'ಯಜಮಾನ' ಫಸ್ಟ್ ಲುಕ್ ಸ್ವಾಗತಿಸಲು ಆರತಿ ಎತ್ತಿದ ಡಿ-ಬಾಸ್ ಭಕ್ತರು

Recommended Video

ಯಜಮಾನ ಸಿನಿಮಾ ಪೋಸ್ಟರ್‌ನ್ನು ಅಭಿಮಾನಿಗಳು ಫಾಲೋ ಮಾಡ್ತಿದ್ದಾರೆ..! | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ಬಹುನಿರೀಕ್ಷೆಯ ಸಿನಿಮಾ 'ಯಜಮಾನ'. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಈಗ ಫಸ್ಟ್ ಲುಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸುದ್ದಿಯನ್ನ ಸ್ವತಃ ಚಿತ್ರತಂಡವೇ ನೀಡಿದ್ದು, ಸೆಪ್ಟೆಂಬರ್ 23 ರಂದು 'ಯಜಮಾನ' ಫಸ್ಟ್ ಲುಕ್ ರಿಲೀಸ್ ಆಗಲಿದೆ.

ವಿಷ್ಯ ಏನಪ್ಪಾ ಅಂದ್ರೆ ಯಜಮಾನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗುತ್ತೆ ಎಂಬುದನ್ನಷ್ಟೇ ಹೇಳಿರುವುದು. ಅದಕ್ಕೆ ಡಿ ಬಾಸ್ ಅಭಿಮಾನಿಗಳು ಟ್ರೆಂಡ್ ಶುರು ಮಾಡಿದ್ದಾರೆ.

ಯಜಮಾನ ಚಿತ್ರದ ಫಸ್ಟ್ ಲುಕ್ ಬರುತ್ತೆ ಎಂದು ತಿಳಿಸಿರುವ ಚಿತ್ರತಂಡ ಅದಕ್ಕೆ ವಿಶೇಷವಾದ ಪೋಸ್ಟರ್ ವೊಂದನ್ನ ರಿಲೀಸ್ ಮಾಡಿದೆ. ಈ ಪೋಸ್ಟರ್ ಈಗ ಟ್ರೆಂಡ್ ಆಗುತ್ತಿದೆ. ದರ್ಶನ್ ಅಭಿಮಾನಿಗಳು ದರ್ಶನ್ ಅವರನ್ನ ಫಾಲೋ ಮಾಡ್ತಿದ್ದಾರೆ. ಮುಂದೆ ಓದಿ....

ದರ್ಶನ್ ಪೋಸ್ ವೈರಲ್

ದರ್ಶನ್ ಪೋಸ್ ವೈರಲ್

ಯಜಮಾನ ಚಿತ್ರದ ಫಸ್ಟ್ ಲುಕ್ ಸೆಪ್ಟೆಂಬರ್ 23 ರಂದು ಬಿಡುಗಡೆಯಾಗುತ್ತೆ ಎಂಬುದನ್ನ ದರ್ಶನ್ ಅವರ ಭಾವಚಿತ್ರವನ್ನ ಬಳಸಿ ರಿವೀಲ್ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ದರ್ಶನ್ ಬೆನ್ನು ತೋರಿಸಿ ನಿಂತಿರುವ ಫೋಟೋ ಇದ್ದು, ಇದು ಈಗ ಎಲ್ಲೆಡೆ ವೈರಲ್ ಆಗ್ತಿದೆ.

