For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಹೆಸರು ಬಳಸಿ ಬೆಳೆದ ಇಬ್ಬರೂ ಇಂದು ಉಲ್ಟಾ ಹೊಡೆದಿದ್ದಾರೆ; ಸ್ಟಾರ್ ನಟರ ವಿರುದ್ಧ ಫ್ಯಾನ್ಸ್ ಕಿಡಿ!

  |

  ನಿನ್ನೆ ( ಸೆಪ್ಟೆಂಬರ್ 18 ) ಸಾಹಸಸಿಂಹ ವಿಷ್ಣುವರ್ಧನ್ ಅವರ 72ನೇ ಜನ್ಮದಿನವನ್ನು ಅವರ ಅಭಿಮಾನಿಗಳು ಅಭಿಮಾನ್ ಸ್ಟುಡಿಯೊದಲ್ಲಿರುವ ವಿಷ್ಣು ಪುಣ್ಯಭೂಮಿಯಲ್ಲಿ ಆಚರಿಸಿದರು. ಅಭಿಮಾನ್ ಸ್ಟುಡಿಯೊ ಮುಂಭಾಗ ಐವತ್ತು ಕಟ್‌ಔಟ್‌ಗಳನ್ನು ನಿಲ್ಲಿಸಿದ್ದ ವಿಷ್ಣು ಫ್ಯಾನ್ಸ್ ತಮ್ಮ ನೆಚ್ಚಿನ ನಟನಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಇನ್ನು ಪ್ರತೀ ವರ್ಷದಂತೆ ಈ ವರ್ಷದ ಹುಟ್ಟುಹಬ್ಬದಲ್ಲಿಯೂ ಸಹ ವಿಷ್ಣು ಅಭಿಮಾನಿಗಳಲ್ಲಿ ಅಸಾಮಾಧಾನವಿತ್ತು.

  ತಮ್ಮ ನೆಚ್ಚಿನ ನಟ ತಮ್ಮಿಂದ ದೂರಾಗಿ ಹನ್ನೆರಡು ವರ್ಷಗಳು ಕಳೆದರೂ ಸಹ ಇನ್ನೂ ಅವರ ಸ್ಮಾರಕ ನಿರ್ಮಾಣವಾಗಿಲ್ಲ ಎಂಬ ನೋವು ಈ ವರ್ಷದ ಹುಟ್ಟಹಬ್ಬದ ಆಚರಣೆ ನಡುವೆ ಕಾಡಿತ್ತು. ಇಷ್ಟು ವರ್ಷಗಳ ಕಾಲ ಬೇಡಿಕೆ ಇಟ್ಟರೂ ತಮ್ಮ ಬೇಡಿಕೆಗೆ ಸರಿಯಾದ ಪರಿಹಾರ ಸಿಗದ ಕಾರಣ ಈ ಬಾರಿ ವಿಷ್ಣು ಅಭಿಮಾನಿಗಳು ಸಾಹಸಸಿಂಹನ ಸ್ಮಾರಕ ನಿರ್ಮಿಸುವತ್ತ ಯೋಚಿಸದವರ ವಿರುದ್ಧ ಕಿಡಿಕಾರಿದ್ದಾರೆ.

  ತಮ್ಮ ನೆಚ್ಚಿನ ನಟನ ಹೆಸರನ್ನು ಬಳಸಿಕೊಂಡು ಬೆಳೆದವರ ವಿರುದ್ಧ ಕಿಡಿಕಾರಿದ ವಿಷ್ಣು ಅಭಿಮಾನಿಗಳು ಕಿಡಿಕಾರಿದ್ದು, ತಮ್ಮೊಳಗಿನ ಬೇಸರವನ್ನು ಹುಟ್ಟುಹಬ್ಬದ ಸಡಗರವನ್ನು ಸೆರೆಹಿಡಿಯಲು ಬಂದಿದ್ದ ಯುಟ್ಯೂಬ್ ಚಾನೆಲ್‌ಗಳ ಮುಂದೆ ತೋಡಿಕೊಂಡಿದ್ದಾರೆ.

  ಯಶ್ ವಿರುದ್ಧ ನೇರವಾಗಿ ಕಿಡಿ!

  ಯಶ್ ವಿರುದ್ಧ ನೇರವಾಗಿ ಕಿಡಿ!

