ಶಿವಣ್ಣನ 'ಭೈರತಿ ರಣಗಲ್' ಟ್ರೈಲರ್ ಲೀಕ್ ಆಯ್ತಾ? ಚಿಂದಿ ಅಂತಿದ್ದಾರೆ ಫ್ಯಾನ್ಸ್!

ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮತ್ತೊಮ್ಮೆ ಶಿವಣ್ಣನ ಮಾಸ್ ಅವತಾರ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಈಗಾಗಲೇ ಸಿನಿಮಾ ಪ್ರಮೋಷನ್ ಸ್ಪೀಡ್ ಹೆಚ್ಚಿಸಿದೆ ಚಿತ್ರತಂಡ. ಸದ್ಯ ಟ್ರೈಲರ್ ಲಾಂಚ್ ಸಮಯ ಹತ್ತಿರ ಬರ್ತಿದೆ.

'ಮಫ್ತಿ' ಪ್ರೀಕ್ವೆಲ್ ಆಗಿರುವ 'ಭೈರತಿ ರಣಗಲ್' ಭಾರೀ ನಿರೀಕ್ಷೆ ಮೂಡಿಸಿದೆ. ನಾಳೆ(ನವೆಂಬರ್ 05) ಅಧಿಕೃತವಾಗಿ ಟ್ರೈಲರ್ ಬಿಡುಗಡೆಗೂ ಮುನ್ನ ಲೀಕ್ ಆಗಿದೆ ಎನ್ನುವ ಚರ್ಚೆ ಶುರುವಾಗಿದೆ. ನೋಡಿದವರು ಚಿಂದಿ ಎಂದು ಕೊಂಡಾಡುತ್ತಿದ್ದಾರೆ. ಕೆಲವರು ಲಿಂಕ್ ಸಿಗದೇ ಬೇಸರಗೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಷಯ ಭಾರೀ ಟ್ರೆಂಡ್ ಆಗಿದೆ.

Fans react to allegedly leaked Shivarajkumar s Bhairathi Ranagal Movie trailer

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಅಡಿಯಲ್ಲಿ 'ಭೈರತಿ ರಣಗಲ್' ಸಿನಿಮಾ ನಿರ್ಮಾಣವಾಗಿದೆ. ಬಹಳ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಿಸಿರುವುದು ಟೀಸರ್ ನೋಡಿದರೆ ಅರ್ಥವಾಗುತ್ತದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು ದೇವರಾಜ್, ಅವಿನಾಶ್, ಛಾಯಾ ಸಿಂಗ್, ರಾಹುಲ್ ಬೋಸ್, ನಾನಾ ಪಾಟೇಕರ್ ತಾರಾಗಣದಲ್ಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ರವಿಬಸ್ರೂರು ಸಂಗೀತ ಚಿತ್ರಕ್ಕಿದೆ.

ವೃತ್ತಿಯಲ್ಲಿ ವಕೀಲನಾಗಿದ್ದ ಭೈರತಿ ರಣಗಲ್ ಯಾಕೆ ಮಾಫಿಯಾ ಡಾನ್ ಆಗಿ ಬದಲಾದ ಎನ್ನುವ ಕಥೆ ಈ ಚಿತ್ರದಲ್ಲಿದೆ. ಆಗಸ್ಟ್ 15ಕ್ಕೆ ತೆರೆಗೆ ಬರಬೇಕಿದ್ದ ಸಿನಿಮಾ ಮೂರು ತಿಂಗಳು ತಡವಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. 7 ವರ್ಷಗಳ ಹಿಂದೆ ಬಂದಿದ್ದ 'ಮಫ್ತಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಶಿವಣ್ಣ ಜೊತೆಗೆ ಶ್ರೀಮುರಳಿ ಕೂಡ ಅಬ್ಬರಿಸಿದ್ದರು. 'ಭೈರತಿ ರಣಗಲ್' ಸೆಕೆಂಡ್ ಹಾಫ್‌ನಲ್ಲಿ ಅಬ್ಬರಿಸಿದ್ದ. ಆದರೆ ಈ ಬಾರಿ ಇಡೀ ಸಿನಿಮಾ ಆವರಿಸಿಕೊಂಡು ಮನರಂಜನೆಯ ಹಬ್ಬದೂಟ ಬಡಿಸಲಿದ್ದಾನೆ.

