For Quick Alerts
  ALLOW NOTIFICATIONS  
  For Daily Alerts

  ರಜನಿಯ '2.0' ಟೀಸರ್ ನೋಡಿ ಶಿಳ್ಳೆ ಹೊಡೆಯುತ್ತಿದ್ದಾರೆ ಟ್ವೀಟಿಗರು.!

  |

  ಅಂತೂ ವೀಕ್ಷಕರ ಕನವರಿಕೆ ಈಡೇರಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ '2.0' ಟೀಸರ್ ರಿಲೀಸ್ ಆಗಿದೆ. ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಆದ '2.0' ಟೀಸರ್ ಇಡೀ ವಿಶ್ವವನ್ನೇ ಬೆರಗುಗೊಳಿಸುತ್ತಿದೆ.

  ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿ ಇಲ್ಲ ಎನ್ನುವ ಹಾಗೆ '2.0' ಚಿತ್ರ ರೆಡಿ ಆಗಿದೆ. ಅದಕ್ಕೆ ಇದೀಗಷ್ಟೇ ಬಿಡುಗಡೆ ಆಗಿರುವ ಟೀಸರ್ ಸಾಕ್ಷಿ. ಸಿನಿಮಾದ ಗ್ರಾಫಿಕ್ಸ್ ಗಾಗಿಯೇ 543 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಟೀಸರ್ ನಲ್ಲಿ ಮೈನವಿರೇಳಿಸುವ ಗ್ರಾಫಿಕ್ಸ್ ದೃಶ್ಯಗಳಿವೆ.

  'ಎಂದಿರನ್' ಚಿತ್ರದಲ್ಲಿ ಕಮಾಲ್ ಮಾಡಿದ್ದ ಚಿಟ್ಟಿ ಪಾತ್ರ ಈ ಸಿನಿಮಾದಲ್ಲಿಯೂ ಮುಂದುವರೆದಿದೆ. ಇಲ್ಲಿ ಚಿಟ್ಟಿ ಸೂಪರ್ ಹೀರೋ ಆಗಿದ್ದಾನೆ. ಚಿಟ್ಟಿ ವಿರುದ್ಧ ವಿಲನ್ ಅಕ್ಷಯ್ ಕುಮಾರ್ ತೊಡೆ ತಟ್ಟಿ ನಿಂತಿದ್ದಾರೆ. ಇಬ್ಬರ ನಡುವಿನ ತಂತ್ರಜ್ಞಾನದ ಯುದ್ಧವೇ ಈ ಚಿತ್ರದ ಹೂರಣ.

  ಇಂದು ರಿಲೀಸ್ ಆಗಿರುವ '2.0' ಚಿತ್ರದ ಟೀಸರ್ ಎಲ್ಲರಿಗೂ ಇಷ್ಟ ಆಗಿದ್ಯಾ.? '2.0' ಟೀಸರ್ ನೋಡಿದ ಅಭಿಮಾನಿಗಳ ಪ್ರತಿಕ್ರಿಯೆ ಏನು.? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ....

  ಕ್ರಿಸ್ಟಲ್ ಕ್ಲಿಯರ್

  ''ಸೂಪರ್ ಸ್ಟಾರ್ ಅನ್ನೋದು ಕೇವಲ ಪದವಾದರೆ, 'ತಲೈವಾ' ಅನ್ನೋದು ಭಾವನೆ. ಶಂಕರ್ ನಿರ್ದೇಶನದ '2.0' ಚಿತ್ರ ಕ್ರಿಸ್ಟಲ್ ಕ್ಲಿಯರ್ ಆಗಿದೆ. ಬ್ಯಾಕ್ ಗ್ರೌಂಡ್ ಸ್ಕೋರ್ ಅಂತೂ ಬೇರೆ ಲೆವೆಲ್ ನಲ್ಲಿದೆ'' ಎಂದು ಟ್ವೀಟ್ ಮಾಡುತ್ತಿದ್ದಾರೆ ಅಭಿಮಾನಿಗಳು.