  ನಟ ಯಶ್ ರಾಮಾಚಾರಿ ಸಿನಿಮಾ ಮೂಲಕ ಸ್ಟಾರ್ ಆದ್ರು, ಆ ಸಿನಿಮಾ ಮಾಡದೇ ಇದ್ದಿದ್ದರೆ ಇವತ್ತು ಯಶ್ ಕೆಜಿಎಫ್ ಮಾಡೋಕೂ ಆಗ್ತಾ ಇರಲಿಲ್ಲ, ಇಂಡಸ್ಟ್ರಿ ಹಿಟ್ ಕೊಡೋಕೂ ಆಗ್ತಾ ಇರಲಿಲ್ಲ, ಅವರು ಉದ್ಧಾರ ಆಗ್ತಾರಾ, ವಿಷ್ಣು ಸರ್ ಹುಟ್ಟುಹಬ್ಬಕ್ಕೆ ವಿಶ್ ಮಾಡಲ್ಲ, ಅವರ ಸಮಾಧ ಬಳಿ ಬರಲ್ಲ ಎಂದಮೇಲೆ ಅವರು ರಾಮಾಚಾರಿ ಸಿನಿಮಾ ಮಾಡಲೇಬಾರದಿತ್ತು ಎಂದು ಓಪನ್ ಆಗಿ ಕಿಡಿಕಾರಿದ್ದಾರೆ.

  ಸೈಮಾಗೆ ಹೋಗಿ ಹಾಯ್ ಬೈ ಅಂತಾರೆ ಅಷ್ಟೇ!

  ಸೈಮಾಗೆ ಹೋಗಿ ಹಾಯ್ ಬೈ ಅಂತಾರೆ ಅಷ್ಟೇ!

  ಇನ್ನೂ ಮುಂದುವರೆದು ಮಾತನಾಡಿದ ವಿಷ್ಣು ಫ್ಯಾನ್ಸ್ ಯಶ್ ಅವರಿಗೆ ಇಲ್ಲಿಗೆ ಬರೋಕೆ ಸಮಯ ಇಲ್ಲ, ಹುಟ್ಟುಹಬ್ಬಕ್ಕೆ ಪೋಸ್ಟ್ ಹಾಕೋಕೆ ಸಮಯ ಇಲ್ಲ, ಅದೇ ಸೈಮಾಗೆ ಹೋಗಿ ಹಾಯ್, ಬೈ ಅನ್ನೋಕೆ ಆಗುತ್ತೆ ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ದಾದಾ ಈ ರೀತಿ ಯಾರ ಹೆಸರನ್ನೂ ಬಳಸದೇ ಬೆಳೆದವರು, ಯಶ್ ರೀತಿ ಹೆಸರು ಬಳಸಿಕೊಳ್ಳಲಿಲ್ಲ ಎಂದು ಕಿಡಿಕಾರಿದ್ದಾರೆ.

  ಸುದೀಪ್ ವಿರುದ್ಧವೂ ಕಿಡಿ

  ಸುದೀಪ್ ವಿರುದ್ಧವೂ ಕಿಡಿ

  ವಿಷ್ಣು ಅಭಿಮಾನಿಯೋರ್ವರು ಯಶ್ ಹಾಗೂ ಕಿಚ್ಚ ಸುದೀಪ್ ಇಬ್ಬರ ವಿರುದ್ಧವೂ ಕಿಡಿಕಾರಿದ್ದು, ಒಬ್ರು ಎದೆ ಮೇಲೆ ಟ್ಯಾಟೂ ಹಾಕೊಂಡು ಬೆಳೆದರು, ಇನ್ನೊಬ್ರು ನಾನು ಸಿಂಹ ಅಭಿಮಾನಿ ಎಂದುಕೊಂಡು ಮೆರೆದರು, ಆದರೆ ಈ ಇಬ್ಬರೂ ಸಹ ಸ್ಮಾರಕ ವಿಚಾರವಾಗಿ ದನಿ ಎತ್ತಲಿಲ್ಲ ಎಂದು ಯಶ್ ಹಾಗೂ ಸುದೀಪ್ ಇಬ್ಬರ ವಿರುದ್ಧವೂ ಮಾತಿನ ಚಾಟಿ ಬೀಸಿದ್ದಾರೆ.

  ಬೊಮ್ಮಾಯಿ ಅವರಿಗೂ ಸಂದೇಶ

  ಬೊಮ್ಮಾಯಿ ಅವರಿಗೂ ಸಂದೇಶ

  ಇನ್ನು ಇದೇ ಸಂದರ್ಭದಲ್ಲಿ ಅಭಿಮಾನಿಯೋರ್ವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯ ಸಂದೇಶವನ್ನು ರವಾನಿಸಿದ್ದಾರೆ. ನೀವೇನಾದರೂ ವಿಷ್ಣು ಸ್ಮಾರಕ ನಿರ್ಮಿಸುವ ಕೆಲಸವನ್ನು ಆರಂಭಿಸಿದರೆ ಮುಂದಿನ ಸಲವೂ ನೀವೇ ಸಿಎಂ ಎಂದು ಭರವಸೆ ನೀಡಿದ್ದಾರೆ. ಈ ವಿಡಿಯೋ ತುಣುಕುಗಳು ಶಿವಲಿಂಗೇಗೌಡ ಓನ್ ವಿಡಿಯೋಸ್ ಯುಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿವೆ.

  English summary
  Fans anger against Yash for not Wishing Vishnuvardhan on his birth anniversary. Read on
  Monday, September 19, 2022, 18:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X