'ಎಕ್ಕ ಸಕ್ಕ' ವಿಡಿಯೋ ಸಾಂಗ್ ಝಲಕ್ ನೋಡಿ ಕೈ ಕೈ ಹಿಸುಕಿಕೊಂಡ ಫ್ಯಾನ್ಸ್!

ಈ ವರ್ಷದ ಸೂಪರ್ ಹಿಟ್ ಸಾಂಗ್ ಯಾವ್ದು ಅಂತ ಕೇಳಿದ್ರೆ, ಚಿಕ್ಕ ಮಗು ಕೂಡ 'ರಾರಾ ರಕ್ಕಮ್ಮ' ಅಂತ ಹಾಡಿ, ಕುಣಿದು ಹೇಳುತ್ತದೆ. ಅಜನೀಶ್‌ ಲೋಕನಾಥ್ ಟ್ಯೂನು, ಅನೂಪ್ ಭಂಡಾರಿ ಲಿರಿಕ್ಸು, ಸುನಿಧಿ ಚೌಹಾಣ್ ಮತ್ತು ನಕಾಶ್‌ ಅಜೀಜ್ ವಾಯ್ಸು ಮಾಡಿರೋ ಮ್ಯಾಜಿಕ್ಕೇ ಅಂಥಾದ್ದು. ಕೇಕ್ ಮೇಲೆ ಚೆರ್ರಿ ಅನ್ನುವಂತೆ ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಕಿಚ್ಚ ಸುದೀಪ್ ಡ್ಯಾನ್ಸ್‌ ಡಬಲ್ ಕಿಕ್ ಕೊಡ್ತಿದೆ. ಇಷ್ಟು ದಿನ ಬರೀ ಹಾಡು ಕೇಳಿ, ಲಿರಿಕಲ್ ವೀಡಿಯೋ ನೋಡಿ ಎಂಜಾಯ್ ಮಾಡಿದವರು ಸಿಲ್ವರ್‌ ಸ್ಕ್ರೀನ್‌ ಮೇಲೆ ಕಂಪ್ಲೀಟ್ ಸಾಂಗ್ ನೋಡೊಕು ಮುನ್ನ ಸಣ್ಣ ಝಲಕ್ ನೋಡಿ ಕಳೆದು ಹೋಗಿದ್ದಾರೆ.

Recommended Video

Salman Khan and Kiccha Sudeep dance | 'ರಾ ರಾ ರಕ್ಕಮ್ಮ' ಹಾಡಿಗೆ ಸಲ್ಮಾನ್ ಖಾನ್ ಡ್ಯಾನ್ಸ್ *Press Meet

'ವಿಕ್ರಾಂತ್ ರೋಣ' ಆಲ್ಬಮ್‌ನಲ್ಲಿ ಎಲ್ಲಾ ಸಾಂಗ್‌ಗಳದ್ದು ಒಂದು ತೂಕವಾದರೆ ಈ ಸಾಂಗ್‌ನದ್ದು ಮತ್ತೊಂದು ತೂಕ. 'ರಾರಾ ರಕ್ಕಮ್ಮ' ಸಾಂಗ್ ಕೇಳ್ತಾ ಕೇಳ್ತಾ ಎಂತಹವರೂ ಮೈ ಕೈ ಕುಣಿಸೋಕೆ ಶುರು ಮಾಡುತ್ತಾರೆ. ಗಡಂಗ್ ರಕ್ಕಮ್ಮ ಕ್ರೇಜೇ ಅಂಥಾದ್ದು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ರೀಲ್ಸ್‌ಗಳು, ಕವರ್‌ ವರ್ಷನ್ ಸಾಂಗ್‌ಗಳು ವೈರಲ್ ಆಗಿದೆ. ಡ್ಯಾನ್ಸ್ ಬರೋರು ಬರದೇ ಇರೋರು ಸಾಂಗ್ ಕೇಳಿ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಹುಕ್ ಸ್ಟೆಪ್ ಅಂತೂ ನೆಕ್ಸ್‌ ಲೆವೆಲ್ ಬಿಡಿ. ಟ್ರೈಲರ್ ಲಾಂಚ್‌ ದಿನ ಸುದೀಪ್‌ ಜೊತೆಗೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ರಿಷಬ್ ಶೆಟ್ಟಿ ಕೂಡ 'ರಾರಾ ರಕ್ಕಮ್ಮ' ಹುಕ್ ಸ್ಟೆಪ್ ಮಾಡಿ ರಂಗೇರಿಸಿದ್ದರು.