  ಟೀಸರ್ ಮೂಲಕವೇ ವಿಶ್ವವನ್ನ ಬೆರಗುಗೊಳಿಸುತ್ತಿದೆ '2.0'ಟೀಸರ್ ಮೂಲಕವೇ ವಿಶ್ವವನ್ನ ಬೆರಗುಗೊಳಿಸುತ್ತಿದೆ '2.0'

  ನಿರೀಕ್ಷೆಗೂ ಮೀರಿದೆ.!

  ''2.0' ಟೀಸರ್ ನಿರೀಕ್ಷೆಗೂ ಮೀರಿದೆ. ಶಂಕರ್ ನಿಜಕ್ಕೂ ಗ್ರೇಟ್. '2.0' ಚಿತ್ರ ಭಾರತೀಯ ಚಿತ್ರರಂಗವನ್ನು ಇನ್ನೊಂದು ಹಂತ ಮೇಲಕ್ಕೆ ಕೊಂಡೊಯ್ಯಲಿದೆ'' ಅಂತಿದ್ದಾರೆ ಫ್ಯಾನ್ಸ್.

  ರಜನಿಯ '2.0' ಚಿತ್ರದ ಗ್ರಾಫಿಕ್ಸ್ ಗೆ ಖರ್ಚಾಗಿದ್ದು ಬರೋಬ್ಬರಿ 543 ಕೋಟಿ.!ರಜನಿಯ '2.0' ಚಿತ್ರದ ಗ್ರಾಫಿಕ್ಸ್ ಗೆ ಖರ್ಚಾಗಿದ್ದು ಬರೋಬ್ಬರಿ 543 ಕೋಟಿ.!

  ಹಾಲಿವುಡ್ ಸ್ಟೈಲ್ ಮೇಕಿಂಗ್

  ''2.0' ಚಿತ್ರ ಅಂತಾರಾಷ್ಟ್ರೀಯ ಹಾಗೂ ಹಾಲಿವುಡ್ ಸ್ಟೈಲ್ ಮೇಕಿಂಗ್ ಹೊಂದಿದೆ. ಶಂಕರ್ ಈ ಚಿತ್ರವನ್ನ ನಿರ್ದೇಶನ ಮಾಡಿರುವುದಕ್ಕೆ ನಮಗೆ ಹೆಮ್ಮೆ ಇದೆ. '2.0' ಟೀಸರ್ ಚಿತ್ರದ ಕುರಿತ ನಿರೀಕ್ಷೆ ಡಬಲ್ ಮಾಡಿದೆ'' - ಧನಂಜಯನ್

  ಮಹಾಭಾರತ ನೆನಪಾಯಿತು

  ''ಈ ದೃಶ್ಯ ನೋಡಿದ ಕೂಡಲೆ ನನಗೆ ಮಹಾಭಾರತ ನೆನಪಾಯಿತು. ರಣರಂಗದ ಮಧ್ಯೆ ಚಕ್ರ''... ಸಿನಿ ಪ್ರಿಯರು '2.0' ಚಿತ್ರದ ಟೀಸರ್ ನ ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದಾರೆ ಅನ್ನೋದಕ್ಕೆ ಈ ಟ್ವೀಟ್ ಸಾಕ್ಷಿ

  ಕಾದಿದ್ದಕ್ಕೂ ಸಾರ್ಥಕ

  2.0 ಟೀಸರ್ ಗಾಗಿ ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕ ಆಯ್ತು ಅಂತಿದ್ದಾರೆ ರಜನಿಕಾಂತ್ ಅಭಿಮಾನಿಗಳು.

  ಎಲ್ಲಾ ರೆಕಾರ್ಡ್ ಗಳನ್ನು ಉಡೀಸ್ ಮಾಡಲಿದೆ

  ''ನವೆಂಬರ್ 29 ರಂದು ಎಲ್ಲಾ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನು ಚಿಟ್ಟಿ ಬ್ರೇಕ್ ಮಾಡಲಿದ್ದಾನೆ'' ಎಂಬ ಟ್ವೀಟ್ ಗಳೇ ಹೆಚ್ಚಾಗಿವೆ.

  English summary
  Rajinikanth starrer 2 point o teaser released. Check out the twitter reactions on 2 point O teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X