ವಿಶೇಷ ದಿನದಂದು 'ರಿಚರ್ಡ್ ಆಂಟನಿ' ಅಪ್‌ಡೇಟ್ ಕೊಡ್ತಾರಾ ರಕ್ಷಿತ್ ಶೆಟ್ಟಿ?

ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸಿದ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳು ಬಂದು ಪ್ರೇಕ್ಷಕರ ಮನಗೆದ್ದಿವೆ. ಸದ್ಯ ಸಿನಿಮಾಗಳು ಓಟಿಟಿಯಲ್ಲಿ ವೀಕ್ಷಣೆಗೆ ಸಿಗುತ್ತಿದೆ. ಸೈಡ್‌-B ಶೀಘ್ರದಲ್ಲೇ ಓಟಿಟಿಗೆ ಬರ್ತಿದೆ. ಸದ್ಯ ಅಭಿಮಾನಿಗಳು ಸಿಂಪಲ್ ಸ್ಟಾರ್ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ.

'ಉಳಿದವರು ಕಂಡಂತೆ' ಸೀಕ್ವೆಲ್ 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಆಗಿ 2 ವರ್ಷ ಕಳೆದಿದೆ. ಬಳಿಕ ಯಾವುದೇ ಮಾಹಿತಿ ಸಿಗಲಿಲ್ಲ. ಇದೀಗ ಚಿತ್ರದ ಅಪ್‌ಡೇಟ್ ಸಿಗುವ ಸಮಯ ಹತ್ತಿರ ಬಂದಿದೆ. ಇದೇ ಗುರುವಾರ (ಮಾರ್ಚ್ 28) ದೊಡ್ಡಮಟ್ಟದಲ್ಲಿ ರಕ್ಷಿತ್ ಶೆಟ್ಟಿ ಏನಾದರೂ ಸರ್‌ಪ್ರೈಸ್‌ ಕೊಡ್ತಾರಾ? ಎಂದು ಕುತೂಹಲ ಮೂಡಿದೆ. ಅದಕ್ಕೆ ಕಾರಣ ಕೂಡ ಇದೆ.

Fans eagerly waiting for Rakshit shetty s Richard Antony update

ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಉಳಿದವರು ಕಂಡಂತೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೆ ಬಳಿಕ ಕಲ್ಟ್ ಸಿನಿಮಾ ಲಿಸ್ಟ್ ಸೇರಿಕೊಂಡಿತ್ತು. ಕೆಲವರಿಗಂತೂ ರಿಚ್ಚಿ ಪಾತ್ರ ಬಹಳ ಇಷ್ಟವಾಗಿತ್ತು. ಈ ಚಿತ್ರದ ಸೀಕ್ವೆಲ್ ಬಂದರೆ ಚೆನ್ನಾಗಿರುತ್ತದೆ ಎಂದು ಬಯಸಿದ್ದರು. ಅಭಿಮಾನಿಗಳ ಆಸೆಯಂತೆ ರಕ್ಷಿತ್ ಕೂಡ ರಿಚ್ಚಿ ಕಥೆಯನ್ನು ಮುಂದುವರೆಸುವ, ಹಿಂದಕ್ಕೆ ತೆಗೆದುಕೊಂಡು ಹೋಗುವ ಸಾಹಸಕ್ಕೆ ಕೈ ಹಾಕಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಾಥ್ ಸಿಕ್ಕಿದೆ.

ಸದ್ಯಕ್ಕೆ ರಕ್ಷಿತ್ ಶೆಟ್ಟಿ ಯಾವುದೇ ಹೊಸ ಸಿನಿಮಾ ನಟಿಸಲು ಒಪ್ಪಿಕೊಳ್ಳುತ್ತಿಲ್ಲ. ತಮ್ಮ ಕನಸ್ಸಿನ ಮೂರ್ನಾಲ್ಕು ಚಿತ್ರಗಳನ್ನು ಮುಗಿಸುವ ಹಠಕ್ಕೆ ಬಿದ್ದಿದ್ದಾರೆ. ಆ ಲಿಸ್ಟ್‌ನಲ್ಲಿ 'ರಿಚರ್ಡ್ ಆಂಟನಿ' ಮೊದಲ ಸ್ಥಾನದಲ್ಲಿದೆ. ಬಳಿಕ 'ಪುಣ್ಯಕೋಟಿ' ಸರಣಿ ಸಿನಿಮಾಗಳಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಪ್ರಾಜೆಕ್ಟ್‌ಗಳನ್ನು ಪ್ಲ್ಯಾನ್ ಮಾಡುತ್ತಿದ್ದಾರೆ. 'ರಿಚರ್ಡ್ ಆಂಟನಿ' ಕಥೆ, ಚಿತ್ರಕತೆ ಬರೆಯಲು ಕೆಲ ದಿನ ವಿದೇಶಕ್ಕೂ ಹೋಗಿ ಬಂದಿದ್ದರು.

