ಸಂಭ್ರಮ ಬಿಟ್ಟು ಸಮರ್ಥಿಸಿಕೊಳ್ಳೋದ್ರಲ್ಲೇ ಫ್ಯಾನ್ಸ್ ಸುಸ್ತು; ಇನ್ನಾದ್ರು ಬದಲಾಗಬೇಕಿದೆ 'ಟಾಕ್ಸಿಕ್' ಟೀಂ

ಯಾವುದಾದರೂ ದೊಡ್ಡ ಸಿನಿಮಾ ಟೀಸರ್, ಟ್ರೈಲರ್, ಸಾಂಗ್ಸ್ ಬಂದ್ರೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಆದರೆ 'ಟಾಕ್ಸಿಕ್' ವಿಚಾರದಲ್ಲಿ ಹೀಗೆ ಆಗ್ತಿಲ್ಲ. ಪ್ರತಿ ಟೀಸರ್ ಬಗ್ಗೆ ಟೀಕೆಗಳು ಬರೋದು ಅದನ್ನು ಸಮರ್ಥಿಸಿಕೊಳ್ಳುವುದು ಇದೇ ಆಗಿಬಿಟ್ಟಿದೆ. ನಮ್ದು ಹಾಲಿವುಡ್ ಸಿನಿಮಾ, ಎಲ್ಲಾ ಖುಲ್ಲಾಂಖುಲ್ಲಾ ಎಂದು ಚಿತ್ರತಂಡ ಧೈರ್ಯವಾಗಿ ಹೇಳುವ ಪ್ರಯತ್ನ ಮಾಡ್ತಿದೆ. ಹಸಿಬಿಸಿ ದೃಶ್ಯಗಳು, ಆಕ್ಷನ್ ದೃಶ್ಯಗಳು, ರಾಯನ ಸ್ಟೈಲ್, ಜಬರ್ದಸ್ತ್‌ ಡೈಲಾಗ್ಸ್ ಸೇರಿಸಿ ಟೀಸರ್ ಬಿಡ್ತಿದ್ದಾರೆ. ಅದು ಬಿಟ್ಟು ಬೇರೆ ಏನೂ ಸಿನಿಮಾದಲ್ಲಿ ಇಲ್ವಾ ಎಂದು ಕೇಳುವಂತಾಗಿದೆ.

ರಾಯ ಹಾಗೂ ಟಿಕೆಟ್ ಇಬ್ಬರೂ ಕಾಣಿಸಿಕೊಂಡಿದ್ದ ಟೀಸರ್‌ನಲ್ಲಿ ಕೊಂಚ ಮ್ಯಾಟರ್ ಇತ್ತು. ಇನ್ನುಳಿದಂತೆ ಎಲ್ಲವೂ ಬಿಲ್ಡಪ್ ಝಲಕ್‌ಗಳೇ ಬಂದಿವೆ. ಲೇಡೀಸ್ & ಲೇಡೀಸ್ ಟೀಸರ್‌ನಲ್ಲಿ ಕೂಡ ಅದೇ ಆಕ್ಷನ್, ಹಸಿಬಿಸಿ ದೃಶ್ಯಗಳು. ಸಿನಿಮಾ ಬಿಡುಗಡೆಗೆ 50 ದಿನ ಬಾಕಿಯಿದೆ. ಈಗಾಗಲೇ ಸಿನಿಮಾ ಸ್ಟೋರಿಲೈನ್ ಏನು ಎನ್ನುವುದನ್ನು ಯಶ್ ಹೇಳಿಬಿಟ್ಟಿದ್ದಾರೆ. ಹಾಗಾಗಿ ಇನ್ನು ಮುಚ್ಚಿಟ್ಟು ಸಾಧಿಸುವುದು ಏನು ಇಲ್ಲ. ಸಿನಿಮಾ ಮ್ಯಾಟರ್ ಇರೋ ಟೀಸರ್, ಟ್ರೈಲರ್ ಅಥವಾ ಸಾಂಗ್ ರಿಲೀಸ್ ಮಾಡಬೇಕಿದೆ.

