ಭೇಟಿ ಮಾಡಿದ ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ವಿಶೇಷವಾಗಿ ಏನ್ನನ್ನೋ ಕೊಟ್ಟು ಕಳುಹಿಸಿದ ದರ್ಶನ್!
ಕನ್ನಡ ಚಿತ್ರರಂಗದಲ್ಲಿ ಮಾಸ್ ಹೀರೋ ಅಂದ್ರೆ 'ಸಾರಥಿ' ದರ್ಶನ್. ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಅಂದ್ರೆ ದರ್ಶನ್ ತೂಗುದೀಪ. ಯಾಕಂದ್ರೆ ಚಾಲೆಂಜಿಂಗ್ ಸ್ಟಾರ್ ಕನ್ನಡಿಗರ ನೆಚ್ಚಿನ ಹೀರೋ. ಕೋಟ್ಯಂತರ ಅಭಿಮಾನಿಗಳಿಗೆ ದಚ್ಚು ಅಂದ್ರೆ ಪಂಚ ಪ್ರಾಣ.
ಅಭಿಮಾನಿಗಳು ಅಂದ್ರೆ ದರ್ಶನ್ಗೂ ಸಿಕ್ಕಾಪಟ್ಟೆ ಪ್ರೀತಿ. ಮೊದಲ ಸಿನಿಮಾದಲ್ಲಿ ದರ್ಶನ್ ದಾಸ ಪಾತ್ರದ ಮೂಲಕ ಮೋಡಿ ಮಾಡಿರೋ ದರ್ಶನ್ಗೆ, ಫ್ಯಾನ್ಸ್ ದಾಸ ದರ್ಶನ್ ಅಂತ ಬಿರುದು ಕೊಟ್ರು.ದರ್ಶನ್ ಚಿಕ್ಕ ವಯಸ್ಸಿನಲ್ಲಿ ಹಾಲು ಮಾರುವ ಹುಡುಗನಾಗಿ, ನಂತ್ರದ ದಿನಗಳಲ್ಲಿ ಚಿತ್ರರಂಗದಲ್ಲಿ ಲೈಟ್ ಬಾಯ್ ಆಗಿ ಕಷ್ಟಪಟ್ಟು ಕೆಲಸ ಮಾಡಿದ್ರು.
ಇದೀಗ ಕಷ್ಟದ ಪ್ರತಿಫಲ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಈಗ ಚಾಲೆಂಜಿಂಗ್ ಸ್ಟಾರ್, ಡಿಬಾಸ್, ಬಾಕ್ಸ್ ಆಫೀಸ್ ಸುಲ್ತಾನ್ ಹೀಗೆ ನಾನಾ ಹೆಸ್ರುಗಳಿಂದ ಕರೆಸಿಕೊಳ್ಳುವ ದರ್ಶನ್, ಬಿಗ್ ಸ್ಟಾರ್ ಆಗಿ ಮೋಡಿ ಮಾಡ್ತಿದ್ದಾರೆ. ಆದರೇ ದರ್ಶನ್ ಯಾವತ್ತು ತಾನು ಬೆಳೆದು ಬಂದ ದಾರಿ, ಬೆಳೆಸಿದ ಗುರುಗಳು, ಎತ್ತರಕ್ಕೆ ಕರೆದುಕೊಂಡು ಬಂದ ಅಭಿಮಾನಿಗಳನ್ನು ಮರೆತಿಲ್ಲ. ಸದಾ ಕಷ್ಟಕ್ಕೆ ಮಿಡಿಯುವ, ನೋಡಲು ಬಂದ ಅಭಿಮಾನಿಗಳನ್ನು ಬೇಸರ ಮಾಡದೇ ಕಳುಹಿಸುವ ದರ್ಶನ್ ಇದೀಗ ಮತ್ತೊಂದು ವಿಚಾರಕ್ಕೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದೇನೂ ಅಂತ ಮುಂದೆ ಓದಿ...

