'ರಾಯಲ್' ಸಿನಿಮಾ ಶೋ ವೇಳೆ ದರ್ಶನ್ ಧರಿಸಿದ್ದ ಟೀ-ಶರ್ಟ್, ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!
ನಟ ದರ್ಶನ್ ಮತ್ತೆ ಸಿನಿಮಾಗಳ ಕಡೆ ಮುಖ ಮಾಡಿದಂತೆ ಕಾಣುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ದರ್ಶನ್ ಹೊರ ಬಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸಹೋದರ ದಿನಕರ್ ನಿರ್ದೇಶನದ 'ರಾಯಲ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಇತ್ತೀಚೆಗೆ ಸಿನಿಮಾ ನೋಡಿ ದರ್ಶನ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ತಾಯಿ ಮೀನಾ ತೂಗುದೀಪ ಹಾಗೂ ಪತ್ನಿ ವಿಜಯಲಕ್ಷ್ಮಿ ಸಮೇತ ದರ್ಶನ್ 'ರಾಯಲ್' ಸಿನಿಮಾ ವೀಕ್ಷಿಸಿದರು. ಮಲ್ಲೇಶ್ವರದ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಚಿತ್ರದ ಸ್ಪೆಷಲ್ ಶೋ ಆಯೋಜಿಸಲಾಗಿತ್ತು. ಈ ವೇಳೆ ಚಿತ್ರದ ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ, ನಾಯಕ ವಿರಾಟ್, ನಾಯಕಿ ಸಂಜನಾ ಆನಂದ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು. ಸ್ಟೈಲಿಶ್ ಲುಕ್‌ನಲ್ಲಿ ಸಿನಿಮಾ ನೋಡಲು ದರ್ಶನ್ ಆಗಮಿಸಿದ್ದರು.

ದರ್ಶನ್ ಕೆಂಪು ಬಣ್ಣದ ಟೀ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕನ್ನಡಕ ಧರಿಸಿದ್ದರು. ಇನ್ನು ಕೈಯಲ್ಲಿ ದುಬಾರಿ ವಾಚ್ ಕೂಡ ಇತ್ತು. ಸದ್ಯ ಅಭಿಮಾನಿಗಳು ದರ್ಶನ್ ತೊಟ್ಟಿದ್ದ ಟೀಶರ್ಟ್ ಹಾಗೂ ಕೈಯಲ್ಲಿದ್ದ ವಾಚ್ ದರ ಎಷ್ಟು ಎಂದು ಊಹಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅದರ ಬೆಲೆ ಎಷ್ಟು ಎಂದು ಹುಡುಕಾಡುತ್ತಿದ್ದಾರೆ. ಈ ಹಿಂದೆ ಕೂಡ ದುಬಾರಿ ಟೀ-ಶರ್ಟ್, ಪ್ಯಾಂಟ್ ಧರಿಸಿ ದರ್ಶನ್ ಕಾಣಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿತ್ತು. ಈ ವೇಳೆ ದರ್ಶನ್ ಧರಿಸಿದ್ದ ಟೀ-ಶರ್ಟ್, ಪ್ಯಾಂಟ್, ಸನ್ ಗ್ಲಾಸ್ ದರದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಹತ್ತು ಸಾವಿರ ರೂ. ಟೀ ಶರ್ಟ್, 30 ಸಾವಿರದ ಜೀನ್ಸ್ ಪ್ಯಾಂಟ್, ಲಕ್ಷ ರೂಪಾಯಿ ಕೂಲಿಂಗ್ ಗ್ಲಾಸ್ ತೊಟ್ಟಿದ್ದಾರೆ ಅಂತೆಲ್ಲಾ ಅಂತೆಕಂತೆ ಮಾತುಗಳು ಕೇಳಿಬಂದಿತ್ತು.

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ದರ್ಶನ್. ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ನಡೆಸುತ್ತಾರೆ. ದುಬಾರಿ ಕಾರುಗಳು ಅವರ ಬಳಿಯಿದೆ. ಇನ್ನು ಆತ್ಮೀಯ ಸ್ನೇಹಿತರು ಕೂಡ ಅವರಿಗೆ ಬೆಲೆ ಬಾಳುವ ಉಡುಗೊರೆಗಳನ್ನು ಕೊಡುತ್ತಿರುತ್ತಾರೆ. ಹಾಗಾಗಿ ಭಾರೀ ವೆಚ್ಚದ ಬಟ್ಟೆ, ಆಕ್ಸಸರೀಸ್ ಧರಿಸುತ್ತಾರೆ. ಅಂದಹಾಗೆ 'ರಾಯಲ್' ಸಿನಿಮಾ ನೋಡಲು ಬಂದಿದ್ದ ವೇಳೆ ದರ್ಶನ್ 30 ಸಾವಿರ ರೂ. ಬೆಲೆ ಟೀ-ಶರ್ಟ್, 34 ಲಕ್ಷ ರೂ. ವಾಚ್ ಧರಿಸಿದ್ದರು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ನಟ ದರ್ಶನ್ Gucci, Adidas ಲೋಗೊ ಇರುವ ಕೆಂಪು ಟೀ-ಶರ್ಟ್ ಧರಿಸಿದ್ದರು. ಇನ್ನು ಕೈಯಲ್ಲಿ ಇದ್ದಿದ್ದು Hublot Big Bang Unico ಬ್ರ್ಯಾಂಡ್ ವಾಚ್ ಎನ್ನಲಾಗ್ತಿದೆ. ಈ ಬ್ರ್ಯಾಂಡ್ ಟೀ-ಶರ್ಟ್ ಹಾಗೂ ವಾಚ್ ಬೆಲೆ ನಿಜಕ್ಕೂ ಜಾಸ್ತಿನೇ ಇದೆ. ಸದ್ಯ ಅಭಿಮಾನಿಗಳು ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಈ ದರ ಕೇಳಿ ಹುಬ್ಬೇರಿಸುತ್ತಿದ್ದಾರೆ.
ಅಂದಹಾಗೆ 'ರಾಯಲ್' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಿದೆ. ರೊಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ. ಬಹಳ ದಿನಗಳ ಬಹಳಿಕ ದಿನಕರ್ ಆಕ್ಷನ್ ಕಟ್ ಹೇಳಿರುವ ಸಿನಿಮಾ. ಈಗಾಗಲೇ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ. ಇನ್ನು ಶೀಘ್ರದಲ್ಲೇ 'ಡೆವಿಲ್' ಚಿತ್ರೀಕರಣದಲ್ಲಿ ದರ್ಶನ್ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ಮಿಲನಾ ಪ್ರಕಾಶ್ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











