For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳು ಮಾಡ್ತಿರೋ ಈ ಕೆಲಸಕ್ಕೆ ದರ್ಶನ್ ಕೂಡ ಶರಣು.!

  |
  ದರ್ಶನ್ ಹುಟ್ಟು ಹಬ್ಬಕ್ಕೆ ವಿಶೇಷ ಅಭಿಯಾನ..! | FILMIBEAT KANNADA

  ಡಿ-ಬಾಸ್ ಪರ್ವಕ್ಕೆ ಕೇವಲ 9 ದಿನ ಬಾಕಿ ಇದೆ. ಫೆಬ್ರವರಿ 16ಕ್ಕೆ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬ. ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನದ ಕಾರಣದಿಂದಾಗಿ ಅದ್ಧೂರಿ ಬರ್ತಡೇಗೆ ಬ್ರೇಕ್ ಹಾಕಿ, ಅಭಿಮಾನಿಗಳನ್ನ ನಿರಾಸೆ ಮಾಡದೆ ಸರಳ ಹುಟ್ಟುಹಬ್ಬಕ್ಕೆ ಕರೆ ನೀಡಿದ್ದಾರೆ.

  ಕೋಟ್ಯಾಂತರ ಅಭಿಮಾನಿಗಳಲ್ಲಿ ವಿಶೇಷವಾದ ಮನವಿ ಮಾಡಿರುವ ದಾಸ ''ಕೇಕ್, ಹಾರ, ಪಟಾಕಿ ಅಂತ ದುಡ್ಡು ಖರ್ಚು ಮಾಡಬೇಡಿ. ಅದೇ ಹಣವನ್ನ ಅನಾಥ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಸಹಾಯ ಮಾಡಿ'' ಎಂದು ವಿನಂತಿಸಿಕೊಂಡಿದ್ದರು.

  ಹುಟ್ಟುಹಬ್ಬದ ಆಚರಣೆ ಬಗ್ಗೆ ಅಭಿಮಾನಿಗಳಲ್ಲಿ ದರ್ಶನ್ ಮನವಿ

  ಡಿ-ಬಾಸ್ ಮಾಡಿದ ಈ ಒಂದು ಮನವಿಗೆ ಇಡೀ ಭಕ್ತಗಣವೇ ಗೌರವಿಸಿದ್ದು, ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ಕೇಕ್, ಹಾರ, ಪಟಾಕಿಗೆ ಬ್ರೇಕ್ ಹಾಕಿರುವ ಫ್ಯಾನ್ಸ್ ಒಂದೊಳ್ಳೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಮುಂದೆ ಓದಿ.....

  ದರ್ಶನ್ ಮನೆಗೆ ಅಕ್ಕಿ, ಬೇಳೆ, ಸಕ್ಕರೆ

  ದರ್ಶನ್ ಮನೆಗೆ ಅಕ್ಕಿ, ಬೇಳೆ, ಸಕ್ಕರೆ

  ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಕೇಕ್, ಹಾರ, ಪಟಾಕಿ ಬದಲು ಅಕ್ಕಿ, ಬೇಳೆ, ಸಕ್ಕರೆ ತರಲು ನಿರ್ಧರಿಸಿದ್ದು, ಅದಕ್ಕಾಗಿ ಅಭಿಯಾನ ಕೂಡ ಶುರು ಮಾಡಿದ್ದಾರೆ. ಸ್ವತಃ ದರ್ಶನ್ ಅವರೇ ಅನಾಥ ಮಕ್ಕಳಿಗೆ ಸಹಾಯ ಮಾಡಿ ಎಂದು ಕೇಳಿಕೊಂಡ ಹಿನ್ನೆಲೆ ಅಭಿಮಾನಿಗಳು ಇಂತಹ ನಿರ್ಧಾರ ಮಾಡಿದ್ದಾರೆ.