'ಯಜಮಾನ'ನಂತೆ ನಿಂತ ಅಭಿಮಾನಿಗಳು

'ಯಜಮಾನ'ನಂತೆ ನಿಂತ ಅಭಿಮಾನಿಗಳು

ಯಾಜಮಾನ ಚಿತ್ರದ ದರ್ಶನ್ ಅವರ ಈ ಫೋಟೋ ಈಗ ಟ್ರೆಂಡ್ ಸೃಷ್ಟಿಸುತ್ತಿದೆ. ದರ್ಶನ್ ಅವರು ಬೆನ್ನು ತೋರಿಸಿರುವಂತೆ ಅವರ ಅಭಿಮಾನಿಗಳು ನಿಂತು ಪೋಸ್ ಕೊಡ್ತಿದ್ದಾರೆ. ಅಭಿಮಾನಿಗಳು ಈ ಕ್ರೇಜ್ ಈಗ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

ಹೇಗಿರಲಿದೆ ಯಜಮಾನ ಫಸ್ಟ್ ಲುಕ್

ಹೇಗಿರಲಿದೆ ಯಜಮಾನ ಫಸ್ಟ್ ಲುಕ್

ಇನ್ನು ಯಜಮಾನ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿಲ್ಲ. ಈಗಲೇ ಈ ಮಟ್ಟಿಗೆ ಕ್ರೇಜ್ ಉಂಟಾಗಿದೆ. ಇನ್ನು ಅಧಿಕೃತವಾಗಿ ಫಸ್ಟ್ ಲುಕ್ ಬಂದ್ಮೇಲೆ ಡಿ ಬಾಸ್ ಭಕ್ತರ ಹಬ್ಬ ಹೇಗಿರಬಹುದು ಎಂಬುದನ್ನ ಊಹಿಸಿಕೊಂಡರೇ ಅಬ್ಬಾ...ಅನಿಸುತ್ತೆ. ಟೈಟಲ್ ಮೂಲಕವೇ ದೊಡ್ಡ ಹೈಪ್ ಗೆ ಕಾರಣವಾಗಿರುವ ಯಜಮಾನದಲ್ಲಿ ದರ್ಶನ್ ಹೇಗೆ ಕಾಣಿಸಿಕೊಳ್ತಾರೆ ಎನ್ನುವುದು ಅಷ್ಟೇ ಕುತೂಹಲ.

ಡಿ ಬಾಸ್ ಗೆ ಪೂಜೆ

ಡಿ ಬಾಸ್ ಗೆ ಪೂಜೆ

ಬರಿ ಪೋಸ್ಟರ್ ಬರುತ್ತೆ ಎಂದು ಹೇಳಿದ್ದಕ್ಕೆ ಅಭಿಮಾನಿಗಳು ಆ ಪೋಸ್ಟರ್ ಗೆ ಪೂಜೆ ಮಾಡ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ ಕೈಯಲ್ಲೇ ಕರ್ಪೂರ ಹಚ್ಚಿ ಆರತಿ ಮಾಡಿದ್ದಾನೆ. ಈ ಫೋಟೋನೂ ಟ್ವಿಟ್ಟರ್ ನಲ್ಲಿ ಸುತ್ತಾಡ್ತಿದೆ.

ಶೈಲಾಜ ನಾಗ್ ನಿರ್ಮಾಣ

ಶೈಲಾಜ ನಾಗ್ ನಿರ್ಮಾಣ

ಅಂದ್ಹಾಗೆ, ಈ ಚಿತ್ರವನ್ನ ಬಿ ಸುರೇಶ್ ಮತ್ತು ಶೈಲಾಜ ನಾಗ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪಿ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಧನಂಜಯ್, ಅನೂಪ್ ಸಿಂಗ್ ಠಾಕೂರ್, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್ ಅಭಿನಯಿಸುತ್ತಿದ್ದಾರೆ. ಹರಿಕೃಷ್ಣ ಸಂಗೀತ ನೀಡಿದ್ದಾರೆ.

ಚಿತ್ರಕೃಪೆ: ಟ್ರೋಲ್ ಕನ್ನಡ ಮೂವೀಸ್

More from Filmibeat

English summary
Challenging star darshan's upcoming movie Yajamana first look will be released on september 23 at 10 AM on Dbeats music YouTube channel. here is the fans craze.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X