Kaatera Trailer: ಛೇ.. 'ಕಾಟೇರ' ಟ್ರೈಲರ್‌ನಲ್ಲಿ ಮಿಸ್ ಆಗಿದ್ದೇನು?

ಸ್ಯಾಂಡಲ್‌ವುಡ್‌ನಲ್ಲಿ 'ಕಾಟೇರ' ಕ್ರೇಜ್ ಜೋರಾಗಿದೆ. ಈ ವಾರ 'ಸಲಾರ್' ಹಾಗೂ 'ಡಂಕಿ' ರೀತಿಯ ದೊಡ್ಡ ಸಿನಿಮಾಗಳು ಬಂದ್ರು ಮುಂದಿನ ವಾರ 'ಕಾಟೇರ'ನ ದರ್ಶನಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಚಿತ್ರದ ಟ್ರೈಲರ್ 17 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದುಕೊಂದು ಮುನ್ನುಗುತ್ತಿದೆ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಹಳ್ಳಿ ಸೊಗಡಿನ ಕಥೆಯನ್ನು ಕಟ್ಟಿಕೊಡಲಾಗಿದೆ. 70ರ ದಶಕದ ಕಥೆಯಲ್ಲಿ ಅಂದಿನ ರೈತರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಡೆದಿದೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್ ಅಭಿಮಾನಿಗಳ ಮನಗೆದ್ದಿದೆ.

Fans one thing missing from Darshans Kaatera trailer

ನಟ ದರ್ಶನ್‌ ಅವರನ್ನು ಬಹಳ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಅದರಲ್ಲೂ ಟ್ರೈಲರ್ ಕೊನೆಯಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ದರ್ಶನ್ ಎಂಟ್ರಿ ಅಭಿಮಾನಿಗಳಿಗೆ ಸಖತ್ ಮಜಾ ಕೊಡ್ತಿದೆ. ಯಾರೂ ಕೂಡ ಇದನ್ನು ಊಹಿಸಿರಲಿಲ್ಲ. ಚಿತ್ರದಲ್ಲಿ ಇಂತಹ ಸಾಕಷ್ಟು ಸರ್‌ಪ್ರೈಸ್ ಅಂಶಗಳಿವೆ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳ್ತಾ ಬರುತ್ತಿದ್ದಾರೆ.

ಇನ್ನು 'ಕಾಟೇರ' ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಸಣ್ಣದೊಂದು ನಿರಾಸೆ ಕಾದಿತ್ತು. ಭಾರೀ ಕುತೂಹಲ ಮೂಡಿಸಿದ್ದ ಅದೊಂದು ಅಂಶವನ್ನು ತರುಣ್ ಬೇಕಂತಲೇ ಟ್ರೈಲರ್‌ನಲ್ಲಿ ಮುಚ್ಚಿಟ್ಟಂತೆ ಕಾಣುತ್ತಿದೆ. ಅದು 'ಭಕ್ತಪ್ರಹ್ಲಾದ' ನಾಟಕದ ಪ್ರಸಂಗ. ಹೌದು. ಈ ಹಿಂದೆ ಈ ವಿಚಾರದ ಬಗ್ಗೆ ಸಾಕಷ್ಟು ಗುಸುಗುಸು ಕೇಳಿಬಂದಿತ್ತು. ನಟ ದರ್ಶನ್ ಹಿರಣ್ಯ ಕಶಿಪು ಅವತಾರದಲ್ಲಿ ಡೈಲಾಗ್ ಹೇಳಿದ್ದ ಸಣ್ಣದೊಂದು ವಿಡಿಯೋ ಕೂಡ ಲೀಕ್ ಆಗಿತ್ತು.