  ದರ್ಶನ್ ಜೀವನ ಚರಿತ್ರೆ ತೆರೆದಿಟ್ಟ ಸಂಗೀತ ನಿರ್ದೇಶಕ ಹರಿಕೃಷ್ಣ

  ಅಕ್ಕಿ ಬೇಳೆ ಖರೀದಿ ವಿಡಿಯೋ ವೈರಲ್

  ದರ್ಶನ್ ಅಭಿಮಾನಿಯೊಬ್ಬರು ತಿಂಗಳ ಸಂಬಳ ಬಂದ ಕೂಡಲೇ ಹತ್ತಿರದ ಮಾಲ್ ಗೆ ಹೋಗಿ, ಅಕ್ಕಿ, ಬೇಳೆ, ಸಕ್ಕರೆ ಖರೀದಿ ಮಾಡಿದ್ದಾರೆ. ಇದನ್ನ ದರ್ಶನ್ ಅವರ ಹುಟ್ಟುಹಬ್ಬಕ್ಕೆ ನಾನು ಉಡುಗೊರೆಯಾಗಿ ನೀಡುತ್ತೇನೆ. ಎಲ್ಲರೂ ಈ ಕೆಲಸಕ್ಕೆ ಕೈ ಹಾಕಿ ಎಂದು ಕೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಅಭಿಮಾನಿಯ ಕೆಲಸ ನೋಡಿದ ಮತ್ತಷ್ಟು ಅಭಿಮಾನಿಗಳು ತಾವು ಕೂಡ ಅಕ್ಕಿ, ಬೇಳೆ, ಸಕ್ಕರೆ ನೀಡಲು ಮುಂದಾಗಿದ್ದಾರೆ.

  ಕಾರನ್ನು ಫಾಲೋ ಮಾಡಿಕೊಂಡು ಹೋದ ಅಭಿಮಾನಿಗೆ 'ನಮಸ್ಕಾರ' ಎಂದ ದರ್ಶನ್.!

  ಸಿದ್ಧಗಂಗಾ ಮಠಕ್ಕೆ ನೀಡಲು ನಿರ್ಧಾರ

  ಇನ್ನು ಸಿದ್ಧಗಂಗಾ ಮಠದಲ್ಲಿ ನಡೆಯುವ ದಾಸೋಹಕ್ಕೆ ಪ್ರತಿ ತಿಂಗಳು 2 ಕ್ವಿಂಟೋಲ್ ಅಕ್ಕಿ, ಬೇಳೆ, ಸಕ್ಕರೆಯನ್ನ ನೀಡಲು ಚಾಲೆಂಜಿಂಗ್ ಸ್ಟಾರ್ ಮುಂದಾಗಿದ್ದಾರಂತೆ. ಈ ವಿಷ್ಯ ತಿಳಿದ ಅಭಿಮಾನಿಗಳು ಹುಟ್ಟುಹಬ್ಬದ ದಿನ ಅಕ್ಕಿ, ಬೇಳೆ, ಸಕ್ಕರೆ ನೀಡಲಿದ್ದು, ಅದನ್ನ ಅನಾಥ ಮಕ್ಕಳಿಗೆ ಹಾಗೂ ಸಿದ್ಧಗಂಗಾ ಮಠಕ್ಕೆ ತಲುಪಿಸಿ ಎಂದು ದರ್ಶನ್ ಅವರ ಬಳಿ ಮನವಿ ಮಾಡಿದ್ದಾರೆ.

  ಸಿದ್ಧಗಂಗಾ ಮಠದ ಮಹತ್ವದ ಕೆಲಸಕ್ಕೆ ಜೊತೆಯಾದ 'ಯಜಮಾನ'

  ದಾಸನ ಹಾದಿಯಲ್ಲಿ ಫ್ಯಾನ್ಸ್ ಹೆಜ್ಜೆ

  ದಾಸನ ಹಾದಿಯಲ್ಲಿ ಫ್ಯಾನ್ಸ್ ಹೆಜ್ಜೆ

  ದರ್ಶನ್ ಅವರ ಮಾತಿಗೆ ಅವರ ಅಭಿಮಾನಿಗಳು ಹೆಚ್ಚಿನ ಗೌರವ ಕೊಡ್ತಾರೆ ಎನ್ನುವುದಕ್ಕೆ ಇದು ಕೂಡ ಉದಾಹರಣೆ. ದರ್ಶನ್ ಅವರಂತೆ ಅವರ ಫ್ಯಾನ್ಸ್ ಕೂಡ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡು ಇನ್ನೊಬ್ಬರಿಗೆ ಸಹಾಯ ಮಾಡುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಹಾಗ್ನೋಡಿದ್ರೆ, ದರ್ಶನ್ ಪಾಲಿಗೆ ಈ ಬರ್ತಡೇ ತುಂಬಾ ಸ್ಪೆಷಲ್ ಆಗಲಿದೆ.

  ದರ್ಶನ್ 'ಪಾಶುಪತಾಸ್ತ್ರ'ದ ಹಿಂದೆ ರಾಜಕೀಯ.!

  English summary
  Darshan fans have planning to give rice, sugar for his boss birthday and they all decided to help siddaganga mutt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X