ನಮ್ಮ ತಂಗಿ ಹಳೇ ಬುಕ್‌ನಲ್ಲಿ ರಕ್ಷಿತ್ ಶೆಟ್ಟಿ ಫೋಟೊ ಸಿಕ್ತು; ಪೋಸ್ಟ್ ವೈರಲ್
ನಟ ರಕ್ಷಿತ್ ಶೆಟ್ಟಿ ಬಗ್ಗೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ರಿಚರ್ಡ್ ಆಂಟನಿ ಸಿನಿಮಾ ಯಾವಾಗ ರಿಲೀಸ್ ಅಂತ ಕೇಳಿ ಕೇಳಿ ಸುಸ್ತಾಗಿದ್ದಾರೆ. 4 ವರ್ಷಗಳ ಹಿಂದೆ ಸಿನಿಮಾ ಘೋಷಣೆ ಆದರೂ ಈವರೆಗೆ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಸಿನಿಮಾ ಶುರುವಾಗಿಲ್ಲ.
ಸ್ಟಾರ್ ನಟರು ವರ್ಷಕ್ಕೆ ಒಂದು, ಎರಡು ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ ರಕ್ಷಿತ್ ಶೆಟ್ಟಿ ಮಾತ್ರ 'ಸಪ್ತಸಾಗರದಾಚೆ ಎಲ್ಲೋ-2' ಬಳಿಕ ಯಾವುದೇ ಸಿನಿಮಾ ಶುರು ಮಾಡಿಲ್ಲ. 'ರಿಚರ್ಡ್ ಆಂಟನಿ' ಸಿನಿಮಾ ನಿರ್ದೇಶಿಸಿ ನಟಿಸೋದಾಗಿ ಹೇಳಿದ್ದಾರೆ. ಆದರೆ ಯಾವಾಗ ಎನ್ನುವುದೇ ಗೊತ್ತಿಲ್ಲ. ಅವರು ತಮ್ಮ ಸಿನಿಬದುಕಿನ ಪ್ರೈಂ ಟೈಮ್ ಅನ್ನು ವ್ಯರ್ಥ ಮಾಡುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

'ರಿಚರ್ಡ್ ಆಂಟನಿ' ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಸುಮ್ಮನಾಗಿದ್ದಾರೆ. ಸದ್ಯ ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಂ ಸೋ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ-1' ಸಿನಿಮಾ ಇನ್ನೆರಡು ತಿಂಗಳಲ್ಲಿ ತೆರೆಗೆ ಬರಲಿದೆ. ಚಿತ್ರದ ಮೇಕಿಂಗ್ ವೀಡಿಯೋ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡೋದು ಪಕ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ರಿಷಬ್ ಹಾಗೂ ರಾಜ್ ಬಿ ಶೆಟ್ಟಿ ಕಥೆ ಇದು. ಆದರೆ ರಕ್ಷಿತ್ ಶೆಟ್ಟಿ ಕಥೆ ಏನು? ಯಾವಾಗ ಸಿನಿಮಾ ಮಾಡೋದು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. "ರಕ್ಷಿತ್ ಶೆಟ್ಟಿ ಕಾಣೆಯಾಗಿದ್ದಾರೆ ಹುಡುಕಿಕೊಡಿ" ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿರುವುದು ವೈರಲ್ ಆಗ್ತಿದೆ. "ನಮ್ಮ ತಂಗಿಯ ಹಳೇ ಪುಸ್ತಕದಲ್ಲಿ ರಕ್ಷಿತ್ ಶೆಟ್ಟಿ ಫೋಟೊ ಸಿಕ್ತು, ಆಕೆ ಇಷ್ಟು ದೊಡ್ಡ ಅಭಿಮಾನಿ ಎನ್ನುವುದು ಗೊತ್ತಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಇಷ್ಟೆಲ್ಲಾ ಕಾಮೆಂಟ್ ಮಾಡುತ್ತಿದ್ದರೂ ಸಿಂಪಲ್ ಸ್ಟಾರ್ ಮಾತ್ರ ಸೈಲೆಂಟ್ ಆಗಿದ್ದಾರೆ.
ರಕ್ಷತ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡಿದ್ರು, ಅಭಿಮಾನಿಗಳು 'ರಿಚರ್ಡ್ ಆಂಟನಿ' ಯಾವಾಗ ಎಂದು ಕೇಳುತ್ತಾರೆ. ಸದ್ಯ ರಕ್ಷಿತ್ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷವೇ ಸಿನಿಮಾ ಶುರುವಾಗುತ್ತದೆ. ಬಹಳ ಬೇಗ ಚಿತ್ರೀಕರಣ ಮುಗಿಸಿ ಮುಂದಿನ ವರ್ಷವೇ ಸಿನಿಮಾ ಬಿಡುಗಡೆ ಮಾಡುತ್ತಾರೆ ಎಂದು ಕೆಲ ದಿನಗಳ ಹಿಂದೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹೇಳಿದ್ದರು.
'ಉಳಿದವರು ಕಂಡಂತೆ' ಚಿತ್ರದ ಪ್ರೀಕ್ವೆಲ್ ಹಾಗೂ ಸೀಕ್ವೆಲ್ 'ರಿಚರ್ಡ್ ಆಂಟನಿ'. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಬೇಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸಿನಿಮಾ ನಿರ್ಮಾಣ ಮಾಡುವ ಪ್ಲ್ಯಾನ್ ನಡೀತಿದೆ. ರಿಚರ್ಡ್ ಆಂಟನಿ ಪಾತ್ರ ಬಹಳ ಸದ್ದು ಮಾಡಿತ್ತು. ಇವತ್ತಿಗೂ ಆ ಪಾತ್ರಕ್ಕಿರುವ ಕ್ರೇಜ್ ಕಮ್ಮಿ ಆಗಿಲ್ಲ. 'ಉಳಿದವರು ಕಂಡಂತೆ' ಸಿನಿಮಾ ತಮಿಳಿಗೂ ರೀಮೆಕ್ ಆಗಿ ಸದ್ದು ಮಾಡಿತ್ತು.
11 ವರ್ಷಗಳ ಹಿಂದೆ 'ಉಳಿದವರು ಕಂಡಂತೆ' ಚಿತ್ರವನ್ನು ನಿರ್ದೇಶಿಸಿ ರಕ್ಷಿತ್ ಶೆಟ್ಟಿ ನಟಿಸಿದ್ದರು. ಬಳಿಕ ಯಾವುದೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿಲ್ಲ. ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲದಿದ್ದರೂ ಒಂದು ವರ್ಗದ ಪ್ರೇಕ್ಷಕರ ಹಾರ್ಟ್ ಫೇವರಿಟ್ ಅನಿಸಿಕೊಂಡಿದೆ. ಬಹಳ ವರ್ಷಗಳ ಬಳಿಕ ರಕ್ಷಿತ್ ಮತ್ತೆ 'ರಿಚರ್ಡ್ ಆಂಟನಿ' ಚಿತ್ರದ ಸಾರಥ್ಯ ವಹಿಸುತ್ತಿದ್ದಾರೆ.


Click it and Unblock the Notifications











