ಮುಗಿಲು ಮುಟ್ಟಿದ ಕಿಚ್ಚನ ಕ್ರೇಜ್: ಅಭಿಮಾನಿಗಳ ಜೊತೆ ಸುದೀಪ್ ಸೆಲ್ಫಿ!

ನಟ ಕಿಚ್ಚ ಸುದೀಪ್ ಕನ್ನಡ ಮತ್ತು ಹಿಂದಿ ಭಾಷೆಯ ಬಗ್ಗೆ ಮಾತನಾಡಿ ಭಾರಿ ಸುದ್ದಿ ಆಗಿದ್ದರು. ಈಗ ಮತ್ತೆ ಕಿಚ್ಚ ಹೆಸರಿನ ನಾದ ಮೊಳಗಿದೆ. ಹೌದು ಕಾರ್ಯಕ್ರಮ ಒಂದಕ್ಕೆ ನಟ ಕಿಚ್ಚ ಸುದೀಪ್ ಅತಿಥಿಯಾಗಿ ಭೇಟಿ ಕೊಟ್ಟ ಸಂದರ್ಭದಲ್ಲಿ ಕಿಚ್ಚ ಹೆಸರು ಕೂಗಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಷ್ಟಕ್ಕೂ ಕಿಚ್ಚ ಭಾಗವಹಿಸಿದ್ದು, 'ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್' ಸಮಾರೋಪ ಕಾರ್ಯಕ್ರಮದಲ್ಲಿ.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಚ್ಚ ಸುದೀಪ್ ಸ್ಟೇಡಿಯಮ್‌ಗೆ ಎಂಟ್ರಿ ಆಗುತ್ತಲೇ ಕಿಚ್ಚ ಕಿಚ್ಚ ಅಭಿಮಾನಿಗಳು ಕೂಗಲು ಪ್ರಾರಂಭಿಸಿದರು. ಸುದೀಪ್ ಕೂಡ ಅವರತ್ತ ಕೈ ಬೀಸಿ ನಂತರ ಸ್ಟೇಜ್ ಹತ್ತಿದರು. ಇನ್ನು ಕಿಚ್ಚನ ಜೊತೆಗೆ ಸಾಕಷ್ಟು ಮಂದಿ ಸೆಲ್ಫಿಗಾಗಿ ಮುಗಿ ಬಿದ್ದರು. ಕಿಚ್ಚ ಎಲ್ಲರಿಗೂ ಸೆಲ್ಫಿ ಕೊಟ್ಟು ಅಭಿಮಾನಿಗಳ ಸಂತಸಕ್ಕೆ ಕಾರಣ ಆದರು.

ಇನ್ನು ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕ್ರೀಡಾ ಸಚಿವ ಅನುರಾಗ್ ಠಾಕೂರ್, ಸಚಿವ ನಿಶಿತ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿ.ಎಂ ಬಸವರಾಜ ಬೊಮ್ಮಾಯಿ, ಕ್ರೀಡಾ ಸಚಿವ ನಾರಾಯಣ ಗೌಡ, ಸಚಿವ ಡಾ. ಅಶ್ವತ್ ನಾರಾಯಣ, ಸಂಸದ ಪಿ.ಸಿ ಮೋಹನ್ ಸೇರಿದಂತೆ ಹಲವರು ಭಾಗಿ ಆಗಿದ್ದರು.

Fans Go Crezy About Kichcha Sudeep In Khelo India University Games Program

ಇನ್ನು ಕಿಚ್ಚ ಸುದೀಪ್ ಬಗ್ಗೆ ಹೇಳಬೇಕು ಎಂದರೆ, ಇತ್ತೀಚೆಗೆ ಕನ್ನಡದ ಪರವಾಗಿ ಮಾತನಾಡಿ ದೊಡ್ಡ ಸಂಚಲನ ಮೂಡಿಸಿದ್ದರು. ಕಿಚ್ಚ ಮತ್ತು ಹಿಂದಿ ನಟ ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ನಡೆದಿತ್ತು. ಇನ್ನು ಕಿಚ್ಚ ಸುದೀಪ್ ಅಭಿನಯದ ಮುಂದಿನ ಚಿತ್ರ 'ವಿಕ್ರಾಂತ್ ರೋಣ'. ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದು ರಿಲೀಸ್‌ಗೆ ರೆಡಿಯಾಗಿದೆ.

More from Filmibeat

English summary
Fans Go Crezy About Kichcha Sudeep In Khelo India University Games Program, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X