ಶಬರಿ ಮಲೆ ಭಕ್ತರನ್ನು ಹರಸಿ ಕಳುಹಿಸಿದ ಚಾಲೆಂಜಿಂಗ್ ಸ್ಟಾರ್
ದರ್ಶನ್ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಹೊಸದಾಗಿ ವಾಹನ ಕೊಂಡರು ದರ್ಶನ್ ಬಳಿ ಬಂದು ಗಾಡಿ ಮೇಲೆ ಸಿಗ್ನೇಚರ್ ಹಾಕಿಸಿಕೊಳ್ಳುತ್ತಾರೆ. ಮದುವೆ ಆದ ದಂಪತಿಗಳು ದರ್ಶನ್ ಬಳಿ ಆಶಿರ್ವಾದ ಪಡೆಯಲು ಬರುತ್ತಾರೆ. ಮಕ್ಕಳ ನಾಮಕರಣ, ಮದುವೆ, ಹೀಗೆ ನಾನಾ ಶುಭ ಸಂದರ್ಭದಲ್ಲಿ ದಾಸ ದರ್ಶನ್ ಆಶೀರ್ವಾದ ಇದ್ದರೇ ಎಲ್ಲವೂ ಸಲೀಸಾಗುತ್ತೆ ಎಂದು ನಂಬುವ ಅದೆಷ್ಟೋ ಅಭಿಮಾನಿಗಳು ದರ್ಶನ್ ಅವರನ್ನು ದೇವರಂತೆ ಕಾಣುತ್ತಾರೆ. ಇದೀಗ ದೇವರ ಕಾರ್ಯಕ್ಕೆಂದು ತೆರಳುವ ಭಕ್ತಾದಿಗಳು ಕೂಡ ದರ್ಶನ್ ಅವರನ್ನು ಭೇಟಿ ಆಗಿ ತೆರಳಿರುವ ಸಂಗತಿ ಯೊಂದು ನಡೆದಿದೆ.

ಎಷ್ಟೇ ಭಕ್ತರು ಬಂದರೂ ಮಾತನಾಡಿಸಿ ಕಳುಹಿಸ್ತಾರೆ ದಾಸ
ದರ್ಶನ್ ಅವರಿಗೆ ಅಭಿಮಾನಿ ಬಳಗ ತುಂಬಾನೆ ಹೆಚ್ಚು, ಒಳ್ಳೆ ಕಾರ್ಯವನ್ನು ಮಾಡುವಾಗ ದರ್ಶನ್ ಫೊಟೋ ಇಟ್ಟು ಆಶಿರ್ವಾದ ಪಡೆದಿರೋದನ್ನು ನಾವು ಈ ಹಿಂದೆ ನೋಡಿದ್ದೇವೆ. ಇದೀಗ ಅಯ್ಯಪ್ಪ ಸ್ವಾಮಿಯ ಭಕ್ತರು ಕೂಡ ದರ್ಶನ್ ಅವರನ್ನು ನೋಡಿ ಶಬರಿ ಮಲೆ ಯಾತ್ರೆ ಮಾಡಲು ಮುಂದಾಗಿದ್ದಾರೆ. ಹೌದು ದರ್ಶನ್ ಅಭಿಮಾನಿಗಳು ಅಯ್ಯಪ್ಪ ಸ್ವಾಮಿ ವ್ರತವನ್ನು ಮಾಡಿದ್ದು, ಮಲೆಗೆ ಹೋಗೋದಕ್ಕೂ ಮುಂಚೆ ದರ್ಶನ್ ಅವರನ್ನು ಭೇಟಿಯಾಗಿ ಹೋಗಿದ್ದಾರೆ. ಈ ಭಕ್ತರು ಬಂದಿರುವ ವಿಚಾರ ತಿಳಿದು ಅವರನ್ನು ಕೆಲ ಹೊತ್ತು ಮಾತನಾಡಿಸಿರುವ ದರ್ಶನ್, ಖುಷಿಯಿಂದಲೇ ಅವರನ್ನು ಹರಸಿ ಶಬರಿ ಮಲೆ ಯಾತ್ರೆಗೆ ಒಳ್ಳೆದಾಗಲಿ ಎಂದು ಹೇಳಿ ಕಳುಹಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ಭಕ್ತ ಮೇಲೆ ಇದೆ ಅಪಾರ ಪ್ರೀತಿ !