Fans eagerly waiting for Rakshit shetty s Richard Antony update

2014, ಮಾರ್ಚ್ 28ರಂದು 'ಉಳಿದವರು ಕಂಡಂತೆ' ಸಿನಿಮಾ ತೆರೆಕಂಡಿತ್ತು. ಈ ಗುರುವಾರಕ್ಕೆ 10 ವರ್ಷವಾಗಲಿದೆ. ಅದೇ ದಿನ 'ರಿಚರ್ಡ್ ಆಂಟನಿ' ಅಪ್‌ಡೇಟ್ ಸಿಗುತ್ತದೆ ಎಂದು ಕೆಲವರು ಕಾಯುತ್ತಿದ್ದಾರೆ. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ಸುಳಿವು ಸಿಗುತ್ತಿಲ್ಲ. ಹೊಂಬಾಳೆ ಸಂಸ್ಥೆ 'ಯುವ' ಸಿನಿಮಾ ಬಿಡುಗಡೆ ಕೆಲಸಗಳಲ್ಲಿ ಮುಳುಗಿದೆ. ಗುರುವಾರ ನಿಜಕ್ಕೂ 'ರಿಚರ್ಡ್ ಆಂಟನಿ' ಬಗ್ಗೆ ಏನಾದರೂ ಮಾಹಿತಿ ಸಿಗುತ್ತಾ? ಎನ್ನುವುದು ಅನುಮಾನವಾಗಿದೆ.

ಒಂದು ವಾದದ ಪ್ರಕಾರ ಇನ್ನು 'ರಿಚರ್ಡ್ ಆಂಟನಿ' ಸ್ಕ್ರಿಪ್ಟ್ ಕೆಲಸಗಳು ಕಂಪ್ಲೀಟ್ ಆಗಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಸದ್ಯಕ್ಕೆ ಯಾವುದೇ ಅಪ್‌ಡೇಟ್ ಸಿಗಲ್ಲ, ಪೋಸ್ಟರ್ ಕೂಡ ಬಿಡುಗಡೆ ಆಗುವುದು ಕಷ್ಟಕಷ್ಟ ಎನ್ನುವ ಮಾತುಗಳು ಕೇಳಿಬರ್ತಿದೆ. ದಶಕದ ಹಿಂದೆ ಬಂದ 'ಉಳಿದವರು ಕಂಡಂತೆ' ಚಿತ್ರವನ್ನು ಸಿನಿರಸಿಕರು ಇನ್ನು ಮರೆತಿಲ್ಲ. ಕಮರ್ಷಿಯಲ್ ಆಗಿ ಸಿನಿಮಾ ಗೆಲ್ಲದಿದ್ದರೂ ಚಿತ್ರದ ಪ್ರತಿ ಪಾತ್ರವೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.

ರಕ್ಷಿತ್ ಶೆಟ್ಟಿ ಹುಲಿ ಕುಣಿತ, ಚಿತ್ರದ ಹಾಡುಗಳು, ಶೂಟ್ ಮಾಡ್ಲಾ ಎನ್ನುವ ರಿಚ್ಚಿ, ಮುನ್ನ, ರತ್ನಕ್ಕ, ರಘು, ಶಾರದಾ ಹೀಗೆ ಎಲ್ಲಾ ಪಾತ್ರಗಳು ಅಭಿಮಾನಿಗಳು ಇಷ್ಟವಾಗಿತ್ತು. ಒಟ್ನಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ಮಾತ್ರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 2 ವರ್ಷಗಳ ಹಿಂದೆ ಸಣ್ಣ ಟೀಸರ್ ಬಿಟ್ಟು ರಕ್ಷಿತ್ ಹೈಪ್ ಕ್ರಿಯೇಟ್ ಮಾಡಿದ್ದರು. ಸಿನಿಮಾ ಯಾವಾಗ ಸೆಟ್ಟೇರುತ್ತೋ ಕಾದು ನೋಡಬೇಕಿದೆ.

More from Filmibeat

English summary
Will Rakshit shetty surprise fans with Richard Antony update on special day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X