For Quick Alerts
  ALLOW NOTIFICATIONS  
  For Daily Alerts

  'ಬಾಸ್' ಯಾರು? ದರ್ಶನ್ ಫ್ಯಾನ್ಸ್ ಗಳಿಂದ ಹೊಸ ಅಭಿಯಾನ

  By Pavithra
  |
  ಸ್ಯಾಂಡಲ್ವುಡ್ ಬಾಸ್ ಯಾರು ಅನ್ನೋದೇ ದೊಡ್ಡ ಕನ್ಫ್ಯೂಷನ್ | FIlmibeat Kannada

  ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟಾರ್ ವಾರ್ ಗಳು ತಣ್ಣಗಾಗಿದೆ. ಆದರೆ ಅಭಿಮಾನಿಗಳ ಮಧ್ಯೆ ಇರುವ ಕೋಲ್ಡ್ ವಾರ್ ಗಳು ಮಾತ್ರ ಹೆಚ್ಚಾಗುತ್ತಲೇ ಇದೆ . ಕಳೆದ ಒಂದು ವಾರಗಳಿಂದ ಸದ್ಯ ಗಾಂಧಿನಗರ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿರುವ ಒಂದೇ ಒಂದು ವಿಚಾರ ಬಾಸ್.

  ಸ್ಯಾಂಡಲ್ ವುಡ್ ನ ಬಾಸ್ ಯಾರು? ಬಾಸ್ ಎಂಬ ಬಿರುದು ಯಾವ ನಾಯಕ ನಟನಿಗೆ ಸೇರಿದ್ದು? ಎನ್ನುವ ಬಗ್ಗೆ ಸೋಷಿಯಲ್ ನೆಟ್ವರ್ಕ್ ನಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದೆ .ಇಷ್ಟು ದಿನ ಚರ್ಚೆಗಳಾಗುತ್ತಿದ್ದು ಬಾಸ್ ಎಂಬ ಶೀರ್ಷಿಕೆಯ ವಿಚಾರವಾಗಿ ಈಗ ದರ್ಶನ್ ಅಭಿಮಾನಿಗಳು ಸೂರಿ ದುನಿಯಾ ಸೂರಿ ಅವರ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ.

  ದರ್ಶನ್ ಕುರುಕ್ಷೇತ್ರ ಚಿತ್ರದ ನಿರ್ದೇಶಕರೆಷ್ಟು ? ದರ್ಶನ್ ಕುರುಕ್ಷೇತ್ರ ಚಿತ್ರದ ನಿರ್ದೇಶಕರೆಷ್ಟು ?

  ಎಲ್ಲರಿಗೂ ತಿಳಿದಿರುವಂತೆ ಶಿವರಾಜ್ ಕುಮಾರ್ ದರ್ಶನ್ ಹಾಗೂ ಯಶ್ ಸಿನಿಮಾಗಳಲ್ಲಿ ಬಾಸ್ ಎಂಬ ಪದವನ್ನು ಬಳಸಲಾಗುತ್ತಿದೆ. ಅದಷ್ಟೇ ಅಲ್ಲದೆ ಅವರು ಅಭಿನಯದ ಸಿನಿಮಾದ ಹಾಡುಗಳಲ್ಲಿಯೂ ಆಯಾ ನಾಯಕರನ್ನು ಬಾಸ್ ಎಂಬಂತೆ ಬಿಂಬಿತವಾಗುವ ಪದಗಳು ಇರುತ್ತವೆ. ಆದರೆ ಅಭಿಮಾನಿಗಳು ಮಾತ್ರ ಬಾಸ್ ಎಂದರೆ ನಮ್ಮ ಹೀರೋ ಅಂತ ಜಗಳ ಆರಂಭಿಸಿದ್ದಾರೆ. ಹಾಗಾದರೆ ಅಭಿಮಾನಿಗಳು ದುನಿಯಾ ಸೂರಿ ಅವರಲ್ಲಿ ಮಾಡಿರುವ ವಿನಂತಿ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

  ಬಾಸ್ ಬಿರುದಿಗಾಗಿ ಕಿತ್ತಾಟ

  ಬಾಸ್ ಬಿರುದಿಗಾಗಿ ಕಿತ್ತಾಟ

  ಕನ್ನಡ ಸಿನಿಮಾರಂಗದ ಬಾಸ್ ಎಂದರೆ ದರ್ಶನ್ ಮಾತ್ರ ಎಂದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ವಾದ ಮಾಡಲು ಆರಂಭ ಮಾಡಿದ್ದಾರೆ. ಇತ್ತ ಶಿವರಾಜ್ ಕುಮಾರ್ ಅಭಿಮಾನಿಗಳು Boss Of Sandalwood ಎಂದರೆ ಶಿವಣ್ಣ ಮಾತ್ರ ಎನ್ನುತ್ತಿದ್ದಾರೆ. ಇನ್ನು ಯಶ್ ಅಭಿಮಾನಿಗಳು ಬಾಸ್ ಎಂದರೆ ರಾಕಿಂಗ್ ಸ್ಟಾರ್ ಎನ್ನುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ದರ್ಶನ್ ಅಭಿಮಾನಿಗಳು ದುನಿಯಾ ಸೂರಿ ಅವರಿಗೆ ಮನವಿ ಪತ್ರ ಬರೆದಿದ್ದಾರೆ.