Fans react to allegedly leaked Shivarajkumar s Bhairathi Ranagal Movie trailer

ಸದ್ಯ 'ಭೈರತಿ ರಣಗಲ್' ಬಗ್ಗೆ ಭಾರೀ ಚರ್ಚೆ ನಡೀತಿದೆ. ಟ್ರೈಲರ್ ಲೀಕ್ ಆಗಿದೆ ಎನ್ನುವುದು ಸುಳ್ಳು ಎನ್ನುವ ಮಾತುಗಳು ಕೇಳಬರ್ತಿದೆ. ಇನ್ನು ಈ ಬಗ್ಗೆ ನಿರ್ದೇಶಕ ನರ್ತನ್ ಅವರನ್ನು ಫಿಲ್ಮಿಬೀಟ್ ಸಂಪರ್ಕಿಸಿತ್ತು. ನನಗೆ ಗೊತ್ತಿಲ್ಲ, ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆ ಲಿಂಕ್ ಸಿಕ್ಕರೆ ನೋಡಿ ಹೇಳಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದೀನಿ. ಸದ್ಯಕ್ಕೆ ಕೊನೆ ಹಂತದ ಕೆಲಸಗಳು ನಡೀತಿದೆ. ನಾಳೆ ಆನ್‌ಲೈನ್‌ನಲ್ಲಿ ಟ್ರೈಲರ್ ರಿಲೀಸ್ ಆಗಲಿದೆ. ಯಾವುದೇ ಈವೆಂಟ್ ಇರಲ್ಲ ಎಂದು ತಿಳಿಸಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಭೈರತಿ ರಣಗಲ್' ರಿಲೀಸ್ ಪ್ಲ್ಯಾನ್ ನಡೀತಿದೆ. ಕನ್ನಡ ಸೇರಿದಂತೆ ಇನ್ನು 4 ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬರಲಿದ್ದು ತಮಿಳಿನಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ಶಿವಣ್ಣ ಡಬ್ಬಿಂಗ್ ಮಾಡಲಿದ್ದಾರೆ. 'ಮಫ್ತಿ' ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಆದರೆ ಯೂಟ್ಯೂಬ್‌ನಲ್ಲಿ ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಮುಖ್ಯವಾಗಿ ಹಿಂದಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿತ್ತು. ಹಾಗಾಗಿ ಪ್ರೀಕ್ವೆಲ್ ಅನ್ನು ಬೇರೆ ಭಾಷೆಗಳಿಗೂ ಡಬ್ ಮಾಡುವ ಪ್ರಯತ್ನ ನಡೀತಿದೆ.

ನಿರ್ದೇಶಕ ನರ್ತನ್ ಬರವಣಿಗೆ ಹಾಗೂ ಟೇಕಿಂಗ್ ಬಗ್ಗೆ ಬಹಳ ಭರವಸೆ ಇದೆ. ಅದೇ ಕಾರಣಕ್ಕೆ ಅಭಿಮಾನಿಗಳು ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಟ್ರೈಲರ್ ನೋಡಬೇಕು ಎಂದು ತುದಿಗಾಲಲ್ಲಿ ನಿಂತಿದ್ದಾರೆ. ನವೆಂಬರ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ. ಅದೇ ದಿನ ತಮಿಳಿನ 'ಕಂಗುವ' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಎರಡೂ ಚಿತ್ರಗಳ ನಡುವೆ ಬಾಕ್ಸಾಫೀಸ್‌ನಲ್ಲಿ ಪೈಪೋಟಿ ಗ್ಯಾರೆಂಟಿ ಎನ್ನಲಾಗ್ತಿದೆ.

More from Filmibeat

English summary
Is Shivarajkumar Starrer Bhairathi Ranagal trailer leaked hours before the official release?, director narthan reacts;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X