Fans demand Yash s Toxic team to change promotion strategy

'ಟಾಕ್ಸಿಕ್' ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಿವೆ ಸರಿ. ಆದ್ರೆ ಅದನ್ನೇ ಎರಡೂವರೆ ಗಂಟೆ ತೋರಿಸೋದಿಲ್ಲ ಅಲ್ವಾ? ಹಾಗಾಗಿ ಬೇರೆ ಏನಿದೆ ಸಿನಿಮಾದಲ್ಲಿ ಎನ್ನುವ ಝಲಕ್ ರಿಲೀಸ್ ಆಗಬೇಕಿದೆ. ಇದೇ ಪ್ರಶ್ನೆಗಳನ್ನು ಸಾಕಷ್ಟು ಜನ ಕೇಳುತ್ತಿದ್ದಾರೆ. ಅಭಿಮಾನಿಗಳು ಸಂಭ್ರಮಿಸುವಂತಹ ಏನಾದರೂ ಕಂಟೆಂಟ್ ರಿಲೀಸ್ ಮಾಡಿ, ಈ ಬಾರಿ ಹಸಿಬಿಸಿ ದೃಶ್ಯಗಳು ಬೇಡ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ. ಇನ್ನಾದ್ರೂ 'ಟಾಕ್ಸಿಕ್' ಟೀಂ ತಮ್ಮ ಸಿನಿಮಾ ಪ್ರಚಾರದ ತಂತ್ರ ಬದಲಿಸಬೇಕಿದೆ.

ಹೈಪ್ ಕ್ರಿಯೇಟ್ ಮಾಡಲು ಪ್ರೇಕ್ಷಕರನ್ನು ಸೆಳೆಯಲು ಚಿತ್ರದ ಹಸಿಬಿಸಿ ದೃಶ್ಯಗಳನ್ನು ಹೈಲೆಟ್ ಮಾಡಿ ಟೀಸರ್ ಬಿಟ್ಟಿದ್ದು ಆಯ್ತು. ಸಿನಿಮಾ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಾಗಿದೆ. ಹಾಗಾಗಿ ಇನ್ನುಮುಂದೆ ಪ್ರಚಾರದ ಟ್ರ್ಯಾಕ್‌ ಬದಲಿಸಬೇಕಿದೆ. 'ಕೆಜಿಎಫ್' ಸರಣಿ ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಯಶ್ ಇನ್ನು ಹೀಗೆ ಗಿಮಿಕ್ ಮಾಡುವುದು ಕೂರುವುದು ಸರಿಯಲ್ಲ. ಆಗಸ್ಟ್ 26ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ಚಿತ್ರೀಕರಣವಾಗಿದ್ದು ಇನ್ನು ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗ್ತಿದೆ.

Fans demand Yash s Toxic team to change promotion strategy

'ತಬಾಹಿ' ಆಡಿಯೋ ಸಾಂಗ್ ಬಹಳ ಹಿಂದೆ ಬಂದಿತ್ತು. ಶೀಘ್ರದಲ್ಲೇ ಅದರ ವಿಡಿಯೋ ರಿಲೀಸ್ ಆಗುತ್ತೆ ಎನ್ನಲಾಗ್ತಿದೆ. ಸದ್ಯಕ್ಕೆ ಟೀಸರ್ ಪಕ್ಕಕ್ಕಿಟ್ಟು ಸಾಂಗ್ಸ್ ಬಿಡುವುದು ಉತ್ತಮ ಎನ್ನುವಂತಾಗಿದೆ. ಜುಲೈ ಅಂತ್ಯದ ವೇಳೆಗೆ ಟ್ರೈಲರ್ ಹೊರಬರುವ ನಿರೀಕ್ಷೆಯಿದೆ. ಜುಲೈ 14ಕ್ಕೆ 'ರಾಮಾಯಣ' ಟ್ರೈಲರ್ ಬಿಡುಗಡೆ ಆಗುತ್ತದೆ ಎನ್ನಲಾಗ್ತಿದೆ. ಅದರ ನಡುವೆ 'ಟಾಕ್ಸಿಕ್' ಪ್ರಚಾರ ನಡೆಯಬೇಕಿದೆ. ಹಿನ್ನೆಲೆ ಸಂಗೀತದ ಜೊತೆಗೆ ರವಿ ಬಸ್ರೂರು ಒಂದು ಹಾಡಿಗೆ ಟ್ಯೂನ್ ಹಾಕಿದ್ದಾರೆ. ಇನ್ನು ವಿಶಾಲ್ ಮಿಶ್ರಾ 4 ಹಾಡುಗಳು ಹಾಡುಗಳು ಕಟ್ಟಿಕೊಡಲಿದ್ದಾರೆ. ತನಿಷ್ಕ್ ಬಾಗ್ಚಿ, ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಸೇರಿ ಒಂದು ಹಾಡಿಗೆ ಸಾರಥ್ಯ ವಹಿಸಿಕೊಂಡಿದ್ದಾರೆ. ಜೀ ಸಂಸ್ಥೆಗೆ ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿದೆ.

ಬಹುಕೋಟಿ ವೆಚ್ಚದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ತಮ್ಮ ಕ್ಯಾಮರಾ ಕಣ್ಣಲ್ಲಿ ಸಿನಿಮಾ ಸೆರೆಹಿಡಿದಿದ್ದಾರೆ. ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.

Read more about: yash toxic kvn productions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X