ಅಭಿಮಾನಿಗಳ ಡಿಮ್ಯಾಂಡ್: 'ರಾಬರ್ಟ್'ಗೆ ಈ ನಟಿ ಹೀರೋಯಿನ್ ಆಗ್ಬೇಕಂತೆ

Recommended Video

ಅಭಿಮಾನಿಗಳು ಹೇಳುತ್ತಿದ್ದಾರೆ ದರ್ಶನ್ ಗೆ ಇವರೇ ನಾಯಕಿ ಆಗ್ಬೇಕಂತೆ..?

ಯಜಮಾನ ಆಯ್ತು, ಒಡೆಯ ಮುಗಿದಿದೆ. ಕುರುಕ್ಷೇತ್ರ ಬಿಡುಗಡೆಯಾಗಬೇಕಿದೆ. ಈಗೇನಿದ್ರು ರಾಬರ್ಟ್ ಹವಾ. ಹೌದು, ಸ್ಯಾಂಡಲ್ ವುಡ್ ನಲ್ಲಿ ಈಗ ದರ್ಶನ್ ಅವರ ರಾಬರ್ಟ್ ಚಿತ್ರದ್ದೇ ಸದ್ದು. ಅಕ್ಷಯ ತೃತಿಯ ದಿನದ ವಿಶೇಷವಾಗಿ ಮುಹೂರ್ತ ಮಾಡಿಕೊಂಡ ರಾಬರ್ಟ್ ಅದೇ ದಿನ ಚಿತ್ರೀಕರಣ ಕೂಡ ಆರಂಭಿಸಿದೆ.

ಈಗ ರಾಬರ್ಟ್ ಸಿನಿಮಾ ಹೆಚ್ಚು ಸುದ್ದಿ ಮಾಡುತ್ತಿರುವುದು ಹೀರೋಯಿನ್ ವಿಚಾರಕ್ಕೆ. ಸಿನಿಮಾ ಆರಂಭಕ್ಕೆ ಮುನ್ನವೇ ಸ್ಟಾರ್ ನಟಿಯರ ಹೆಸರು ಈ ಚಿತ್ರದಲ್ಲಿ ಕೇಳಿಬರುತ್ತಿದೆ. ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್, ಪ್ರಣಿತಾ ಸುಭಾಷ್, ಐಶ್ವರ್ಯ ರೈ ಹೀಗೆ ಬಹುಭಾಷಾ ನಟಿಯರ ಹೆಸರು ಅಂಟಿಕೊಂಡಿದೆ.

ಆದ್ರೆ, ಚಿತ್ರತಂಡ ಮಾತ್ರ ಸದ್ಯಕ್ಕೆ ನಾಯಕಿ ಫೈನಲ್ ಆಗಿಲ್ಲ ಎಂದು ಹೇಳುತ್ತಿದೆ. ಪಾತ್ರಕ್ಕೆ ಅಗತ್ಯವೆನಿಸುವ ಕೆಲವು ನಟಿಯರನ್ನ ಸಂಪರ್ಕ ಮಾಡಿರುವುದು ನಿಜ, ಆದ್ರೆ ಯಾರೂ ಖಚಿತವಾಗಿಲ್ಲ ಎಂದು ತರುಣ್ ಸುಧೀರ್ ತಿಳಿಸಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಅಭಿಮಾನಿಗಳು ಡಿ ಬಾಸ್ ಜೊತೆ ಇವರೇ ನಾಯಕಿಯಾಗಲಿ ಎಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ, ಅಭಿಮಾನಿಗಳ ಪ್ರಕಾರ ರಾಬರ್ಟ್ ಗೆ ನಾಯಕಿ ಯಾರಾಗಬೇಕು? ಮುಂದೆ ಓದಿ.....

ದಚ್ಚು-ರಚ್ಚು ಬೆಸ್ಟ್ ಜೋಡಿ

ದಚ್ಚು-ರಚ್ಚು ಬೆಸ್ಟ್ ಜೋಡಿ

ಕನ್ನಡ ಫಿಲ್ಮಿಬೀಟ್ ಫೇಸ್ ಬುಕ್ ಖಾತೆಯಲ್ಲಿ ರಾಬರ್ಟ್ ಚಿತ್ರಕ್ಕೆ ನಾಯಕಿ ಯಾರಾಗುಬೇಕು ಎಂಬ ಪ್ರಶ್ನೆ ಕೇಳಲಾಗಿತ್ತು. ಪರಭಾಷೆ ನಟಿ ಬರಲಿ, ಕನ್ನಡ ನಟಿಯೇ ಇರಲಿ, ಹೊಸ ನಟಿಯರಿಗೆ ಅವಕಾಶ ಸಿಗಲಿ ಎಂಬ ಆಯ್ಕೆ ನೀಡಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಓದುಗರು ಕೆಲವರು ಹೆಸರು ಕೂಡ ಸೂಚಿಸಿದ್ದಾರೆ. 'ದಚ್ಚು-ರಚ್ಚು ಬೆಸ್ಟ್ ಪೇರ್' ಎಂದು ಹೇಳಿದ್ದಾರೆ. ಅದೇ ರೀತಿ 'ರಚಿತಾ ರಾಮ್ ಬೇಡ' ಎಂದು ವಿರೋಧಿಸುವವರು ಕೂಡ ಇದ್ದಾರೆ.