 'ವಿಕ್ರಾಂತ್ ರೋಣ' ಪ್ರಚಾರದ ಕೊನೆ ಅಸ್ತ್ರ!

'ವಿಕ್ರಾಂತ್ ರೋಣ' ಪ್ರಚಾರದ ಕೊನೆ ಅಸ್ತ್ರ!

ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್‌ಗೆ ಇನ್ನು 24 ಗಂಟೆಗಳು ಮಾತ್ರ ಬಾಕಿಯಿದೆ. ನಾಳೆ ಸಂಜೆಯಿಂದಲೇ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ಆರಂಭವಾಗುತ್ತದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಚಿತ್ರತಂಡ ಮೇಕಿಂಗ್ ಸ್ಟಿಲ್ಸ್, ಪೋಸ್ಟರ್‌ಗಳು, ಸಣ್ಣ ಸಣ್ಣ ಗ್ಲಿಂಪ್ಸ್ ಅಂತ ಸಣ್ಣ ಝಲಕ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡುತ್ತಾ ಬಂದಿದೆ. ಇನ್ನು ಲಿರಿಕಲ್ ವಿಡಿಯೋ ಸಾಂಗ್ಸ್, ಟ್ರೈಲರ್ ಕೂಡ ಹೊರಬಂದು ಸೂಪರ್‌ ಹಿಟ್ ಆಗಿದೆ. ಪ್ರಮೋಷನ್‌ನ ಕೊನೆ ಅಸ್ತ್ರವಾಗಿ 'ರಾರಾ ರಕ್ಕಮ್ಮ' ಸಾಂಗ್ ವಿಡಿಯೋ ಸಾಂಗ್ ಟೀಸರ್ ರಿಲೀಸ್‌ ಆಗಿ ಧೂಳೆಬ್ಬಿಸಿದೆ.

 ಬಾದ್‌ಶಾ- ಜಾಕ್ವೆಲಿನ್ ಡ್ಯಾನ್ಸ್‌ ಸಿಂಪ್ಲಿ ಸೂಪರ್

ಬಾದ್‌ಶಾ- ಜಾಕ್ವೆಲಿನ್ ಡ್ಯಾನ್ಸ್‌ ಸಿಂಪ್ಲಿ ಸೂಪರ್

ಹೌದು, 'ರಾರಾ ರಕ್ಕಮ್ಮ' ಸಾಂಗ್‌ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಜಾಕ್ವೆಲಿನ್ ಮೈಮಾಟ, ಡ್ಯಾನ್ಸ್ ನೋಡಿದವರು ಕಳೆದು ಹೋಗಿದ್ದಾರೆ. ಇನ್ನು 'ಬಾರೇ ನಾಟಿ ಕೋಳಿ' ಅಂತ ಹಾಡ್ತಾ ಸುದೀಪ್ ಅಖಾಡಕ್ಕೆ ಎಂಟ್ರಿ ಕೊಟ್ಟ ಮೇಲೆ ಸಾಂಗ್‌ ಮತ್ತೊಂದು ಲೆವೆಲ್‌ಗೆ ಹೋಗಿ ಬಿಡುತ್ತದೆ. ಚಿಂದಿ ಸ್ಟೆಪ್ಸ್‌ ಮೂಲಕ ಇವರಿಬ್ಬರಿಗೆ ಒಂದಷ್ಟು ಡ್ಯಾನ್ಸರ್ ಸಾಥ್ ಕೊಟ್ಟಿದ್ದು, ಕಂಪ್ಲೀಟ್ ಸಾಂಗ್ ಸಿಂಪ್ಲಿ ಸೂಪರ್ ಅನ್ನುವಂತಿದೆ.

 ಟೀಸರ್ ನೋಡಿ ಫ್ಯಾನ್ಸ್ ಕೈ ಕೈ ಹಿಸುಕಿಕೊಂಡಿದ್ಯಾಕೆ?

ಟೀಸರ್ ನೋಡಿ ಫ್ಯಾನ್ಸ್ ಕೈ ಕೈ ಹಿಸುಕಿಕೊಂಡಿದ್ಯಾಕೆ?

