»   » ಫ್ಯಾನ್ಸ್ ಒತ್ತಡಕ್ಕೆ ಮಣಿದು ಮತ್ತೆ ಬಣ್ಣ ಹಚ್ಚಿದ ಸುದೀಪ

ಫ್ಯಾನ್ಸ್ ಒತ್ತಡಕ್ಕೆ ಮಣಿದು ಮತ್ತೆ ಬಣ್ಣ ಹಚ್ಚಿದ ಸುದೀಪ

Posted By:
Subscribe to Filmibeat Kannada

ಅಂತೂ ಇಂತೂ ಅಭಿನವ ಚಕ್ರರ್ವರ್ತಿ ಮತ್ತೆ ಗಾಂಧಿನಗರಕ್ಕೆ ಕಾಲಿಡೋದು ಪಕ್ಕಾ ಆಗಿಬಿಟ್ಟಿದೆ. ಹಾಗಂತ ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಮೊದಲು ಅಂತೆ-ಕಂತೆಗಳು ಭಾರಿ ಪ್ರಮಾಣದಲ್ಲಿ ಗಾಂಧಿನಗರದಲ್ಲಿ ಸುತ್ತುತ್ತಿದ್ದು, ಅದಕ್ಕೆಲ್ಲಾ ಬ್ರೇಕ್ ಹಾಕಿದ ಕಿಚ್ಚ ಸುದೀಪ್ ಅವರು ಅಭಿಮಾನಿಗಳ 'ವಿ ವಾಂಟ್ ಸುದೀಪ್' ಅನ್ನೋ ಬೇಡಿಕೆ ಹಾಗೂ ಪ್ರೀತಿ-ಅಭಿಮಾನಕ್ಕೆ ಸೋತು ಟ್ವಿಟ್ಟರ್ ನಲ್ಲಿ ಅಭಿನಂದನೆ ಸೂಚಿಸಿದ್ದಾರೆ.[ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಬೇಕಂತೆ? ಏಕಂತೆ?]

Fans Happy ! Kichcha Sudeep to stay in Kannada Film Industry

'ನನ್ನ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದ, ನಾನು ನಿಮ್ಮ ಅಭಿಮಾನಕ್ಕೆ ಮನಸೋತಿದ್ದೇನೆ, ಆದ್ರಿಂದ ಮತ್ತೆ ಚಿತ್ರರಂಗಕ್ಕೆ ವಾಪಸಾಗುತ್ತಿದ್ದೇನೆ. ಇನ್ನುಮುಂದೆ ಎಂದೆಂದಿಗೂ ನಾನು ನಿಮ್ಮ ಜೊತೆ ಇರುತ್ತೇನೆ. ಆರೋಗ್ಯ ಸುಧಾರಿಸಿದೆ, ಅದಕ್ಕಿಂತಲೂ ಹೆಚ್ಚಾಗಿ ದೃಢನಿರ್ಧಾರ ಹಿಂದೆಂದಿಗಿಂತಲೂ ಅಚಲವಾಗಿದೆ ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

ಸದ್ಯದಲ್ಲಿ ಕೆ.ಎಸ್.ರವಿಕುಮಾರ್ ಅವರ ಚಿತ್ರಕ್ಕೆ ಸುದೀಪ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಅದಕ್ಕಾಗಿ ಈಗಿಂದಲೇ ಭರ್ಜರಿ ತಯಾರಿ ಕೂಡ ನಡೆಸುತ್ತಿದ್ದಾರಂತೆ. ಇನ್ನೇನು ಆಗಸ್ಟ್ 10ರಿಂದ ರವಿಕುಮಾರ್ ಸುದೀಪ್ ಕಾಂಬಿನೇಷನ್ ನ ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತಿದೆ.[ಯಾರ್ರಿ ಹೇಳಿದ್ದು ಸುದೀಪ್ ಕನ್ನಡ ಚಿತ್ರರಂಗ ತೊರೀತಾರಂತ?]

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ಅವರು ಸುಮಾರು ಮೂರು ತಿಂಗಳ ನಂತರ ಬಣ್ಣ ಹಚ್ಚುತ್ತಿರುವುದಕ್ಕೆ ಸುದೀಪ್ ಅವರು ಸಖತ್ ಎಕ್ಸೈಟ್ ಆಗ್ತಾ ಇದ್ದಾರಂತೆ. ಒಂಥರಾ ಹೊಸತನ ಅವರ ಅನುಭವಕ್ಕೆ ಬರುತ್ತಿದೆ ಅಂತ ಸುದೀಪ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.


ಇದೀಗ ಕಿಚ್ಚನ ಮನದಾಳದ ಮಾತುಗಳನ್ನು ಮನಸಾರೆ ಆಲಿಸಿದ ಅಭಿಮಾನಿಗಳು ಫುಲ್ ಖುಷ್ ಆಗಿ ತಮ್ಮ ಪ್ರೀತಿಯ ಸ್ಟಾರ್ ಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ.[ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈಯಾಗಿ ಕಿಚ್ಚ ಸುದೀಪ್!]


ಒಟ್ನಲ್ಲಿ ಎಲ್ಲಾ ಗಾಸಿಪ್ ಗಳಿಗೂ ಬ್ರೇಕ್ ಹಾಕಿದ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್, ಅವರು ಗಾಂಧಿನಗರದಲ್ಲಿ ಮತ್ತೆ ತಮ್ಮ ಹವಾ ಕ್ರೀಯೇಟ್ ಮಾಡಲಿದ್ದಾರೆ. ಅದೇನೇ ಇರಲಿ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಪರಭಾಷಾ ಚಿತ್ರರಂಗದಲ್ಲೂ ಸುದ್ದಿ ಮಾಡುತ್ತಿರುವ ಸುದೀಪ್ ಅವರು ಇನ್ನೂ ಎತ್ತರಕ್ಕೇರಲಿ ಅಂತ ನಾವೂ ಹಾರೈಸೋಣ ಏನಂತೀರಾ?.

English summary
Sudeep has changed his decision to quit KFI and decided to stay in Kannada Film Industry and continue shooting. Earlier Sudeep's fans started a campaign #WeWantKichchaSudeep on microblogging site Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada