For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರ್ಜರಿ ಉಡುಗೊರೆ

  |

  ಜೋಗಿ ಪ್ರೇಮ್ ಅಕ್ಟೋಬರ್ 22 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ಈ ವರ್ಷ ಅಭಿಮಾನಿಗಳ ಕೈಗೆ ಪ್ರೇಮ್ ಸಿಗುತ್ತಿಲ್ಲ. ಕಾರಣ, ಏಕ್ ಲವ್ ಯಾ ಸಿನಿಮಾ ಚಿತ್ರೀಕರಣ ವಿಶೇಷವಾಗಿ ಊಟಿಯಲ್ಲಿದ್ದಾರೆ.

  ಈ ಕುರಿತು ಪ್ರೇಮ್ ಸಹ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ''ಎಲ್ಲಾ ನನ್ನ ಪ್ರೀತಿಯ ಸ್ನೇಹಿತರಲ್ಲೊಂದು ಮನವಿ, ನಮ್ಮ ಏಕ್'ಲವ್'ಯಾ ಶೂಟಿಂಗ್ ಇರುವ ಕಾರಣ ಈ ಬಾರಿ ನನ್ನ ಹುಟ್ಟುಹಬ್ಬದ ದಿನ ಊಟಿಯಲ್ಲಿರ್ತೀವಿ, ಎಲ್ಲಿದ್ದರೂ ಹೇಗಿದ್ದರೂ ಸದಾ ನಿಮ್ಮೊಟ್ಟಿಗೆ ನಾನು. ನಿಮ್ಮ ಅಭಿಮಾನವೇ ನನ್ನ ಶ್ರೀರಕ್ಷೆ. 22 ರಂದು ರಾತ್ರಿ 12ಗೆ ಶೂಟಿಂಗ್ ಸ್ಪಾಟ್ ಇಂದ ಲೈವ್ ಬರ್ತೀನಿ'' ಎಂದು ಟ್ವೀಟ್ ಮಾಡಿದ್ದಾರೆ.

  ರಾಣಾ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ ನಿರ್ದೇಶಕ ಪ್ರೇಮ್ರಾಣಾ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ ನಿರ್ದೇಶಕ ಪ್ರೇಮ್

  ಪ್ರೇಮ್ ಬರ್ತಡೇಗೂ ಒಂದು ದಿನ ಮುಂಚೆ ಅಭಿಮಾನಿಗಳು ಭರ್ಜರಿ ಹಾಡೊಂದು ಉಡುಗೊರೆಯಾಗಿ ನೀಡಿದ್ದಾರೆ. ಮಂಡ್ಯ ಮುತ್ತು ಅಭಿಮಾನಿ ಬಳಗದವರು ಪ್ರೇಮ್ ಅವರಿಗೆ ಟ್ರಿಬ್ಯೂಟ್ ಸಾಂಗ್ ತಯಾರಿಸಿ ಬಿಡುಗಡೆ ಮಾಡಿದ್ದಾರೆ.

  ''ನನ್ನ ಹುಟ್ಟುಹಬ್ಬಕ್ಕೆ ಮಂಡ್ಯ ಮುತ್ತು ಅಭಿಮಾನಿ ಬಳಗದವರು ಒಂದು ಟ್ರಿಬ್ಯೂಟ್ ಸಾಂಗ್ ಮಾಡಿದೀರ, ಸಿನಿಮಾ ಮತ್ತು ಅಮ್ಮ ಎರಡೂ ನನ್ನ ಜೀವ ಅನ್ನೋದು ಈ ಒಂದು ಹಾಡಲ್ಲಿ ತೋರ್ಸ್ಕೊಟ್ಟಿದೀರ, ತಂದೆ ತಾಯಿಯ ನಂತರ ಅವರಷ್ಟೇ ಹೆಚ್ಚು ಪ್ರೀತಿ ತೋರೋ ನೀವುಗಳು ಅಭಿಮಾನದ ಅನ್ನದಾತರು. ನಿಮ್ಮನೆ ಮಗ'' ಎಂದು ಆ ಹಾಡನ್ನು ಸಹ ಪ್ರೇಮ್ ಹಂಚಿಕೊಂಡಿದ್ದಾರೆ.

  Dhruva Sarja First Reaction For Chiru Baby | ಅಣ್ಣನ ಮಗು ನೋಡಿ ಧ್ರುವನಿಗೆ ಮೊದಲು ಅನ್ನಿಸಿದ್ದೇನು ಗೊತ್ತಾ

  ಸದ್ಯ ರಕ್ಷಿತಾ ಅವರ ಸಹೋದರ ರಾಣಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಏಕ್ ಲವ್ ಯಾ ಸಿನಿಮಾ ನಿರ್ದೇಶಿಸುತ್ತಿರುವ ಪ್ರೇಮ್ ಈ ಚಿತ್ರದ ಚಿತ್ರೀಕರಣವನ್ನು ಊಟಿಯಲ್ಲಿ ಮಾಡುತ್ತಿದ್ದಾರೆ.

  English summary
  Jogi Prem's celebrated his birthday on october 22nd. so, Prem Fans gifted a birthday song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X