ದರ್ಶನ್ ಕೇವಲ ಭಕ್ತಾದಿಗಳನ್ನು ಭೇಟಿ ಮಾಡಿಲ್ಲ. ಬದಲಾಗಿ ಅವರ ಬಳಿ ಕೆಲ ಹೊತ್ತು ಮಾತನಾಡಿಸಿ, ಏನಾದರು ಅಗತ್ಯ ಇದ್ದರೆ ತಿಳಿಸಿ ಎಂದಿದ್ದಾರೆ. ಅಷ್ಟೆ ಅಲ್ಲದೇ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಕೈಯಲ್ಲಿ ಆದಷ್ಟು ಹಣವನ್ನು ಕೊಟ್ಟು ಕಳುಹಿಸೋದು ವಾಡಿಕೆ. ಇದನ್ನು ಮರೆಯದ ದರ್ಶನ್ ಗುರು ಸ್ವಾಮಿಗಳ ಕೈನಲ್ಲಿ ಸಾಕಾಗುವಷ್ಟು ಹಣದ ನೆರವನ್ನು ಮಾಡಿದ್ದಾರೆ. ಈ ವಿಚಾರ ತಿಳಿದು ಅಭಿಮಾನಿಗಳು ಸಂತಸಗೊಂಡಿದ್ದು, ದರ್ಶನ್‌ರ ಈ ಕೆಲಸಕ್ಕೆ ಖುಷಿ ಯಾಗಿದ್ದಾರೆ.

ನೆನೆದಾಗೆಲ್ಲ ಮಲೆಗೆ ಹೋಗುವ ದರ್ಶನ್
ಈಗಾಗಲೇ ತಿಳಿದಿರುವಂತೆ ಕನ್ನಡದ ಪುನೀತ್, ನೆನಪಿರಲಿ ಪ್ರೇಮ್, ಶಿವರಾಜ್‌ಕುಮಾರ್, ಡಾ ರಾಜ್ ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವರು ಅಯ್ಯಪ್ಪ ಸ್ವಾಮಿ ನಂಟನ್ನು ಹೊಂದಿದ್ದಾರೆ. ಅಂತೆಯೇ ನಟ ದರ್ಶನ್ ಕೂಡ ಹಲವು ಬಾರಿ ತನ್ನ ಸ್ನೇಹಿತರೊಟ್ಟಿಗೆ ಸೇರಿ ಅಯ್ಯಪ್ಪ ಸನ್ನಿಧಿಗೆ ತೆರಳುತ್ತಾರೆ. ಅಷ್ಟೇ ಅಲ್ಲದೇ ಮಾಲೆ ಧರಿಸಿದ ಸಂದರ್ಭದಲ್ಲಿ ಎಷ್ಟೆಲ್ಲ ಕಟ್ಟುನಿಟ್ಟಾಗಿ ಮಡಿ ಮೈಲಿಗೆ ಎಲ್ಲಾ ನೋಡಿಕೊಂಡು ಇರಬೇಕೊ ಹಂಗೆ ನಿಯಮಗಳನ್ನು ಪಾಲಿಸುವ ದರ್ಶನ್, ಶಬರಿಮಲೆಗೆ ಯಾತ್ರೆ ಕೂಡ ಮಾಡುತ್ತಾರೆ. ಹೀಗಾಗಿ ಅಯ್ಯಪ್ಪ ಸ್ವಾಮಿ ಭಕ್ತರಮೇಲೆ ಅತೀ ಹೆಚ್ಚು ಪ್ರೀತಿ ಹೊಂದಿರುವ ದರ್ಶನ್, ಆದಷ್ಟು ಸಹಾಯ ಕೂಡ ಮಾಡುತ್ತಿದ್ದಾರೆ.


Click it and Unblock the Notifications











