ಉಗ್ರಂ 2 ಸಿನಿಮಾ ಕಡೆ ಶ್ರೀ ಮುರಳಿ ಅಭಿಮಾನಿಗಳ ಒಲವು
Recommended Video

ಕಳೆದ ವರ್ಷಾಂತ್ಯದ ಸೂಪರ್ ಹಿಟ್ ಸಿನಿಮಾ ಮಫ್ತಿ. ಒಂದು ವರ್ಷ ಕಾದಿದ್ದ ಶ್ರೀ ಮುರಳಿ ಅಭಿಮಾನಿಗಳಿಗೆ ಹಾಗೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾದಂತ ಸಿನಿಮಾ.
ಹ್ಯಾಟ್ರಿಕ್ ಹಿಟ್ ಸಿನಿಮಾಗಳನ್ನ ನೀಡಿದ ನಂತರ ಶ್ರೀ ಮುರಳಿ ಮುಂದೆ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಆದರೆ ಶ್ರೀ ಮುರಳಿ ಮಾತ್ರ ಇಂತಹ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಅವರ ಅಭಿಮಾನಿಗಳಿಗೊಂದು ಅವಕಾಶ ಕೊಟ್ಟಿದ್ದಾರೆ.
ಶ್ರೀ ಮುರಳಿಯವರು ಮುಂದಿನ ಚಿತ್ರ ಯಾವ ರೀತಿಯಲ್ಲಿರಬೇಕು ಎನ್ನುವುದನ್ನ ಸೂಚಿಸಿ ಎಂದು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಸ್ಟೇಟಸ್ ಗೆ ಸಾವಿರಾರು ಕಮೆಂಟ್ ಗಳು ಬಂದಿದೆ. ಹಾಗಾದ್ರೆ ಅಭಿಮಾನಿಗಳು ಶ್ರೀ ಮುರಳಿ ಅವರನ್ನ ಯಾವ ರೀತಿಯ ಸಿನಿಮಾದಲ್ಲಿ ನೋಡಲು ಇಷ್ಟ ಪಡುತ್ತಾರೆ? ಬಂದಿರುವ ಹೆಚ್ಚಿನ ಕಮೆಂಟ್ಸ್ ಯಾವುದು? ಶ್ರೀ ಮುರಳಿ ಅವರ ಮುಂದಿನ ಸಿನಿಮಾ ಯಾವುದು. ಸಂಪೂರ್ಣ ಮಾಹಿತಿಯಾಗಿ ಮುಂದೆ ಓದಿ

ಶ್ರೀ ಮುರಳಿ ಚಿತ್ರ ಆಯ್ಕೆ ಮಾಡಿದ ಪ್ರೇಕ್ಷಕ
ನಟ ಶ್ರೀ ಮುರಳಿ ಯಾವ ರೀತಿಯ ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವುದನ್ನ ಪ್ರೇಕ್ಷಕರು ಆಯ್ಕೆ ಮಾಡಿದ್ದಾರೆ. ಈ ಅವಕಾಶವನ್ನ ಖುದ್ದು ಶ್ರೀ ಮುರಳಿಯವರೇ ಅವರ ಅಭಿಮಾನಿಗಳಿಗೆ ನೀಡಿದ್ದಾರೆ. ಸಾಕಷ್ಟು ಅಭಿಮಾನಿಗಳು ಮುರಳಿ ಪ್ರಶ್ನೆಗೆ ಉತ್ತರಿಸಿದ್ದಾರೆ.

ಉಗ್ರಂ ನಂತಹ ಚಿತ್ರ ನೋಡಲು ಅಭಿಮಾನಿಗಳ ಆಸೆ
ಮುರಳಿ ಅವರ ಸ್ಟೇಟಸ್ ಗೆ ಸಾವಿರಾರು ಕಮೆಂಟ್ಸ್ ಗಳು ಬಂದಿದ್ದು ಹೆಚ್ಚಿನ ಅಭಿಮಾನಿಗಳು ಉಗ್ರಂ 2 ಸಿನಿಮಾವನ್ನ ಮಾಡುವಂತೆ ಮನವಿ ಮಾಡಿದ್ದಾರೆ. ಉಗ್ರಂ ಸಿನಿಮದಲ್ಲಿನ ಪಾತ್ರವನ್ನ ಮೆಚ್ಚಿಕೊಂಡಿರೋ ಸಿನಿಪ್ರಿಯರಿಗೆ ಅದೇ ರೀತಿಯ ಸಿನಿಮಾ ಬೇಕಂತೆ.

ಮಫ್ತಿ ಚಿತ್ರಕ್ಕೂ ಭಾರಿ ಡಿಮ್ಯಾಂಡ್
ಉಗ್ರಂ ಸಿನಿಮಾದ ಜೊತೆಯಲ್ಲಿ ಮಫ್ತಿ 2 ಸಿನಿಮಾದಲ್ಲಿ ಅಭಿನಯಿಸಿ. ಅದೇ ಸಿನಿಮಾ ತಂಡದ ಜೊತೆಯಲ್ಲಿ ಮತ್ತೆ ಕೆಲಸ ಮಾಡಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಸಿನಿಮಾ ಬಗ್ಗೆ ಸುಳಿವು ನೀಡದ ಶ್ರೀ ಮುರಳಿ
ಸ್ಟೇಟಸ್ ಗಳಿಗೆ ಕಮೆಂಟ್ ಮಾಡಿರುವ ಅನೇಕರಿಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಮುರಳಿ ಮುಂದಿನ ಚಿತ್ರದ ಸ್ಕ್ರಿಪ್ಟ್ ವರ್ಕ್ ಶುರುವಾಗಿ ಎಂದು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ ಎನ್ನುವ ಸುಳಿವನ್ನು ನೀಡಿದ್ದಾರೆ.


Click it and Unblock the Notifications











