ್ಟುಹಬ್ಬದ ವಿಶೇಷವಾಗಿ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ಕಿರಗಂದೂರು ಅವರ ಟ್ವೀಟ್‌ಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ''ಥ್ಯಾಂಕ್ಸ್ ಎ ಲಾಟ್ ವಿಜಯ್ ಕಿರಗಂದೂರು ಜೀ'' ಎಂದಿದ್ದಾರೆ. ಕಿರಗಂದೂರು ಅವರು ಕನ್ನಡದಲ್ಲಿಯೇ ವಿಶ್ ಮಾಡಿದ್ದರೂ, ''ಜೀ'' ಎಂಬ ಪದ ಬಳಸಿದ್ದು ಏಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ನಮಗೆ ಅಣ್ಣಾವ್ರ 'ಅವರು' ಬೇಕು 'ಜಿ' ಅಲ್ಲ!

ನಮಗೆ ಅಣ್ಣಾವ್ರ 'ಅವರು' ಬೇಕು 'ಜಿ' ಅಲ್ಲ!

- ಕನ್ನಡದವರು ಕನ್ನಡದವರಿಗೆ ಜಿ ಅನ್ನೋದಾ... ನಮ್ಮ ಭಾಷೆ, ನಮ್ಮ ಹೆಮ್ಮೆ... ದಯವಿಟ್ಟು ಇದರ ಬಗ್ಗೆ ಗಮನಿಸಿ

- ನಿಮಗೆ ಅವರು ಕನ್ನಡದಲ್ಲಿ ಶುಭಾಶಯ ಕೋರಿದ್ದಾರೆ, ಮೇಲಾಗಿ ಅವರೂ ಕೂಡ ಕನ್ನಡಿಗರು ಕನ್ನಡದಲ್ಲಿಯೇ ಧನ್ಯವಾದಗಳನ್ನು ತಿಳಿಸಬಹುದಿತ್ತು ಅಲ್ಲವೇ ಪುನೀತ್‌ರವರೆ...?

- ನಮಗೆ ಅಣ್ಣಾವ್ರ 'ಅವರು' ಬೇಕು 'ಜಿ' ಅಲ್ಲ! ಎಂದು ನೆಟ್ಟಿಗರು ಖಂಡಿಸಿದ್ದಾರೆ.

ಅಡ್ಮಿನ್ ವಿರುದ್ಧ ಆಕ್ರೋಶ

ಅಡ್ಮಿನ್ ವಿರುದ್ಧ ಆಕ್ರೋಶ

ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಖಾತೆ ನಿಭಾಯಿಸುವ ಅಡ್ಮಿನ್ ವಿರುದ್ಧ ಪುನೀತ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುನೀತ್ ಅವರು ಈ ರೀತಿ ಮಾಡುವುದಿಲ್ಲ, ಅಡ್ಮಿನ್ ಮಾಡಿರುವ ಟ್ವೀಟ್ ಇದು ಎಂದು ಟೀಕಿಸಿದ್ದಾರೆ.

ಏಪ್ರಿಲ್ 1ಕ್ಕೆ ಯುವರತ್ನ ಯುವರತ್ನ

ಏಪ್ರಿಲ್ 1ಕ್ಕೆ ಯುವರತ್ನ ಯುವರತ್ನ

ವಿಜಯ್ ಕಿರಗಂದೂರು ನಿರ್ಮಾಣದ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಯೇಶಾ ನಾಯಕಿಯಾಗಿ ನಟಿಸಿದ್ದಾರೆ. ಧನಂಜಯ್, ಸೋನು ಗೌಡ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Fans Condemned Actor Puneeth Raj Kumar For Tweeting in Hindi Word Instead of Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X