Fans one thing missing from Darshans Kaatera trailer

'ಕಾಟೇರ' ಟ್ರೈಲರ್‌ನಲ್ಲಿ ಈ ನಾಟಕ ಹಾಗೂ ದರ್ಶನ್ ಹಿರಣ್ಯ ಕಶಿಪು ಡೈಲಾಗ್ ಝಲಕ್ ಮಿಸ್ ಆಗಿದೆ. ತೆರೆಮೇಲೆ ನಿಜಕ್ಕೂ ಇದು ಅಭಿಮಾನಿಗಳಿಗೆ ಬಿಗ್‌ ಸರ್‌ಪ್ರೈಸ್ ಆಗಿರುತ್ತದೆ ಅನ್ನೋದು ಗೊತ್ತಾಗುತ್ತದೆ. ಕೆಲ ದಿನಗಳ ಹಿಂದೆ ಚಿತ್ರದಲ್ಲಿ ಕುಮಾರ್‌ ಗೋವಿಂದ್ ಪಾತ್ರ ಪರಿಚಯದ ಪೋಸ್ಟರ್ ರಿಲೀಸ್ ಆಗಿತ್ತು. ಆ ಪೋಸ್ಟರ್‌ನಲ್ಲಿ ಹಿಂದೆ ನಾಟಕದ ಪಾತ್ರಧಾರಿಯ ಕಟೌಟ್ ಹಾಕಿರುವುದನ್ನು ತೋರಿಸಲಾಗಿತ್ತು. ಅದನ್ನು ನೋಡಿದಾಗಲೇ ಚಿತ್ರದಲ್ಲಿ ನಾಟಕದ ಸನ್ನಿವೇಶ ಕೂಡ ಇರುತ್ತದೆ ಅನ್ನೋದು ಸ್ಪಷ್ಟವಾಗಿತ್ತು.

ಬಿಟಿವಿ ವಾಹಿನಿ ಸಂದರ್ಶನದಲ್ಲಿ ನಟ ಕುಮಾರ್ ಗೋವಿಂದ್ ಮಾತನಾಡುತ್ತಾ "ತರುಣ್ ಸರ್ ಬೇಸರ ಮಾಡಿಕೊಂಡರೂ ಪರವಾಗಿಲ್ಲ. ಒಂದು ವಿಚಾರ ಹೇಳುತ್ತೇನೆ. ಸಿನಿಮಾದಲ್ಲಿ ಹಿರಣ್ಯ ಕಶಿಪುದು ಒಂದು ಪಾತ್ರ ಬರುತ್ತದೆ. ಸ್ಟೇಜ್‌ ಮೇಲೆ ನಾವು ಪರ್ಫಾರ್ಮ್ ಮಾಡುವುದು ಇರುತ್ತದೆ. ಸಾವಿರಾರು ಜನ ಕೂತಿರುತ್ತಾರೆ. ಹಿರಣ್ಯ ಕಶಿಪು ಪಾತ್ರವನ್ನು ನಾನು ಮಾಡಿರ್ತೀನಾ? ಇಲ್ಲ ದರ್ಶನ್ ಅವ್ರು ಮಾಡಿರ್ತಾರಾ? ನೀವೇ ಊಹಿಸಿ" ಎಂದು ಹೇಳಿ ಸಸ್ಪೆನ್ಸ್ ಕ್ರಿಯೇಟ್ ಮಾಡಿದ್ದರು.

ಈ ಹಿಂದೆ ಲೀಕ್ ಆಗಿದ್ದ ವಿಡಿಯೋದಲ್ಲಿ ನಟ ದರ್ಶನ್ "ಅಥಳ ವಿತಳ ಪಾತಾಳ" ಎಂದು ಹೇಳುವ ಡೈಲಾಗ್ ವೈರಲ್ ಆಗಿತ್ತು. ಹಾಗಾಗಿ ಈ ನಾಟಕದ ಎಪಿಸೋಡ್ ಕೂಡ ಚಿತ್ರದ ಹೈಲೆಟ್ ಆಗಿರುತ್ತದೆ ಅನ್ನೋದು ಗೊತ್ತಾಗುತ್ತಿದೆ. ಡಿಸೆಂಬರ್ 29ಕ್ಕೆ ಪ್ರೇಕ್ಷಕರು ತೆರೆಮೇಲೆ ಅದನ್ನು ನೋಡಿ ಎಂಜಾಯ್ ಮಾಡಬೇಕು ಎನಿಸುತ್ತಿದೆ. ಟ್ರೈಲರ್‌ನಲ್ಲಿ ಅದರ ಝಲಕ್ ಇದ್ದಿದ್ದರೆ ಮತ್ತಷ್ಟು ಕಿಕ್ ಕೊಡುತ್ತಿತ್ತು.

ಅಂದಹಾಗೆ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಶನಿವಾರ ಮಂಡ್ಯದಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ಅದೇ ವೇದಿಕೆಯಲ್ಲಿ ಚಿತ್ರದ 3ನೇ ಹಾಡು ಬಿಡುಗಡೆಯಾಗಲಿದೆ. ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದೆ. ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಜಮಾಯಿಸುವ ನಿರೀಕ್ಷೆಯಿದೆ. ಈಗಾಗಲೇ ಕಾರ್ಯಕ್ರಮದ ಸಿದ್ಧತೆ ನಡೀತಿದೆ.

More from Filmibeat

English summary
Bhakta Prahlada drama sequence missing in Kaatera trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X