'ರಾರಾ ರಕ್ಕಮ್ಮ' ಸಾಂಗ್‌ ಟೀಸರ್‌ ನೋಡ್ತಾ ನೋಡ್ತಾ ಅಯ್ಯೋ ಅಯ್ಯೋ ಮುಗಿದೇಹೋಯ್ತಾ ಅಂತ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಸಣ್ಣ ಝಲಕ್ ನೋಡಿದವರು ಕಂಪ್ಲೀಟ್ ಸಾಂಗ್ ಯಾವಾಗ್ಯಾವಾಗ ನೋಡ್ತಿವೋ ಅಂತ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಗುರುವಾರ ಬೆಳಗ್ಗೆ ಯಾವಾಗ ಆಗುತ್ತೋ ಯಾವಾಗ ಥಿಯೇಟರ್‌ಗೆ ಹೋಗ್ತಿವೋ ಅದ್ಯಾವಾಗ ಕಂಪ್ಲೀಟ್ ವೀಡಿಯೋ ಸಾಂಗ್ ನೋಡಿ ನಾವು ಥಿಯೇಟರ್‌ಗಳಲ್ಲಿ ಕುಣಿತಿವೋ ಅಂತ ಕಾಯ್ತಿದ್ದಾರೆ.

 6 ಕೋಟಿ ರೂ. ವೆಚ್ಚದ 'ರಾರಾ ರಕ್ಕಮ್ಮ' ಸಾಂಗ್

6 ಕೋಟಿ ರೂ. ವೆಚ್ಚದ 'ರಾರಾ ರಕ್ಕಮ್ಮ' ಸಾಂಗ್

ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ 'ವಿಕ್ರಾಂತ್ ರೋಣ' ಸಿನಿಮಾ ನಿರ್ಮಾಣವಾಗಿದ್ದು, ಪ್ರತಿ ಫ್ರೇಮ್‌ ಕೂಡ ಅದ್ಧೂರಿತನವನ್ನು ಮೈವೆತ್ತುಕೊಂಡಿದೆ. ಇನ್ನು ಹಾಡುಗಳನ್ನು ಕೂಡ ಬಹಳ ಅದ್ಧೂರಿಯಾಗಿ ಸೆರೆ ಹಿಡಿದಿದ್ದು, ಅದ್ದೂರಿ ಸೆಟ್‌ನಲ್ಲಿ 'ರಾರಾ ರಕ್ಕಮ್ಮ' ಹಾಡನ್ನು ಚಿತ್ರೀಕರಿಸಿದ್ದಾರೆ. ಈ ಹಾಡಿಗಾಗಿಯೇ 6 ಕೋಟಿ ರೂ. ವ್ಯಯಿಸಿರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು.

 ಗಡಂಗ್ ರಕ್ಕಮ್ಮ ಆಗಿ ಜಾಕ್ವೆಲಿನ್ ನಟನೆ

ಗಡಂಗ್ ರಕ್ಕಮ್ಮ ಆಗಿ ಜಾಕ್ವೆಲಿನ್ ನಟನೆ

'ವಿಕ್ರಾಂತ್ ರೋಣ' ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ 'ರಾರಾ ರಕ್ಕಮ್ಮ' ಹಾಡಿದಿರುವುದರ ಜೊತೆಗೆ ಪುಟ್ಟ ಪಾತ್ರವನ್ನು ಮಾಡಿದ್ದಾರೆ. ಆಕೆಯ ಪಾತ್ರದ ಹೆಸರು ಗಡಂಗ್ ರಕ್ಕಮ್ಮ. ಕನ್ನಡ ಕಲಿತು ಡೈಲಾಗ್ ಕೂಡ ಹೇಳಿದ್ದಾರೆ. ಒಟ್ಟಾರೆ 'ರಾರಾ ರಕ್ಕಮ್ಮ' ಹಾಡು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗೋದು ಗ್ಯಾರೆಂಟಿ.

 ವಿಶ್ವದಾದ್ಯಂತ 3200 ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗೆ

ವಿಶ್ವದಾದ್ಯಂತ 3200 ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗೆ

'ವಿಕ್ರಾಂತ್ ರೋಣ' ಸಿನಿಮಾ 2D ಹಾಗೂ 3D ಮಾದರಿಯಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ 3200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿದೆ. 27 ದೇಶಗಳಲ್ಲಿ ನಾಳೆ ಪ್ರೀಮಿಯರ್ ಶೋಗಳು ಶುರುವಾಗಲಿದೆ. ನೇಪಾಳ ಹಾಗೂ ಪಾಕಿಸ್ತಾನದಲ್ಲಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. 3D ಮಾದರಿಯಲ್ಲಿ ಶೇಕಡಾ 60%ರಷ್ಟು ಕಡೆ ಸಿನಿಮಾ ಪ್ರದರ್ಶನ ಶುರುವಾಗಲಿದೆ.

More from Filmibeat

English summary
Fans Go Crazy After Watching Ra Ra Rakkamma Kannada Video Song Teaser. know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X