ನಟಸಾರ್ವಭೌಮ ನಾಯಕಿ

ನಟಸಾರ್ವಭೌಮ ನಾಯಕಿ

ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ನಟಸಾರ್ವಭೌಮ' ಸಿನಿಮಾದಲ್ಲಿ ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್ ನಟಿಸಿದ್ದರು. ಅಪ್ಪು ಮುಂದಿನ ಸಿನಿಮಾ ಯುವರತ್ನ ಚಿತ್ರಕ್ಕೂ ಈಕೆಯನ್ನ ನಾಯಕಿಯನ್ನಾಗಿಸಿ ಎಂಬ ಕೂಗು ಕೇಳಿಬಂದಿತ್ತು. ಆದ್ರೆ ಅಲ್ಲಿ ಆಗಲಿಲ್ಲ. ಇದೀಗ, ರಾಬರ್ಟ್ ಚಿತ್ರದಲ್ಲಿ ಅನುಪಮಾ ಅವರನ್ನ ನೋಡುವ ಆಸೆ ಕೆಲವು ಡಿ ಬಾಸ್ ಅಭಿಮಾನಿಗಳಲ್ಲಿದೆ.

ಕೀರ್ತಿ ಸುರೇಶ್ ಬರಬೇಕು

ಕೀರ್ತಿ ಸುರೇಶ್ ಬರಬೇಕು

ದರ್ಶನ್ ಅಭಿನಯಿಸಲಿರುವ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿಯಾಗಬಹುದು ಎಂಬ ಮಾತಿದೆ. ಇದರ ಬೆನ್ನಲ್ಲೆ ಈಗ ರಾಬರ್ಟ್ ಚಿತ್ರಕ್ಕೂ ಈಕೆಯನ್ನ ಕರೆತರಬಹುದು ಎಂಬ ಬೇಡಿಕೆ ಅಭಿಮಾನಿಗಳ ಕಡೆಯಿಂದ ಬರ್ತಿದೆ. ಮದಕರಿ ಅಥವಾ ರಾಬರ್ಟ್ ಯಾವುದೇ ಚಿತ್ರವಾದರೂ ಪರವಾಗಿಲ್ಲ, ದರ್ಶನ್ ಜೊತೆ ಕೀರ್ತಿ ಸುರೇಶ್ ಅವರನ್ನ ನೋಡಬೇಕು ಎಂಬುದು ಫ್ಯಾನ್ಸ್ ಆಸೆಯಾಗಿದೆ.

ಅನುಷ್ಕಾ ಶೆಟ್ಟಿ ಮತ್ತೊಂದು ಆಯ್ಕೆ

ಅನುಷ್ಕಾ ಶೆಟ್ಟಿ ಮತ್ತೊಂದು ಆಯ್ಕೆ

ಮೂಲತಃ ಕರ್ನಾಟಕದವರಾದರೂ ಕನ್ನಡ ಸಿನಿಮಾದಲ್ಲಿ ನಟಿಸದ ಅನುಷ್ಕಾ ಶೆಟ್ಟಿ ಅವರನ್ನ ರಾಬರ್ಟ್ ಚಿತ್ರಕ್ಕೆ ನಾಯಕಿ ಮಾಡಿ ಎಂದು ಕೆಲವು ಡಿಮ್ಯಾಂಡ್ ಮಾಡ್ತಿದ್ದಾರೆ. ದರ್ಶನ್ ಅವರಿಗೆ ಅನುಷ್ಕಾ ಶೆಟ್ಟಿ ಉತ್ತಮವಾಗಿ ಜೋಡಿ ಎನಿಸಿಕೊಳ್ಳುತ್ತಾರೆ ಎಂದು ಮನವಿ ಮಾಡ್ತಿದ್ದಾರೆ.

ರಾಧಿಕಾ ಪಂಡಿತ್ ಇದ್ರೆ ಚೆಂದ

ರಾಧಿಕಾ ಪಂಡಿತ್ ಇದ್ರೆ ಚೆಂದ

ಇದುವರೆಗೂ ದರ್ಶನ್ ಜೊತೆ ರಾಧಿಕಾ ಪಂಡಿತ್ ಒಂದು ಸಿನಿಮಾ ಮಾಡಿಲ್ಲ. ಹಾಗಾಗಿ, ರಾಬರ್ಟ್ ಚಿತ್ರದ ಮೂಲಕ ರಾಧಿಕಾ ಮತ್ತು ದರ್ಶನ್ ಜೋಡಿ ನೋಡುವ ಆಸೆ ಅಭಿಮಾನಿಗಳಲ್ಲಿದೆ.

ಶ್ರೀನಿಧಿ ಶೆಟ್ಟಿ ಹೆಸರು ಇದೆ

ಶ್ರೀನಿಧಿ ಶೆಟ್ಟಿ ಹೆಸರು ಇದೆ

ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಈ ಎಲ್ಲ ಅಭಿಪ್ರಾಯಗಳ ಮಧ್ಯೆಯೂ ಕನ್ನಡದ ನಟಿ ಯಾರೇ ಆದರೂ ಪರವಾಗಿಲ್ಲ ಎಂಬ ಉತ್ತರ ಬರುತ್ತಿದೆ. ಪರಭಾಷೆ ನಟಿಯರು ಬೇಡ, ಕನ್ನಡದಲ್ಲೇ ಹೊಸ ಪ್ರತಿಭೆಗಳು ಸಾಕಷ್ಟಿದೆ. ಯಾರಿಗಾದರೂ ಅವಕಾಶ ಕೊಡಿ ಎನ್ನಲಾಗುತ್ತಿದೆ.

More from Filmibeat

English summary
Challenging star darshan Fans have demanding for heroine of robert movie. according to fan, these actress want to become heroin in robert
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X