  ದರ್ಶನ್ ಅಭಿಮಾನಿಗಳಿಂದ ಮನವಿ

  ದರ್ಶನ್ ಅಭಿಮಾನಿಗಳಿಂದ ಮನವಿ

  ದರ್ಶನ್ ಅಭಿಮಾನಿಗಳು ಬರೆದ ಪತ್ರ ಇಂತಿದೆ. ಎಲ್ಲ ಮಾಧ್ಯಮಗಳ ಪ್ರಕಾರ ನಿಮ್ಮ ಚಿತ್ರ ಶತದಿನೋತ್ಸವ ಆಚರಿಸಿದ ಹಿನ್ನೆಯಲ್ಲಿ ಒಬ್ಬ ನಟರಿಗೆ ನೀವು ಹಾಗೂ ನಿಮ್ಮ ಚಿತ್ರ ತಂಡ Boss Of Sandalwood ಎಂದು ಬಿರುದು ನೀಡಿ ಗೌರವಿಸಲಾಗಿದೆ ಎಂದು ಪ್ರಸಾರವಾಗುತ್ತಿದೆ. ಈ ಬಿರುದನ್ನು ಈ ಕೂಡಲೇ ಹಿಂಪಡೆಯಬೇಕಾಗಿ ವಿನಂತಿ.

   ರಕ್ತದ ಕಣ ಕಣದಲ್ಲೂ

  ರಕ್ತದ ಕಣ ಕಣದಲ್ಲೂ "ಬಾಸ್

  ಕಳೆದ 8 ವರ್ಷದಿಂದ ದರ್ಶನ್ ಅಣ್ಣ ನನ್ನು ಎಲ್ಲ ಅಭಿಮಾನಿಗಳು ಹಾಗೂ ಕರುನಾಡ ಜನತೆ "ಬಾಸ್" ಎಂದು ಕರೆಯುತ್ತಿದ್ದಾರೆ. ಸಾವಿರಾರು ಅಭಿಮಾನಿಗಳ ಕೈ ಮೇಲೆ, ಮೈ ಮೇಲೆ ,ದೇಹದ ಮೇಲೆ "ಬಾಸ್" ಎಂಬ ಟ್ಯಾಟು ಕಾಣಬಹುದು ಅಭಿಮಾನಿಗಳ ರಕ್ತದ ಕಣ ಕಣದಲ್ಲೂ "ಬಾಸ್ "ಎಂದೇ ದರ್ಶನ್ ಅಣ್ಣ ಪ್ರಸಿದ್ದಿ ಹೊಂದಿದ್ದಾರೆ.

  ಗೂಗಲ್ ನಲ್ಲಿಯೂ ದರ್ಶನ್ ಬಾಸ್

  ಗೂಗಲ್ ನಲ್ಲಿಯೂ ದರ್ಶನ್ ಬಾಸ್

  ಸ್ಯಾಂಡಲ್ ವುಡ್ ಇಂದ ಬಾಲಿವುಡ್ ವರೆಗೂ ಎಲ್ಲ ತಾರೆಯರು ,ಗೂಗಲ್ , ಮಾಧ್ಯಮ, ಅಭಿಮಾನಿಗಳು ಯಾರ ಬಳಿ ಆದರೂ ಬಾಸ್ ಎಂದರೆ "ಡಿ ಬಾಸ್"ಎಂಬ ಉತ್ತರ ಸರ್ವೇ ಸಾಮಾನ್ಯ ನೀವು ಅಭಿಮಾನಿಗಳ ಭಾವನೆಗಳ ಜೊತೆ ಆಟ ನಿಲ್ಲಿಸಿ ಬಿರುದನ್ನು ಹಿಂಪಡೆಯಬೇಕು ,ಕಳೆದ 4 ದಿನಗಳಿಂದ ಅಭಿಮಾನಿಗಳಲ್ಲಿ ಗೊಂದಲ ,ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ " ಫ್ಯಾನ್ಸ್ ವಾರ್ "ಗೆ ನೀವೇ ನೇರ ಹೊಣೆ ಆಗುತ್ತಿರಾ.

  ಅಭಿಮಾನಿಗಳ ಮನಸ್ಸು ನೋಯಿಸಬೇಡಿ

  ಅಭಿಮಾನಿಗಳ ಮನಸ್ಸು ನೋಯಿಸಬೇಡಿ

  ಅಭಿಮಾನಿಗಳ ಭಾವನೆ ಜೊತೆ ಆಟ ಆಡಿದರೆ, ಮುಂದೆ ಆಗುವ ಪರಿಣಾಮಕ್ಕೂ ನೀವೇ ನೇರ ಹೊಣೆ. ಈ ಕೂಡಲೇ ಬಿರುದನ್ನು ಹಿಂಪಡೆಯಬೇಕು ಹಾಗೂ ಫ್ಯಾನ್ಸ್ ವಾರ್ ಗೆ ಕಾರಣವಾಗಿದಕ್ಕೆ ಎಲ್ಲ ಅಭಿಮಾನಿಗಳ ಬಳಿ ಕ್ಷಮೆ ಕೊರಬೇಕಾಗಿ ವಿನಂತಿ. ಇಂತಿ- ಒಬ್ಬ ಸ್ವಾಭಿಮಾನಿ ತೂಗುದೀಪ ಅಭಿಮಾನಿ

  English summary
  Kannada actor Darshan fans have start a new campaign. In this regard fans have written a request letter to the director Duniya Suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X